Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

‘ಬಹುತೇಕ ಹಿಂದುತ್ವವಾದಿಗಳಲ್ಲಿ ಇಲ್ಲದ ಮಾನಸಿಕತೆ, ಪೇಜಾವರ ಸ್ವಾಮಿಯವರಲ್ಲಿದೆ’

# ಗೆಳೆಯ ಬಶೀರ್ ಅವರು ಪೇಜಾವರ ಸ್ವಾಮಿಯವರು ನಡೆಸಿದ ಇಫ್ತಾರ್ ಕೂಟದ ಬಗ್ಗೆ ಭರವಸೆ ಮತ್ತು ನಿರೀಕ್ಷೆಯ ಮಾತುಗಳನ್ನು ಬರೆದಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆಯನ್ನು ಇಲ್ಲಿಯೂ ಹಾಕುತ್ತಿದ್ದೇನೆ.

ನಿಮ್ಮ ಆಲೋಚನೆ ಇಷ್ಟವಾಯಿತು. ಪೇಜಾವರ ಸ್ವಾಮಿಯವರು ವೈಯಕ್ತಿಕವಾಗಿ ಒಳ್ಳೆಯವರು, ಪರಿವರ್ತನೆಗಳನ್ನು ಮಾಡಿ ಎಂದು ಕೇಳಿದರೂ, ಮಾಡುವ ಮನಸು ಅವರಿಗಿದ್ದರೂ ಎಲ್ಲವನ್ನೂ ಒಮ್ಮೆಗೇ ಮಾಡಲು ಅವರಿರುವ ಸಿಸ್ಟಂ ಒಪ್ಪಲ್ಲ, ಈ ನೆಲೆಯಲ್ಲಿ ಇಫ್ತಾರ್ ಕೂಟ ತುಂಬಾನೆ ಸರಿ.

ಆದರೆ ವ್ಯಕ್ತಿ ಮತ್ತು ವ್ಯಕ್ತಿಯ ಸಂಬಂಧ, ವ್ಯಕ್ತಿ ಮತ್ತು ಸಮುದಾಯದ ಸಂಬಂಧ, ಸಮುದಾಯ ಮತ್ತು ಸಮುದಾಯದ ಸಂಬಂಧ ಎಂದು ಇರುತ್ತದೆ. ವ್ಯಕ್ತಿ-ವ್ಯಕ್ತಿಗಳ ಸಂಬಂಧದಲ್ಲಿ ಕರಾವಳಿಯಲ್ಲಿ ಹಿಂದೂ ಮುಸ್ಲಿಮರ ನಡುವೆ ಸ್ನೇಹ ಸಂಬಂಧವೇ ಇದೆ. ವ್ಯಕ್ತಿ-ಸಮುದಾಯದ ನಡುವಿನ ಸಂಬಂಧವೂ ತಕ್ಕಮಟ್ಟಿಗೆ ಚೆನ್ನಾಗೇ ಇದೆ. ಸಮಸ್ಯೆ ಇರುವುದು ಸಮುದಾಯ-ಸಮುದಾಯದ ಸಂಬಂಧವಾದಾಗ.

ಹಾಗಿರುವಾಗ ಪೇಜಾವರ ಸ್ವಾಮಿಯವರು ವ್ಯಕ್ತಿ-ಸಮುದಾಯದ ಸಂಬಂಧವನ್ನು ಇಫ್ತಾರ್ ಕೂಟದ ಮೂಲಕ ಸಾಂಕೇತಿಸಿದರು ನಿಜ. ಈ ಸಂಬಂಧ ಎಲ್ಲರಲ್ಲೂ ಇದೆ. ಸಾರ್ವಜನಿಕ ಸತ್ಯನಾರಾಯಣ ಪೂಜೆಗೆ ಹಣ ಕೊಡುವ ಮುಸ್ಲಿಮರು ಸಾಕಷ್ಟಿದ್ದಾರೆ. ಮುಸ್ಲಿಂ ಹಬ್ಬಗಳಿಗೆ ಹೋಗುವ, ತಮ್ಮ ಹಬ್ಬಗಳಿಗೆ ಮುಸ್ಲಿಮರನ್ನು ಆಹ್ವಾನಿಸುವ ಹಿಂದೂಗಳೂ ಇದ್ದಾರೆ. ಪೇಜಾವರ ಸ್ವಾಮಿಯವರೂ ಇದನ್ನೆ ಮತ್ತು ಇಷ್ಟನ್ನೆ ಮಾಡಿರುವುದು.

ಆದರೆ ಸಮುದಾಯ ಸಮುದಾಯವಾಗಿ ಹಿಂದೂ-ಮುಸ್ಲಿಮರಲ್ಲಿ ಸದ್ಭಾವನೆಯನ್ನು ತರುವುದು ಕರಾವಳಿಯ ಅಗತ್ಯತೆಯಾಗಿದೆ. ಈ ನೆಲೆಯಲ್ಲಿ ಪೇಜಾವರ ಸ್ವಾಮಿಯವರು, “ನೋಡ್ರಪಾ, ಮುಸ್ಲಿಮರ ಮೇಲೆ ಆರೋಪ ಹೊರಿಸಬೇಡಿ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಮಾತ್ರ ಹೇಳಿ” ಎನ್ನುವಂಥ ಸ್ಟ್ಯಾಂಡ್ ತೆಗೆದುಕೊಂಡದ್ದು ನನಗೆ ಗೊತ್ತಿಲ್ಲ. ನೀವು ಪತ್ರಕರ್ತರೆ ಇರುವುದರಿಂದ ಅಂಥ ಸ್ಟ್ಯಾಂಡ್ ಅನ್ನು ಅವರು ತೆಗೆದುಕೊಂಡ ಘಟನೆ ಇದ್ದರೆ ಬೆಳಕು ಚೆಲ್ಲಿ.

ಮುಂದಾದರೂ ಪೇಜಾವರ ಸ್ವಾಮಿಯವರಿಂದ ಇಂಥಾದ್ದನ್ನು ನಿರೀಕ್ಷಿಸಬಹುದು. ಏಕೆಂದರೆ ಬಹುತೇಕ ಹಿಂದುತ್ವವಾದಿಗಳಲ್ಲಿ ಇಲ್ಲದ ಒಂದು ಮಾನಸಿಕತೆ ಅವರಲ್ಲಿ ಇದೆ. ಕನಿಷ್ಠ ಪಕ್ಷ ಅಧಿಕಾರ ತಮ್ಮ ಕಡೆಯವರಲ್ಲಿ ಇದ್ದಾಗ ಅಧಿಕಾರದಲ್ಲಿರುವವರ ಬಗ್ಗೆ ಭಯಗೊಂಡಿರುವರನ್ನು ಹೆದರಿಸಲು ಹೋಗದೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಜ್ಞಾನ ಬಹುತೇಕ ಹಿಂದೂವಾದಿಗಳಲ್ಲಿ ಇಲ್ಲ. ಆದರೆ ಈ ಮಾನಸಿಕತೆ ಪೇಜಾವರ ಸ್ವಾಮಿಯವರಿಗಿದೆ. ಎರಡನೆಯದು, ಅಧಿಕಾರದ ಕಡೆಯಲ್ಲಿ ಇರುವವರಿಗೆ ಟೀಕೆಯನ್ನು ಸ್ವೀಕರಿಸುವ ಶಕ್ತಿ, ಸಂಯಮ ಇರಬೇಕೆಂಬ ಪ್ರಜ್ಞೆಯೂ ಬಹುತೇಕ ಹಿಂದೂವಾದಿಗಳಲ್ಲಿ ಇಲ್ಲ. ಆದರೆ ಈ ಮಾನಸಿಕತೆಯೂ ಪೇಜಾವರ ಸ್ವಾಮಿಯವರಿಗಿದೆ. ಆದ್ದರಿಂದ ಅವರ ಬಗ್ಗೆ ಕೊಂಚ ನಿರೀಕ್ಷೆ ಇರಿಸಿಕೊಳ್ಳಬಹುದು.

  • ಅರವಿಂದ ಚೊಕ್ಕಾಡಿ (by: facebook)

Leave a Reply

Your email address will not be published. Required fields are marked *