Realtime blog statisticsweb statistics
udupibits.in
Breaking News
ಉಡುಪಿ: ಶಿರೂರು ಸ್ವಾಮೀಜಿ ವಿಧಿವಶ: ದೇಹದಲ್ಲಿ ವಿಶದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಶಂಕೆ- ಉನ್ನತ ತನಿಖೆಗೆ ಒತ್ತಾಯ

ಎಪ್ರೀಲ್ 12-18: ಕಡಿಯಾಳಿ ಮಹಿಷಮರ್ದಿನೀ ದೇವಿಯ ಮಹಾರಥೋತ್ಸವ, ಅನ್ನಸಂತರ್ಪಣೆ, ವ್ಯಾಘ್ರಚಾಮುಂಡಿ ಇತರ ಗಣಗಳ ನೇಮೋತ್ಸವ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ವಾಷಿಱಕ ಮಹಾರಥೋತ್ಸವವು ಸಾರ್ವಜನಿಕ ಅನ್ನಸಂತರ್ಪಣೆ, ನೇಮೋತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎಪ್ರೀಲ್ 12ರಿಂದ 18ರ ವರೆಗೆ ನಡೆಯಲಿದೆ.

ಎಪ್ರೀಲ್ 12ರಂದು ಪ್ರಾರ್ಥನೆ, ಗಣಯಾಗ, ಅಂಕುರಾರೋಹಣ, 13ರಂದು ಪ್ರಾತಃಕಾಲ 7.20ಕ್ಕೆ ಧ್ವಜಾರೋಹಣ, ಸಂಜೆ ಬಡಗು ಸವಾರಿ, ಬಲಿ, ವಾಹನೋತ್ಸವ, ರಂಗಪೂಜೆ, ದೀಪಾರಾಧನೆ, 14ರಂದು ಬೆಳಿಗ್ಗೆ ಬೆಳಿಗ್ಗೆ 8.30ಕ್ಕೆ ಯುಗಾದಿ ಉತ್ಸವ, ಸಂಜೆ ಮೂಡು ಸವಾರಿ, ವಾಹನೋತ್ಸವ, 15ರಂದು ಬೆಳಿಗ್ಗೆ 8.15ಕ್ಕೆ ಶಿಖರ ಪೂಜೆ, ವಾರ್ಷಿಕ ಬ್ರಹ್ಮಕಲಶ, ಪ್ರಧಾನ ಹೋಮ, 108 ಕಲಶಾಭಿಷೇಕ, 10.30ಕ್ಕೆ ಮಹಾಪೂಜೆ, 11.40ಕ್ಕೆ ರಥಾರೋಹಣ, ಮಧ್ಯಾಹ್ನ ಬ್ರಾಹ್ಮಣ ಸುವಾಸಿನಿ ಆರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 8ಕ್ಕೆ ಮಹಾರಥೋತ್ಸವ, ಭೂತ ಬಲಿ, 16ರಂದು ಬೆಳಿಗ್ಗೆ 6.50ಕ್ಕೆ ಕವಾಟೋದ್ಘಾಟನೆ, ತುಲಾಭಾರ, ಸಂಜೆ ಪಡು ಸವಾರಿ, ಅವಭೃತ ಸ್ನಾನ, ವಾಹನೋತ್ಸವ, ಧ್ವಜವರೋಹಣ, ಯಾಗ ಪೂರ್ಣಾಹುತಿ, ಮಹಾಮಂತ್ರಾಕ್ಷತೆ, 17ರಂದು ಸಂಪ್ರೋಕ್ಷಣೆ, ರಾತ್ರಿ ದೇವಿಯ ಗಣಗಳ ಆರಾಧನೆ, 18ರಂದು ಸಂಜೆ ಸಗ್ರಿ ಗುಡ್ಡೆಯಲ್ಲಿರುವ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಬೊಬ್ಬರ್ಯ, ನಂದಿಕೋಣ, ಕ್ಷೇತ್ರಪಾಲ ಇತ್ಯಾದಿ ಗಣಗಳ ನೇಮೋತ್ಸವವು ಜರುಗಲಿದೆ.

ಎಪ್ರೀಲ್ 7ರಿಂದ ಪ್ರತೀ ದಿನ ಸಂಜೆ 7ಕ್ಕೆ ಶ್ರೀ ಮಹಿಷಮರ್ದಿನೀ ಭಜನಾ ಮಂಡಳಿಯಿಂದ ನಗರ ಭಜನೆ, ಮತ್ತು ಎಪ್ರೀಲ್ 11ರ ಬೆಳಿಗ್ಗೆ 6.20ರಿಂದ 12ರ ಬೆಳಿಗ್ಗೆ 6.20ರ ವರೆಗೆ ವಿವಿಧ ಭಜನಾ ಮಂಡಳಿಯವರಿಂದ ಏಕಾಹ ಭಜನೆ ನಡೆಯಲಿದೆ.

ಭಕ್ತಾಮಹಾಶಯರು ಮಹೋತ್ಸವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಶ್ರೀನಿವಾಸ ಹೆಬ್ಬಾರ್, ಸದಸ್ಯರಾದ ಕೆ.ಶ್ರೀಶ ಉಪಾಧ್ಯ (ಪ್ರಧಾನ ಅರ್ಚಕರು), ಶ್ರೀನಿವಾಸ ರಾವ್ (ಪುಟ್ಟ), ಶ್ರೀಮತಿ ಸಹನಾ ಎಲ್. ಭಟ್, ಶ್ರೀಮತಿ ಆಶಾ ಶ್ರೀನಿವಾಸ್, ಸದಾಶಿವ ದೂಮಣ್ಣ ಶೆಟ್ಟಿ, ಶಿವಕುಮಾರ್, ಕೆ.ಭೋಜ ಶೇರಿಗಾರ್ ಹಾಗೂ ಗಿರೀಶ್ ನಾಯ್ಕ ಅವರು ವಿನಂತಿಸಿದ್ದಾರೆ.

 

Leave a Reply

Your email address will not be published. Required fields are marked *