Realtime blog statisticsweb statistics
udupibits.in
Breaking News
# ದೂರು ನೀಡಿ ವರ್ಷಗಳೇ ಕಳೆದರೂ, ಆರಂಭವಾಗದ ವಿಚಾರಣೆ: ಕರ್ನಾಟಕ ಮಾಹಿತಿ ಆಯೋಗದ ನಿಧಾನಗತಿ ವಿರುದ್ಧ RTI ಕಾರ್ಯಕರ್ತ ಶ್ರೀರಾಮ ದಿವಾಣರಿಂದ ಮುಖ್ಯ ಮಾಹಿತಿ ಆಯುಕ್ತರಿಗೆ ದೂರು.

ಕೆ.ಎಸ್.ಉಪಾಧ್ಯ, ಬಿಪಿನ್ ಚಂದ್ರಪಾಲ್ ಸಹಿತ ನಾಲ್ವರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ನೇಮಕ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅನುವಂಶಿಕ ಪ್ರಾಧಾನ ಅರ್ಚಕರೂ, ಆಗಮ ಪಂಡಿತರೂ ಆದ ಉಡುಪಿ ಲಕ್ಷ್ಮೀಂದ್ರನಗರ ನಿವಾಸಿ ಕಡಿಯಾಳಿ ಶ್ರೀಶ ಉಪಾಧ್ಯ (ಕೆ.ಎಸ್.ಉಪಾಧ್ಯ) ಅವರನ್ನು ಕರ್ನಾಟಕ ಸರಕಾರವು  ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರನ್ನಾಗಿ ನೇಮಕಮಾಡಿ ಆದೇಶ ಹೊರಡಿಸಿದೆ.

2015ರಲ್ಲಿಯೇ ಜಿಲ್ಲಾ ಧಾರ್ಮಿಕ ಪರಿಷತ್ತು ಅಸ್ತಿತ್ವಕ್ಕೆ ಬಂದಿತ್ತಾದರೂ, ನಾಲ್ಕು ಸ್ಥಾನಗಳು ಕಾಲಿ ಉಳಿದಿತ್ತು. ಇದೀಗ ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಡುಪಿಯ ಕೆ.ಎಸ್.ಉಪಾಧ್ಯ, ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಿವಾಸಿ ಬಿಪಿನ್ ಚಂದ್ರಪಾಲ್, ತೆಳ್ಳರೆ ರಸ್ತೆಯ ನಿವಾಸಿ ಬಿ.ಕೃಷ್ಣಮೂರ್ತಿ ಶೇರಿಗಾರ್ ಹಾಗೂ ಕುಂದಾಪುರ ತಾಲೂಕು ಅಮಾವಾಸ್ಯೆ ಬೈಲು ನಿವಾಸಿ ತಮ್ಮಯ್ಯ ನಾಯ್ಕ ಅವರನ್ನು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರೂ ಆಗಿರುವ ‘ಅರ್ಚಕ ರತ್ನ’ ಕೆ. ಶ್ರೀಶ ಉಪಾಧ್ಯ ಅವರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ (ರಿ) ರಾಜ್ಯ ಸಮಿತಿಯ ನಿರ್ದೇಶಕರು, ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರೂ ಆಗಿರುವ ಕೆ.ಶ್ರೀಶ ಉಪಾಧ್ಯರವರು, ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದವರು. ಇವರನ್ನು www.udupibits.in ಸಂಸ್ಥೆಯು 2016ನೇ ಸಾಲಿನ ‘ಶತಮಾನದ ಶಕ್ತಿ’ ಎಂದು ಗುರುತಿಸಿ ಗೌರವಿಸಿತ್ತು.

 

Leave a Reply

Your email address will not be published. Required fields are marked *