Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೂಡುಬೆಳ್ಳೆ ಶಾಲೆಯಲ್ಲಿ ಮಕ್ಕಳಿಂದ ಬರಿಗೈಯಲ್ಲಿ ಶೌಚಾಲಯ ಕ್ಲೀನಿಂಗ್: ಗ್ರಾಮ ಸಭೆಯಲ್ಲಿ ತೀವ್ರ ಆಕ್ಷೇಪ

ಉಡುಪಿ: ಮೂಡುಬೆಳ್ಳೆಯ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಎಳೆಯ ಮಕ್ಕಳಿಂದ ಶಿಕ್ಷಕರ ಹಾಗೂ ಮಕ್ಕಳು ಬಳಸುವ ಶೌಚಾಲಯಗಳನ್ನು ತೊಳೆಸುವುದರ ಬಗ್ಗೆ ಮಾರ್ಚ್ 27ರಂದು ನಡೆದ ಬೆಳ್ಳೆ ಗ್ರಾ.ಪಂ. ಗ್ರಾಮ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಪೋಷಕರಾದ ಸುಧಾಕರ ಪಾಣಾರಾ ಅವರು ಈ ಬಗ್ಗೆ  ಗ್ರಾಮ ಸಭೆಯಲ್ಲಿ ದೂರು ಸಲ್ಲಿಸಿದರು. ಇದಕ್ಕೆ ತತ್‍ಕ್ಷಣ ಸ್ಪಂದಿಸಿದ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಪಾಧ್ಯಕ್ಷ ಹರೀಶ್ ಶೆಟ್ಟಿ ಅವರೂ ಸ್ಪಂದನೆ ನೀಡಿದರು.

ಗ್ರಾಮ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದ ಬಳಿಕ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ವಂ| ಕ್ಲೆಮೆಂಟ್ ಮಸ್ಕರೇನಸ್ ಹಾಗೂ ಚರ್ಚ್ ಪಾಲನೆ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಜತೆಗೆ ಜತೆ ಕಾರ್ಯದರ್ಶಿಗಳು ಇನ್ನು ಮುಂದೆ ಮಕ್ಕಳಿಂದ ಶೌಚಾಲಯ ತೊಳೆಸುವುದು ಪುನರಾವರ್ತನೆ  ಆದಲ್ಲಿ ತನಗೆ ನೇರವಾಗಿ ದೂರು ನೀಡುವಂತೆ ಮಕ್ಕಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ  ವೇಳೆ ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಮಾರ್ಚ್ 30ರಂದು ದಲಿತ ಸಂಘಟನೆ ಪ್ರಮುಖರು ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಂದ ಶೌಚಾಲಯ ತೊಳೆಸುತ್ತಿರುವುದರ ವಿರುದ್ಧ ಮುಖ್ಯೋಪಾಧ್ಯಾಯರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಸಂಘಟನೆಯ ವತಿಯಿಂದ ಈ ಬಗ್ಗೆ ಮಕ್ಕಳ ಹಕ್ಕು ರಕ್ಷಣ ಆಯೋಗಕ್ಕೆ ದೂರು ನೀಡುವ ಸಾಧ್ಯತೆಯೂ ಇದೆ.

 

One Comment

 1. Praneethdsouza@gmail.com'

  Praneeth dsouza

  March 29, 2017 at 11:47 pm

  If there was no head master then who the he’ll taken that dicition.?
  How dare to do this.
  Stupid. If they want to clean toilet by kids then first call their own children to clean up.

Leave a Reply

Your email address will not be published. Required fields are marked *