Realtime blog statisticsweb statistics
udupibits.in
Breaking News
ಉಡುಪಿ: ಆಮಂತ್ರಣ ಮತ್ತು ಪತ್ರ ವ್ಯವಹಾರಗಳಲ್ಲಿ ‘ಪ್ರಭಾರ ಪ್ರಾಂಶುಪಾಲರು’ ಎಂದು ಬರೆಯಲು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಿಗೆ ಇಲಾಖಾ ಉಪನಿರ್ದೇಶಕರಿಂದ ಆದೇಶ

ಬಹುಕೋಟಿ ಭೂಹಗರಣ: ಎಸಿ ಕೋರ್ಟಿನಲ್ಲಿ ವಿಚಾರಣೆ ನಡೆಸಲು ಡಿಸಿ ಆದೇಶ

ಉಡುಪಿ: ಮಕ್ಕಳಿಲ್ಲದ ಮಹಿಳೆಯೊಬ್ಬರು ವೀಲುನಾಮೆ ಮೂಲಕ ಸರಕಾರಕ್ಕೆ ದಾನಮಾಡಿದ ಭೂಮಿಯನ್ನು ಉಡುಪಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಎಂಟು ಮಂದಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಸಂತತಿ ನಕ್ಷೆ, ಆರ್.ಟಿ.ಸಿ. ಮತ್ತು ಖಾತೆ ಮಾಡಿಸಿಕೊಟ್ಟ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಹಾಯಕ ಕಮಿಷನರ್ ರವರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸುವಂತೆ ಉಡುಪಿ ಜಿಲ್ಲಾಧಿಕಾರಿಯವರು ಮೇ 3ರಂದು ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ರವರಿಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಹಗರಣಕ್ಕೆ ಸಂಬಧಪಟ್ಟಂತೆ ಮೊದಲ ಹಂತದ ತನಿಖೆ ನಡೆಸಿದ ಉಡುಪಿ ತಾಲೂಕು ತಹಶೀಲ್ದಾರ್ ಮಹೇಶ್ ಚಂದ್ರ ಅವರು ತನಿಖೆಯ ನಾಟಕ ನಡೆಸಿ, ಅಕ್ರಮವನ್ನು ಸಮರ್ಥಿಸಿ, ತಪ್ಪಿತಸ್ಥ ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳನ್ನು ರಕ್ಷಿಸಿ ಜನವರಿ 5ರಂದು ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಐಎಎಸ್ ಅವರಿಗೆ ತನಿಖಾ ವರದಿ ಸಲ್ಲಿಸಿದ್ದರು.

ಈ ತನಿಖಾ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಮೂಲ ವೀಲುನಾಮೆ, ನ್ಯಾಯಾಲಯದ ತೀರ್ಪು ಸಹಿತ ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಗಳು ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಫೆಬ್ರವರಿ 14ರಂದು ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದರು. ಈ ದೂರನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಎಸಿ ಕೋರ್ಟಿನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿದ್ದಾರೆ.

dc & ac

ಈ ತನಿಖಾ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಮೂಲ ವೀಲುನಾಮೆ, ನ್ಯಾಯಾಲಯದ ತೀರ್ಪು ಸಹಿತ ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಗಳು ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಫೆಬ್ರವರಿ 14ರಂದು ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದರು. ಈ ದೂರನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಎಸಿ ಕೋರ್ಟಿನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿದ್ದಾರೆ.

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿದ್ದ ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಎಂಬವರು ತಮಗೆ ಮಕ್ಕಳಾಗದ ಕಾರಣಕ್ಕೆ ತಮಗೆ ಸೇರಿದ ಸರ್ವೇ ನಂಬ್ರ 89/5, 89/10, 89/11ಎ ಮತ್ತು 89/11ಬಿ ಯಲ್ಲಿ ಬಾಡಿಗೆ ಮನೆಗಳು ಮತ್ತು ಮರಮಟ್ಟುಗಳಿದ್ದ 2.29 ಎಕರೆ ಭೂಮಿಯನ್ನು ಮೈಸೂರು ಸರಕಾರಕ್ಕೆ ಸೇರಿದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಗೆ ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಿಸುವರೇ ದಾನ ಮಾಡಿ ವೀಲುನಾಮೆ ಬರೆದಿರಿಸಿದ್ದರು. 1944ರ ಎಪ್ರಿಲ್ ಒಂದರಂದು ಬರೆದ ಈ ವೀಲುನಾಮೆಯ ಪ್ರತಿಯನ್ನು ಮಾಹಿತಿ ಹಕ್ಕು ಅಧಿನಿಯಮದಂತೆ ಪಡೆದುಕೊಂಡ ಶ್ರೀರಾಮ ದಿವಾಣ ಅವರು ಇದನ್ನು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು.

ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಅವರು 1965ರ ಜುಲೈ 14ರಂದು ನಿಧನರಾಗಿದ್ದು, ಇವರ ನಿಧನದ ಬಳಿಕ ಇವರ ಗಂಡ ತಾನೆಂದು ಹೇಳಿಕೊಂಡ ಎ.ಅಚ್ಚುತನ್ ಎಂಬವರು ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಇವರು ಬರೆದಿರಿಸಿದ ವೀಲುನಾಮೆಯನ್ನು ಅಸಿಂಧುಗೊಳಿಸುವಂತೆ ಕೋರಿ 1968ರಲ್ಲಿ ಉಡುಪಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಧೀಶರಾದ ಬಿ.ವಿಶ್ವನಾಥ ರೈ ಅವರು ಪ್ರಕರಣದ ವಿಚಾರಣೆ ನಡೆಸಿ, ಸರಕಾರಕ್ಕೆ ದಾನ ಮಾಡಿದ ಭೂಮಿ ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತವಾಗಿರುವುದರಿಂದ, ಅದನ್ನು ಪ್ರಶ್ನಿಸುವ ಹಕ್ಕು ಅಚ್ಚುತನ್ ರವರಿಗೆ ಇಲ್ಲವೆಂದು ಅಭಿಪ್ರಾಯಪಟ್ಟು, ವೀಲುನಾಮೆಯನ್ನು ಅಸಿಂಧುಗೊಳಿಸಲು ನಿರಾಕರಿಸಿ, ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರಕಾರವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ 1976ರಲ್ಲಿ ಆದೇಶಿಸಿದ್ದರು. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ವೈ.ಸಿ.ಎಸ್.ಹೆಗ್ಡೆ ಹಾಗೂ ಅಚ್ಚುತನ್ ಪರವಾಗಿ ಬಿ.ವೈ.ಹೊಳ್ಳ ಅವರು ವಾದಿಸಿದ್ದರು. ನ್ಯಾಯಾಲಯದ ಈ ತೀರ್ಪಿನ ಪ್ರತಿಯನ್ನು ಸಹ ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು.

ಮೂಡನಿಡಂಬೂರು ಗ್ರಾಮ ಕರಣಿಕ ಪುನೀತ್ ಎಸ್., ಉಡುಪಿ ಹೋಬಳಿ ಕಂದಾಯ ನಿರೀಕ್ಷಕ ಸುಧಾಕರ ಶೆಟ್ಟಿ, ಉಡುಪಿ ತಾಲೂಕು ಉಪ ತಹಶೀಲ್ದಾರ್ ಗೋಪಾಲ ಶೇರಿಗಾರ್, ತಹಶೀಲ್ದಾರರು, ಅಚ್ಚುತನ್ ರವರ ಪತ್ನಿ ಹಾಗೂ ಏಳು ಮಂದಿ ಮಕ್ಕಳು ಈ ಅಕ್ರಮ ಬಹುಕೋಟಿ ಭೂ ಹಗರಣದ ತಪ್ಪಿತಸ್ಥರಾಗಿದ್ದಾರೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಿಲಾಗಿದ್ದು, ಇವರುಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದರು.

ಹಗರಣಕ್ಕೆ ಸಂಬಂಧಪಟ್ಟಂತೆ ಶ್ರೀರಾಮ ದಿವಾಣ ಅವರು 2016ರ ನವೆಂಬರ್ 4ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಖುದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ.8ರಂದು ಜಿಲ್ಲಾಧಿಕಾರಿಗಳು ಕುಂದಾಪುರ ಸಹಾಯಕ ಕಮಿಷನರ್ ಅವರಿಗೆ ಆದೇಶಿಸಿದ್ದರು. ಸಹಾಯಕ ಕಮಿಷನರ್ ಅವರು ನ.24ರಂದು ಉಡುಪಿ ತಹಶೀಲ್ದಾರರಿಗೆ ಹಗರಣದ ಬಗ್ಗೆ ಖುದ್ದು ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಸಹಾಯಕ ಕಮಿಷನರ್ ಅವರ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಪ್ರಕರಣವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಅವರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ಪುನಃ ದೂರು ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಅವರು ಡಿಸೆಂಬರ್ 15ರಂದು ಪುನರಪಿ ತಹಶೀಲ್ದಾರ್ ರವರಿಗೆ ಪತ್ರ ಬರೆದು ಎರಡು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಎರಡನೇ ಬಾರಿ ಆದೇಶಿಸಿದ್ದರು.

ಮೂರು ದಿನದ ಬದಲು ಒಂದೂವರೆ ತಿಂಗಳ ಬಳಿಕ, ಸರಕಾರಕ್ಕೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಬದಲಾವಣೆ ಮಾಡಿ ಕೊಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿ, ಎಲ್ಲವೂ ಸರಿಯಾಗಿಯೇ ನಡೆದಿದೆ ಎಂದು ಸಮಜಾಯಿಷಿಕೆ ನೀಡಿ ವರದಿ ಸಲ್ಲಿಸುವ ಮೂಲಕ ತಹಶೀಲ್ದಾರರು ತಪ್ಪಿತಸ್ಥರನ್ನು ರಕ್ಷಿಸಿದ್ದರು.

ಅಕ್ರಮ ಎಸಗುವ ಸಂದರ್ಭದಲ್ಲಿ ಸರಕಾರಕ್ಕೆ ಸೇರಬೇಕಾದ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡ ದಿ.ಅಚ್ಚುತನ್ ರವರ ಪುತ್ರ ಅರವಿಂದ ಹಾಗೂ ಇತರರು, ಸಂತತಿ ನಕ್ಷೆ ಕೋರಿ ಭೂಮಿ ಕೇಂದ್ರಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮತ್ತು ಪಹಣಿ ಪತ್ರದಲ್ಲಿ ಹೆಸರು ಬದಲಾವಣೆ ಕೋರಿ ಕಂದಾಯ ಇಲಾಖೆಗೆ ಸಲ್ಲಿಸಿದ ಅರ್ಜಿಯಲ್ಲಿ ಮತ್ತು ಹೇಳಿಕೆಗಳಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದರು. ಮಾತ್ರವಲ್ಲ, ಅನೇಕ ಗೊಂದಲಗಳಿಂದ ಕೂಡಿದ ಹೇಳಿಕೆಯನ್ನು ನೀಡಿದ್ದರು. ಅರ್ಜಿದಾರರು ನೀಡಿದ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸದೆ, ವಂಚಕರಿಗೆ ಸಹಾಯ ಮಾಡುವ ಉದ್ಧೇಶದಿಂದ ತಹಶೀಲ್ದಾರ್ ಮಹೇಶ್ ಚಂದ್ರ ಅವರು ಸಹಾಯಕ ಕಮಿಷನರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಸಹ ಅದೇ ಸಾಲು ಸಾಲು ಗೊಂದಲಗಳನ್ನು ಉಳಿಸಿಕೊಂಡೇ ವರದಿಯನ್ನು ಸಲ್ಲಿಸಿದ್ದು, ಈ ಎಲ್ಲಾ ಗೊಂದಲಕಾರಿ ಮತ್ತು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಸಾಕ್ಷ್ಯಾಧಾರಗಳ ಸಹಿತ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ಅವರಿಗೆ ಬರೆದ ಪತ್ರದಲ್ಲಿ ಬಯಲುಪಡಿಸಿದ್ದರು.

kadabettu land

 

 

Leave a Reply

Your email address will not be published. Required fields are marked *