Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 20 ಮಂದಿ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ವರ್ಗಾವಣೆ

ದಲಿತ ಯುವತಿಗೆ ಅವಮಾನಿಸಿದ ಗುರುವಿನಿಂದ ಕ್ಷಮೆ ಯಾಚನೆ !

ಮೂಡುಬೆಳ್ಳೆ: ದಲಿತ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಅವಮಾನಿಸಿದ ಗುರುವೊಬ್ಬರು, ಬಳಿಕ ಪ್ರಕರಣ ಗಂಭೀರತೆ ಪಡೆಯುವುದನ್ನು ಮನಗಂಡು ಯುವತಿಯ ಮನೆಗೆ ತೆರಳಿ ಕ್ಷಮೆ ಯಾಚಿಸಿ ಮುಖವುಳಿಸಿಕೊಂಡ ವಿದ್ಯಾಮಾನ ನಡೆದಿದೆ.

ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಯುವತಿ, ಕರ್ತವ್ಯ ನಿಮಿತ್ತ ಗುರುಗಳ ಕಚೇರಿಗೆ ತೆರಳಿದ್ದರು. ದಲಿತ ಯುವತಿಯನ್ನು ಕಂಡ ಕೂಡಲೇ ಕೆಂಡ ಮಂಡಲರಾದ ಗುರುಗಳು, ಕೂಡಲೇ ಆಕೆಯನ್ನು ಉದ್ಧೇಶಿಸಿ, ”ಅಲ್ಲೇ ನಿಲ್ಲು, ಒಳಗೆ ಬರಬೇಡ” ಎಂದು ಏರುಧ್ವನಿಯಲ್ಲಿ ಬೊಬ್ಬಿಟ್ಟಿದ್ದು, ಈ ಪ್ರಸಂಗದಿಂದ ಭಯಗೊಂಡ ಯುವತಿ ಗುರುಗಳ ವರ್ತನೆಯಿಂದ ಮನನೊಂದು ಸ್ಥಳದಿಂದ ವಾಪಾಸಾದರೆಂದುತಿಳಿದುಬಂದಿದೆ.

ಗುರುಗಳ ಕಚೇರಿ ಮುಂದೆ ನಡೆದ ಅಹಿತಕಾರಿ ಘಟನೆ ಬಗ್ಗೆ ಯುವತಿ ದಲಿತ ಮುಖಂಡರೊಬ್ಬರಲ್ಲಿ ವಿಷಯ ತಿಳಿಸಿ ಅಲವತ್ತುಕೊಂಡಿದ್ದರು. ಲಿಖಿತ ದೂರು ನೀಡಿದಲ್ಲಿ ಪ್ರಕರಣವನ್ನು ಮುಂದುವರಿಸುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗುರುಗಳ ಆಪ್ತರೊಬ್ಬರು, ತಕ್ಷಣವೇ ಗುರುಗಳಿಗೆ ಪ್ರಕರಣ ಗಂಭೀರತೆ ಪಡೆದುಕೊಳ್ಳುವ ಸಾಧ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಪರಿಣಾಮವಾಗಿ, ಕೂಡಲೇ ಗುರುಗಳು ಯುವತಿಯ ಮನೆಗೆ ತೆರಳಿ ನಡೆದ ಕಹಿ ಘಟನೆಗಾಗಿ ಕ್ಷಮೆ ಯಾಚಿಸಿದರೆನ್ನಲಾಗಿದೆ.

ಮಾಡಿದ ಮತ್ತು ಮಾಡಿರಬಹುದಾದ ತಪ್ಪಿಗೆ ಕ್ಷಮೆ ಯಾಚಿಸುವ ದಿನವೇ, ತಪ್ಪೆಸಗಿದ ಗುರುವೊಬ್ಬರು, ಯುವತಿಯ ಮನೆಗೆ ತೆರಳಿ ತಪ್ಪಿಗಾಗಿ ಕ್ಷಮೆಯಾಚಿಸಿದ್ದು ಕಾಕತಾಳೀಯವೇ ಸರಿ.

Leave a Reply

Your email address will not be published. Required fields are marked *