Realtime blog statisticsweb statistics
udupibits.in
Breaking News
ಉಡುಪಿ: ತೆರಿಗೆ ವಸೂಲಾತಿಯಲ್ಲಿ ಕರ್ತವ್ಯಲೋಪ- ಬೆಳ್ಳೆ ಗ್ರಾಮ ಪಂಚಾಯತ್ ನಲ್ಲಿ ಎಸಿಬಿ ಅಧಿಕಾರಿಗಳಿಂದ ಕಡತ ಪರಿಶಿಲನೆ

ಮೂಡುಬೆಳ್ಳೆ ಗ್ರಂಥಾಲಯಕ್ಕೆ ದಾರಿ ಯಾವುದಯ್ಯಾ?

ಉಡುಪಿ: ಬೆಳ್ಳೆ ಗ್ರಾಮ ಪಂಚಾಯತ್‍ನ ಗ್ರಂಥಾಲಯವನ್ನು ಪಂಚಾಯತ್ ಆಡಳಿತವೇ ಕಡೆಗಣಿಸಿರುವುದಕ್ಕೆ ಗ್ರಂಥಾಲಯಕ್ಕೆ ಹೋಗುವ ದಾರಿಯ ದುಸ್ಥಿತಿಯೇ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯತ್‍ ಕಾರ್ಯಾಲಯದ ಪಕ್ಕವೇ ಸಾರ್ವಜನಿಕ ಗ್ರಂಥಾಲಯವಿದೆ. ಆದರೆ ಈ ಕಟ್ಟಡವನ್ನು ಮಾತ್ರ ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಪಂಚಾಯತ್‍ನ ಸೊಸೈಟಿ ಕಟ್ಟಡದ ಹಿಂಬದಿಯಲ್ಲಿ ಗ್ರಂಥಾಲಯ ಕಟ್ಟಡವಿದೆ. ಆದರೆ ಪಂಚಾಯತ್‍ ಆವರಣದಲ್ಲಿ ಸಾರ್ವಜನಿಕರ ಗಮನಸೆಳೆಯುವ ಯಾವುದೇ ಫಲಕ ಇಲ್ಲದ ಕಾರಣ ಜನರು ‘ಇಲ್ಲಿ ಗ್ರಂಥಾಲಯ ಎಲ್ಲಿ’ ಎಂದು ಕೇಳುವುದು ಅನಿವಾರ್ಯವಾಗಿದೆ.

ಗ್ರಂಥಾಲಯಕ್ಕೆ ಹೋಗುವ ದಾರಿಯಲ್ಲಿ ನಾಗರಿಕರು ಬೈಕು, ರಿಕ್ಷಾ, ಕಾರು ನಿಲ್ಲಿಸುವುದರಿಂದ ದಾರಿಯೇ ಮರೆಯಾಗುತ್ತದೆ. ಜತೆಗೆ ಗ್ರಂಥಾಲಯದ ಫಲಕವೂ ಸ್ಪಷ್ಟವಾಗಿ ಕಾಣುವುದಿಲ್ಲ. ಜತೆಗೆ ದಾರಿ ಹಾಗೂ ಆ ಪ್ರದೇಶವಿಡೀ ಕೊಳಚೆ ಪ್ರದೇಶದಂತಾಗಿದೆ. ಕೆಲವು ಮಂದಿ ಇಲ್ಲಿ ಮೂತ್ರಶಂಕೆಯೂ ಮಾಡುವುದರಿಂದ ಗ್ರಂಥಾಲಯಕ್ಕೆ ಹೋಗುವುದೇ ಅಸಹ್ಯವಾಗಿ ಪರಿಣಮಿಸಿದೆ.

ಇದೆಲ್ಲವೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೆ, ಪಿಡಿಒ ಅವರಿಗೆ ಗೊತ್ತಿಲ್ಲದ್ದೇನಲ್ಲ. ಗ್ರಂಥಾಲಯ ಸೂಚನಾ ಫಲಕವನ್ನು ಸೊಸೈಟಿ ಅಥವಾ ಧ್ವಜಸ್ತಂಭದ ಬಳಿ ಅಳವಡಿಸಿದ್ದಲ್ಲಿ ಮತ್ತು ದಾರಿಯನ್ನು ಸುಸ್ಥಿತಿಗೆ ತರುತ್ತಿದ್ದಲ್ಲಿ  ಗ್ರಂಥಾಲಯ ಪರಿಸರದಲ್ಲಿ ಸ್ವಚ್ಛತೆ ಕೆಲಸವನ್ನು ಮಾಡಿಸುತ್ತಿದ್ದಲ್ಲಿ ಗ್ರಂಥಾಲಯ ಅರ್ಥಪೂರ್ಣವಾಗುತ್ತಿತ್ತು. ಇಷ್ಟನ್ನು ಮಾಡಲೂ ಆಡಳಿತ ಮನಸ್ಸು ಮಾಡದಿರುವುದರಿಂದ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ.

Leave a Reply

Your email address will not be published. Required fields are marked *