Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉದ್ಯಮಿಯ ಖಾಸಗಿ ಕಟ್ಟಡಕ್ಕೆ ಅನುಕೂಲ ಮಾಡಿಕೊಡಲು ಸರಕಾರಿ ಶಾಲೆಗೆ ಬೀಗ ಜಡಿದ ಸಿಎಂ ಸಿದ್ಧರಾಮಯ್ಯ !

ಉಡುಪಿ: ಶತಮಾನದ ಹಿಂದೆ ಮಹಾದಾನಿ ರಾವ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಭೂಮಿಯಲ್ಲಿ ಸರಕಾರ ನಿರ್ಮಿಸಿದ ಶಾಲೆಗೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಪರಮ ಭ್ರಷ್ಟ ಸರಕಾರ ಬೀಗ ಜಡಿದು ಮಹತ್ಸಾಧನೆ ಮೆರೆದಿದೆ.

ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿರುವ ನಗರಸಭಾ ಕಾರ್ಯಾಲಯದ ಎದುರುಗಡೆ ಇರುವ ಮಹಾತ್ಮಾ ಗಾಂಧಿ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರಕಾರ ಜುಲೈ 31ರಂದು ಬೀಗ ಜಡಿದಿದ್ದು, ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಸಮೀಪದ ನಾರ್ತ್ ಶಾಲೆಗೆ ಸ್ಥಳಾಂತರಿಸಿದೆ.

ಮುಚ್ಚುಗಡೆಯಾದ ಶಾಲೆಯ ಹಿಂಬದಿಯ ಜಮೀನು ಹಾಜಿ ಅಬ್ದುಲ್ಲಾ ಸಾಹೇಬರು ಆಸ್ಪತ್ರೆಗೆಂದು ದಾನ ಮಾಡಿದ ಜಮೀನಾಗಿದೆ. ಈ ಜಮೀನಿನಲ್ಲಿಯೇ ಸರಕಾರ, ಹಾಜಿ ಅಬ್ದುಲ್ಲಾರವರ ಹೆಸರಿನಲ್ಲಿ ಮಹಿಳೆಯರ ಆಸ್ಪತ್ರೆಯನ್ನು ನಿರ್ಮಿಸಿತ್ತು. ಇದೇ ಜಿಲ್ಲಾ ಸರಕಾರಿ ಮಹಿಳೆಯರ ಆಸ್ಪತ್ರೆಯನ್ನು ಬೆಲೆಬಾಳುವ ಜಮೀನಿನ ಸಹಿತವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ 30 ವರ್ಷಗಳ ಲೀಸ್ ಗೆ ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ಹಸ್ತಾಂತರಿಸಿದ್ದರು.

ಸರಕಾರಿ ಆಸ್ಪತ್ರೆಯನ್ನು ಜಮೀನಿನ ಸಹಿತ ಬಿ.ಆರ್.ಶೆಟ್ಟಿಯವರಿಗೆ ಹಸ್ಥಾಂತರಿಸಿದ ಬಳಿಕ, ಕಳೆದ ಕೆಲವು ತಿಂಗಳುಗಳಿಂದ ಈ ಜಮೀನಿನಲ್ಲಿ ಬಿ.ಆರ್.ಶೆಟ್ಟಿಯವರು ತಮ್ಮ ತಾಯಿಯ ಹೆಸರಿನಲ್ಲಿ ಬಹುಮಹಡಿ ಖಾಸಗಿ ಆಸ್ಪತ್ರೆ ನಿರ್ಮಿಸುತ್ತಿದ್ದು, ಈ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಭೂಮಿ ಅದುರಿದ ಪರಿಣಾಮವಾಗಿ ಮಹಾತ್ಮಾ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆಯಲ್ಲಿ ಬಿರುಕು ಸೃಷ್ಟಿಯಾಗಿತ್ತು.

ಯಾವ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಶಾಲಾ ಗೋಡೆ ಬಿರುಕು ಉದ್ಭವಿಸಿತ್ತೋ, ಅದೇ ಕಟ್ಟಡಕ್ಕೆ ಮತ್ತು ಈ ಕಟ್ಟಡ ನಿರ್ಮಿಸುತ್ತಿರುವ ಉದ್ಯಮಿಗೆ ಅನುಕೂಲ ಮಾಡಿಕೊಡುವ ದುರುದ್ಧೇಶದಿಂದ, ಪ್ರಸ್ತುತ 130ಕ್ಕೂ ಅಧಿಕ ವರ್ಷದ ಇತಿಹಾಸ ಇರುವ ಶಾಲೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ಇದೇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದರು.

 

ಖಾಸಗಿ ಉದ್ಯಮಿಯೊಬ್ಬರು ಅವರು ಅವರ ಲಾಭಕ್ಕಾಗಿ ನಿರ್ಮಿಸುತ್ತಿರುವ ಖಾಸಗಿ ಆಸ್ಪತ್ರೆ ಕಟ್ಟಡಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಸರಕಾರಿ ಶಾಲೆಗೆ ಬೀಗ ಜಡಿದ ಕ್ರಮ ಅನ್ಯಾಯದ್ದಾಗಿದೆ. ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದ ಸರಕಾರದ ಕ್ರಮದ ವಿರುದ್ಧ ಹಾಜಿ ಅಬ್ದುಲ್ಲಾರವರ ಹತ್ತಿರದ ಬಂಧು ಖುರ್ಷಿದ್ ಅಹಮ್ಮದ್ ಹಾಗೂ ಇತರರು ದಾಖಲಿಸಿದ ದಾವೆಯ ಮರು ವಿಚಾರಣೆಯು ಮುಂದಿನ ವಾರ ಉಡುಪಿಯ ಸಿವಿಲ್ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ. ಎನ್.ಕೃಷ್ಣರಾಜ ಆಚಾರ್ಯ ಅವರು ದಾವೆದಾರರ ಪರವಾಗಿ ವಾದಿಸಲಿದ್ದಾರೆ.

 

Leave a Reply

Your email address will not be published. Required fields are marked *