Realtime blog statisticsweb statistics
udupibits.in
Breaking News
# ಶೃಂಗೇರಿ ಜಗದ್ಗುರುಗಳ ನೇತೃತ್ವದ ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯದಂತೆ ಅತ್ಯಾಚಾರ, ಅನೈತಿಕ ಸಂಬಂಧದ ಆರೋಪವಿರುವ ಮಠಾಧಿಪತಿಗಳನ್ನು ಸಭಾದಿಂದ ಕೈಬಿಡಲಾಗಿದೆ. ಆದುದರಿಂದ, ಅಂಥ ಮಠಾಧೀಶರನ್ನು ಯಾರೂ ಬೆಂಬಲಿಸಬಾರದು. – ಅಖಿಲ ಹವ್ಯಕ ಒಕ್ಕೂಟ.

ಮೈಸೂರು: ಮಾಹಿತಿ ಹಕ್ಕು ಕಾರ್ಯಕರ್ತ ಚನ್ನವೀರ ನಾಯಕ ಕೊಲೆಯತ್ನ- ಖಂಡನೆ

ಉಡುಪಿ: ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದಲ್ಲಿ ತಂಡವೊಂದು ಮಾಹಿತಿ ಹಕ್ಕು ಕಾರ್ಯಕರ್ತ ಚನ್ನವೀರ ನಾಯಕ ಎಂಬವರ ಕೊಲೆಗೆ ಯತ್ನಿಸಿದ ಘಟನೆ ಮಾರ್ಚ್ 5ರಂದು ರಾತ್ರಿ ನಡೆದಿದೆ.

ಚನ್ನವೀರ ನಾಯಕ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಮಾರ್ಚ್ 5ರ ರಾತ್ರಿ 10.20ರ ಸುಮಾರಿಗೆ ಕೋಣನಹೊಸಹಳ್ಳಿ ಗ್ರಾಮದಲ್ಲಿರುವ ತನ್ನ ಮನೆಗೆ ಬರುತ್ತಿರುವಾಗ ಮನೆ ಬಳಿ ಕೊಲೆ ಮಾಡುವ ಉದ್ಧೇಶದಿಂದ ಪೂರ್ವ ಸಂಚು ನಡೆಸಿ ಕಾದುಕುಳಿತಿದ್ದ ತಂಡ ನೀನು ಆರ್.ಟಿ.ಐ ಕಾರ್ಯಕರ್ತನಾ, ಸಮಾಜ ಸೇವಕನ ಎಂದು ಪ್ರಶ್ನಿಸುತ್ತಾ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿತು ಎಂದು ದೂರಲಾಗಿದೆ.

ಈ ಬಗ್ಗೆ, ಚನ್ನವೀರ ನಾಯಕ ಅವರು ಕಟ್ಟ ನಾಯಕ, ಸ್ವಾಮಿ ನಾಯಕ, ಪುಟ್ಟ ನಾಯಕ, ಲೋಕೇಶ್ ನಾಯಕ ಹಾಗೂ ಇತರರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿರುದ್ಧ 341, 504, 323, 506, r/w 34 ಐಪಿಸಿಯಂತೆ ಮೊಕದ್ದಮೆ (110/17) ದಾಖಲಿಸಿಕೊಂಡಿದ್ದಾರೆ.

ಚನನ್ನವೀರ ನಾಯಕ ಅವರ ಕೊಲೆ ತ್ನ ಪ್ರಕರಣವನ್ನು ಮಾಹಿತಿ ಹಕ್ಕು ಕಾರ್ಯಕರ್ತರು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಾದ ಚನ್ನವೀರ ನಾಯಕ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

 

 

Leave a Reply

Your email address will not be published. Required fields are marked *