Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಕೆ.ಎಸ್.ಉಪಾಧ್ಯ ಆಯ್ಕೆ

ಉಡುಪಿ: ಉಡುಪಿ ನಗರದ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅರ್ಚಕ ಪ್ರತಿನಿಧಿಯಾಗಿ ‘ಅರ್ಚಕ ರತ್ನ’ ಕೆ. ಶ್ರೀಶ ಉಪಾಧ್ಯ ಅವರು ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿದ್ದ ಕಡಿಯಾಳಿ ಗೋಪಾಲಕೃಷ್ಣ ಉಪಾಧ್ಯ ಅವರು ಮಾರ್ಚ್ 4ರಂದು ನಿಧನರಾದ ಕಾರಣದಿಂದ ಕಾಲಿ ಬಿದ್ದಿದ್ದ ಸದಸ್ಯತನಕ್ಕೆ ಕೆ.ಶ್ರೀಶ ಉಪಾಧ್ಯರನ್ನು ಆಯ್ಕೆಮಾಡಲಾಗಿದೆ.

ಕಡಿಯಾಳಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ಕಡಿಯಾಳಿ ಶ್ರೀಶ ಉಪಾಧ್ಯ ಅವರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ (ರಿ) ರಾಜ್ಯ ಸಮಿತಿಯ ನಿರ್ದೇಶಕರೂ, ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಯವರೂ ಆಗಿದ್ದಾರೆ.

ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರೂ ಆದ ಕೆ.ಶ್ರೀಶ ಉಪಾಧ್ಯರವರು, ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದವರು. www.udupibits.in ಸಂಸ್ಥೆಯು ಕೊಡಮಾಡಿದ 2016ನೇ ಸಾಲಿನ ‘ಶತಮಾನದ ಶಕ್ತಿ’ ಗೌರವಕ್ಕೂ ಪಾತ್ರರಾಗಿದ್ದ ಕೆ.ಶ್ರೀಶ ಉಪಾಧ್ಯ ಅವರು, ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದುದಕ್ಕೆ ಅರ್ಚಕರು, ಆಗಮಿಕರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *