Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಕೃಷ್ಣಾಪುರ ಮಠದಿಂದ 50 ಸಾವಿರ ನಗದು ಕಳವು

ಉಡುಪಿ: ಉಡುಪಿಯ ಅಷ್ಠ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದಿಂದ 50 ಸಾವಿರಕ್ಕೂ ಮಿಕ್ಕಿ ನಗದು ಹಣ ಕಳವಾದ ಪ್ರಕಣ ಎರಡು ವಾರದ ಹಿಂದೆ ನಡೆದಿದೆ.

ನಗದು ಹಣ ಕಳವಾದ ಬಗ್ಗೆ ಮಠಾಧೀಶರು ಉಡುಪಿ ನಗರ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಎರಡೆರಡು ಬಾರಿ ಮಠಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಿಖಿತ ದೂರು ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳು ಕೇಳಿಕೊಂಡಾಗ, ಮಠದ ಮ್ಯಾನೇಜರ್ ಲಿಖಿತ ದೂರು ಬರೆದು ಕೊಡಲು ಹಿಂದೇಟು ಹಾಕಿದ ವಿದ್ಯಾಮಾನ ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.

ಕೃಷ್ಣಾಪುರ ಮಠಾಧೀಶರು ಲಿಖಿತ ದೂರು ನೀಡಲು ಒಪ್ಪಿಕೊಂಡಿದ್ದು, ಬರೆದು ಕೊಡುವಂತೆ ಮಠದ ಮ್ಯಾನೇಜರ್ ಗೆ ಸೂಚಿಸಿದ್ದಾರೆ. ಆದರೆ, ಮ್ಯಾನೇಜರ್ ಮಾತ್ರ ಅದು ಇದು ನೆಪಗಳನ್ನು ಹೇಳಿಕೊಳ್ಳುತ್ತಾ ಲಿಖಿತ ದೂರು ನೀಡಲು ಹಿಂದೇಟು ಹಾಕಿದ ಕಾರಣ, ಪೊಲೀಸ್ ಅಧಿಕಾರಿಗಳ ತನಿಖಾ ಪ್ರಕ್ರಿಯೆಗೆ ಅಡ್ಡಿಯಾಯಿತು ಎನ್ನಲಾಗಿದೆ.

ಮಠದ ಒಳಗಿನಿಂದ ಯಾರೋ ಅಪರಿಚಿತರು ನಗದು ಹಣ ಕಳವು ಮಾಡಿದ್ದಲ್ಲ. ಮಠದ ಜೊತೆಗೆ ಸಂಪರ್ಕ, ಸಂಬಂಧ ಇರುವವರೇ ಕಳವು ಮಾಡಿದ್ದಾರೆ. ನಗದು ಹಣ ಕಳವು ಮಾಡಿದ ಈ ವ್ಯಕ್ತಿಗೆ ಮಠದ ಒಳಗಿರುವ ದುಷ್ಠ ಶಕ್ತಿಗಳೇ ಕಳವು ಕೃತ್ಯಕ್ಕೆ ಸಲಹೆ, ಸೂಚನೆ, ಮಾರ್ಗದರ್ಶನ ಮಾಡಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಮಠದ ಸ್ವಾಮೀಜಿಗಳು ಸರಳ, ಸಜ್ಜನ, ಮೃದು ಸ್ವಭಾವದ ವ್ಯಕ್ತಿತ್ವದವರಾಗಿದ್ದು, ಇದರ ದುರ್ಲಾಭವನ್ನು ಮಠದೊಳಗಿನ ದುಷ್ಠ ಶಕ್ತಿಗಳು ತಮ್ಮ ಸ್ವಾರ್ಥ ಲಾಭಕ್ಕೆ ದುರುಪಯೋಗಪಡಿಸಿಕೊಂಡರೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *