Realtime blog statisticsweb statistics
udupibits.in
Breaking News
ಕುಂಬಳೆ: ಮಾಯಿಪ್ಪಾಡಿ ಡಯಟ್ ನ ನಿವೃತ್ತ ಶಿಕ್ಷಕ, ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಕರುಣಾಕರ ಅನಂತಪುರ, ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಗಣಪತಿ ದಿವಾಣರ ಎರಡು ಕವನಗಳು

ಸಾಲ ಮಣ್ಣಾಗಿದೆ

ಮಣ್ಣಾಗಿದೆ ಸಾಲ

ಪೂರ್ಣ ಮಣ್ಣಾಗಿದೆ

ಮಕ್ಕಳಿಗೆ

ಹೆತ್ತವರ ಸಾಲ

ಶಿಷ್ಯರಿಗೆ

ಗುರುಗಳ ಸಾಲ

ಓಟುಗಿಟ್ಟಿಸಿ

ಕೊಂಡವರಿಗೆ

ಕೊಟ್ಟವರ ಸಾಲ

ಅನ್ನಉಂಡವರಿಗೆ

ಉಣಿಸಿದವರ ಸಾಲ

ಇಂದುಮಂತ್ರಿ

ಅಧಿಕಾರಿಗಳಾಗಿ

ಹಾರಾಡುವವರಿಗೆ

ಅಂದುಸ್ವಾತಂತ್ರ್ಯಕ್ಕಾಗಿ

ಹೋರಾಡಿಬೀದಿ

ಪಾಲಾದವರ

ಸಂತರಸತ್ತವರಸಾಲ

ಮನ್ನವಾಗಿದೆಈಗ

ಸಂಪೂರ್ಣಮಣ್ಣಾಗಿದೆ.

 

ಪೀಕದಾನಿ

ರಾಜಕಾರಣಿ ಸ್ವಾಮಿ

ನಾನು ರಾಜಕಾರಣಿ

ಎಲ್ಲರಿಗೂ ಬೇಕಾದ

ಎಲ್ಲರಿಗೂ ಸಾಕೋ ಸಾಕಾದ

ಎಲ್ಲರೂ ಉಗುಳುವ

ಪೀಕದಾನಿ

ಹಳೆ-ಹೊಸ-ಕಂಗ್ರೇಸು

ಎಡ-ಬಲ-ಕಮ್ಯೂನಿಸ್ಟ್

ಜನ-ದನ-ಸಂಘೋಸ್ತು

ಜಪ-ತಪ-ಭಾ-ಜಪ

ದಳ-ಸದಳ-ತಳಮಳ

ಡಿಂಕೆ-ಏ-ಡಿಂಕೆ-ದೇಶಂ-ದೋಷಂ

ಲೀಗು-ಬೇಗು-ಖಾಲಿ-ಅ-ಖಾಲಿ

ಎಲ್ಲ ಜೋ-ಖಾಲಿ

ಥೂ…ಥೂ…

ಉಗುಳುವಿರಾ ?

ಉಗುಳಿ ಸ್ವಾಮಿ ಉಗುಳಿ

ವನ್ಸ್ ಮೋರ್

ರಾಜಕಾರಣಿ ನಾನು

ಎಲ್ಲರೂ ಉಗುಳುವ

ಪೀಕದಾನಿ

ಆಜನ್ಮ ಜನ್ಮ ಜನ್ಮಾಂತರವೂ

ಜಸ್ಟೀಸೆ ಆಗಿರಬೇಕೆಂದಿದ್ದೆ

ಜನ್ಮ ಕೊಟ್ಟ ಬ್ರಿಟೀಷ

ನಡುನೀರಿನಲಿ ಕೈಬಿಟ್ಟ

ಆಗ ನಾನಾದೆ

ಕರ್ಮಣಾ ಕಾಂಗ್ರಸು

ಮತ್ತೆ ಕಟ್ಲೀಸು

ಚಾರ್ ಸೋ ಬೀಸ್ ಸರ್ಕಸ್ಸು

ಗಾಂಧೀಜಿ ನನಗೆ ಗುರು

ನಾ-ಥೂ-ರಾಮ

ಗೋಡ್ ಸೆ-ಸಹಪಾಠಿ

ಎಂಪಿ, ಎಮ್ಮೆಲೆ, ಮಂತ್ರಿ

ದೇಭಗಳ ಪೈಪೋಟಿ

ಜನಕಿಲ್ಲ ಬುದ್ದಿ-ಗ್ಯಾರಂಟಿ

ಹಡಗು ಮಡಿಕೇರಿಯಲಿ

ನಿಲ್ಲಲೇ ಬೇಕು

ಹಿಮಗಿರಿಯ ಕಡಿದು

ಕನ್ಯಾಕುಮಾರಿ ಭೂಶಿರಕೆ

ತರಸಲೇ ಬೇಕು-ಇತ್ಯಾದಿ

ಮಿಥ್ಯಾದಿ ಬೇಕುಗಳ ಸೀಕು

ಅದಕಿಲ್ಲ ಬ್ರೇಕು

ಭೋ ಪರಾಕು

ಹೌದಪ್ಪಾ ಹೌದು

ಅದಕಾಗಿ ಹೋರಾಡು-

ವೆನು ಆ-ವರಣ

ಉಪವಾಸ ಮಾಡುವೆನು

ಎಂದು ಎದೆ ತಟ್ಟಿದ್ದೆ

ಎದುರಿತ್ತು ಮೈಕು

ಜನ ದಂಗೆ ಎದ್ದರೂ

ಮಾನ ಮಣ್ಣಾದರೂ

ಕೊನೆಯುಸಿರು ಹೋದರೂ

ಜನರ ನಾ ಬಿಡಲಾರೆ

ಡಾಮ್ರ ಪತ್ರವು ಬಂತು

ಭೂಮಿ ಬಳುವಳಿಯುಂಟು

ಸಮ್-ತ್ರಸ್ತನೆಂಬ

ಬಿರುದಿನ ಜೊತೆಗೆ

ಪೆನ್ ಶನೂ ಪಾ-ಸಾಯ್ತು

ಆದರೂ

ಮೌನವಾಗಿರಲೊಲ್ಲೆ

ಸುಮ್ಮನಿರಲೊಲ್ಲೆ

ಎಲ್ಲವೂ ಬಲ್ಲೆ-ಬಲ್ಲೆ

ನಿತ್ಯ ತಲೆ ಶೂಲೆ

ರಾಜಕಾರಣಿ ಸ್ವಾಮಿ

ನನು ರಾಜಕಾರಣಿ

ಎಲ್ಲರೂ ಅಗಿದಗಿದು

ಉಗುಳುವಾ-ಪೀಕದನಿ.

(1993ರಲ್ಲಿ ಪ್ರಕಟವಾದ ‘ದಿವಾಣ ದರ್ಪಣ’ ಸಂಕಲನದಿಂದ)

Leave a Reply

Your email address will not be published. Required fields are marked *