Realtime blog statisticsweb statistics
udupibits.in
Breaking News
ಮಾಹಿತಿ ಹಕ್ಕು ಪ್ರಕರಣ: ವಿಚಾರಣೆಗೆ ಖುದ್ದು ಹಾಜರಾಗಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ಆದೇಶ.

ಕುಸಿತದ ಭೀತಿಯಲ್ಲಿ ಆತ್ರಾಡಿ-ಬಜಪೆ ರಾಜ್ಯ ಹೆದ್ದಾರಿ: ಕಳಪೆ ಕಾಮಗಾರಿಯ ಕಾರಣ ರಸ್ತೆ ಬಿರುಕು !

ಉಡುಪಿ: ಬಹುಕೋಟಿ ಮತ್ತು ಮಹತ್ವಕಾಂಕ್ಷೆಯ ಆತ್ರಾಡಿ – ಬಜಪೆ ರಾಜ್ಯ ಹೆದ್ದಾರಿಯು ಕಳಪೆ ಕಾಮಗಾರಿಯಿಂದಾಗಿ ಕುಸಿತದ ಭೀತಿಯನ್ನು ಎದುರಿಸುತ್ತಿದೆ.

ಮೂಡುಬೆಳ್ಳೆ ಬಳಿಯ ನಾಲ್ಕುಬೀದಿಯಿಂದ ಶಿರ್ವ ಮಸೀದಿವರೆಗಿನ ರಸ್ತೆಯಲ್ಲಿನ ಡಾಮರೀಕರಣ ಕಾಮಗಾರಿ ಕಳಪೆಯಾಗಿರುವುದರಿಂದ ಡಾಮರು ರಸ್ತೆ ಅಲ್ಲಲ್ಲಿ ಬಾಯಿ ತೆರೆದುಕೊಂಡಿದ್ದು, ಯಾವುದೇ ಸಮಯ ಪೂರ್ಣ ಕುಸಿತಗೊಳ್ಳುವ ಅಪಾಯದ ಹಂತದಲ್ಲಿದೆ.

ಈ ರಸ್ತೆ, ಬಹಳಷ್ಟು ವಾಹನಗಳು ಸಂಚರಿಸುತ್ತಲೇ ಇರುವ ರಸ್ತೆಯಾಗಿದ್ದು, ರಸ್ತೆ ಬಿರುಕು ಬಿಟ್ಟಿರುವುದರಿಂದ ಯಾವುದೇ ಸಂದರ್ಭದಲ್ಲಿ ಇಲ್ಲಿ ವಾಹನಗಳು ಕೂಡಾ ರ್ಸತೆ ಸಹಿತ ಹುಗಿದುಹೋಗುವ ಅಥವಾ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ.

ಕೊಟ್ಯಂತರ ರು. ಮೊತ್ತದ ಪ್ರಮುಖ ರಾಜ್ಯ ಹೆದ್ದಾರಿಯ ಕಾಮಗಾರಿಯೇ ಕಳಪೆ ಕಾಮಗಾರಿಯಿಂದ ಕೂಡಿರುವುದು ಕೆಲವೊಂದು ಗಂಭೀರ ಅನುಮಾನಗಳಿಗೆ ಕಾರಣವಾಗಿದ್ದು, ಇಡೀ ರಸ್ತೆಯ ಬಾಳತನದ ಬಗ್ಗೆ ಶಂಕೆಗಳನ್ನು ಮೂಡಿಸದೆ.

ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದರಿಂದ ವಾಹನ ಚಾಲಕರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸಹ ಹೆದರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಆತ್ರಾಡಿ – ಬಜಪೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತ ಅಧಿಕಾರಿಗಳು ಸ್ಯಯಂಪ್ರೇರಿತರಾಗಿ ಕಳಪೆ ಕಾಮಗಾರಿಯ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *