Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಮೂಡುಬೆಳ್ಳೆಯಲ್ಲಿ ಬಡವರ ಮನೆ ಧ್ವಂಸ: ಮೂವರ ವಿರುದ್ಧ ಪೊಲೀಸ್ ಕೇಸು

ಉಡುಪಿ: ಉಡುಪಿ ತಾಲೂಕು ಬೆಳ್ಳೆ ಗ್ರಾಮದ ತಿರ್ಲಪಲ್ಕೆಯಲ್ಲಿ ವಾಸ್ತವ್ಯದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಎರಡು ಬಡ ಕುಟುಂಬಗಳ ತಗಡು ಶೀಟಿನ ಮನೆಗಳನ್ನು ಧ್ವಂಸಗೊಳಿಸಿ ನಾಶ – ನಷ್ಟ ಉಂಟುಮಾಡಿ ಕೆಲವು ಸೊತ್ತುಗಳನ್ನು ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ನೀಡಿದ ದೂರಿನಂತೆ ಮೂವರು ವ್ಯಕ್ತಿಗಳ ವಿರುದ್ಧ ಶಿರ್ವ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೂಡುಬೆಳ್ಳೆ ಪರಿಸರವಾಸಿಗಳೇ ಆದ ರೋಶನ್ ಕಾಸ್ತಲಿನೊ, ಅಶೋಕ್ ಹಾಗೂ ಆನಂದ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಶಿರ್ವ ಠಾಣೆಯ ಪೊಲೀಸರು ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

 ಸ್ಥಳೀಯರೇ ಆಗಿರುವ ಪ್ರಭಾಕರ ಆಚಾರ್ಯ ಹಾಗೂ ರಾಮಕೃಷ್ಣ ಪೂಜಾರಿ ಎಂಬವರು ತಿರ್ಲಪಲ್ಕೆಯಲ್ಲಿ ಸರಕಾರಿ ಸ್ಥಳದಲ್ಲಿ ನಿರ್ಮಿಸಿದ ಸಿಮೆಂಟ್‍ ಶೀಟನ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಕಳೆದ ಕೆಲವು ಸಮಯಗಳಿಂದ ವಾಸವಾಗಿದ್ದರು. ಜತೆಗೆ 94 ಸಿಯಡಿ ಅರ್ಜಿಯನ್ನೂ ಸಲ್ಲಿಸಿದ್ದರು.

ಆ.3ರಂದು ಮಧ್ಯಾಹ್ನ ಏಕಾಏಕಿಯಾಗಿ ಇತರ ಕೆಲವರೊಂದಿಗೆ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ರೋಶನ್, ಅಶೋಕ್ ಹಾಗೂ ಆನಂದ್ ಇವರು, ಮನೆಯನ್ನು ಧ್ವಂಸಗೊಳಿಸಿ ನಾಶ ನಷ್ಟ ಉಂಟು ಮಾಡಿದ್ದರು. ಮಾತ್ರವಲ್ಲ, ಕೆಲವು ಸೊತ್ತುಗಳನ್ನು ಸ್ಥಳದಿಂದ ಕೊಂಡೊಯ್ದಿದ್ದಾರೆ ಎಂದು ದೂರಲಾಗಿದೆ.

ಮನೆ ಧ್ವಂಸಗೊಳಿಸುತ್ತಿದ್ದಾಗ ಮನೆಯವರು ಕೆಲಸಕ್ಕೆ ಹೋಗಿದ್ದರಾದುದರಿಂದ, ಮನೆಯ ಸೊತ್ತುಗಳನ್ನು ರಕ್ಷಿಸಲು ಸಹ ಸಾಧ್ಯವಾಗಿರಲಿಲ್ಲ. ಪ್ರಭಾಕರ್ ಹಾಗೂ ರಾಮಕೃಷ್ಣ ಅವರು ಬಡವರಾಗಿದ್ದು, ತಮ್ಮ ಪತ್ನಿಯರ ಕರಿಮಣಿ ಸರವನ್ನು ಅಡವಿರಿಸಿ ಹಿಂದೆ ತಂದಿರಿಸಿದ ಸಿಮೆಂಟ್ ಚೀಲಗಳ ಸಹಿತ 4 ಹಾರೆ, 2 ಪಿಕ್ಕಾಸು, ಪಾತ್ರೆ ಪಗಡೆ, ಬಟ್ಟೆಗಳು ಮತ್ತಿತರ ಸೊತ್ತುಗಳನ್ನು ಆರೋಪಿಗಳು ಹೊತ್ತೊಯ್ದಿರುವುದರಿಂದ ಪ್ರಭಾಕರ್ ಹಾಗೂ ರಾಮಕೃಷ್ಣ ಅವರು ಭಾರೀ ಮಾನಸಿಕ ಆಘಾತಕ್ಕೆ ಒಳಗಾದ ಘಟನೆಯೂ ನಡೆದಿದೆ. ಪರಿಸರವಾಸಿಗಳು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದು, ಇವರು ಸಹ ಸಂತ್ರಸ್ತರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಸಾಕ್ಷಿ ನುಡಿದಿದ್ದಾರೆ.

ರಾಜೇಂದ್ರ ಶೆಟ್ಟಿ ಭೇಟಿ

ಬಡವರು ಸರಕಾರಿ ಸ್ಥಳದಲ್ಲಿ ನಿರ್ಮಿಸಿದ ತಗಡು ಶೀಟಿನ ಮನೆಯನ್ನು ನೆಲಸಮಗೊಳಿಸಿದ ವಿಷಯ ತಿಳಿದ ಮೂಡುಬೆಳ್ಳೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ರಾಜೇಂದ್ರ ಶೆಟ್ಟಿಯವರು ಆ.4ರಂದು ಬೆಳಗ್ಗೆ ಮನೆ ಸ್ಥಳಕ್ಕೆ ಭೇಟಿ ನೀಡಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಈ ಅಮಾನವೀಯ ಮನೆ ಧ್ವಂಸ ಕೃತ್ಯಕ್ಕೆ, ಓರ್ವ ಖಾಸಗಿ ಗುತ್ತಿಗೆದಾರ ಹಾಗೂ ಬೆಳ್ಳೆ ಹಾಗೂ ಮಜೂರು ವಿಎ ಮೂಲ ಕಾರಣಕರ್ತರೆಂದು ಆರೋಪಿಸಲಾಗಿದೆ.

 

Leave a Reply

Your email address will not be published. Required fields are marked *