Realtime blog statisticsweb statistics
udupibits.in
Breaking News
ಉಡುಪಿ: ತೆರಿಗೆ ವಸೂಲಾತಿಯಲ್ಲಿ ಕರ್ತವ್ಯಲೋಪ- ಬೆಳ್ಳೆ ಗ್ರಾಮ ಪಂಚಾಯತ್ ನಲ್ಲಿ ಎಸಿಬಿ ಅಧಿಕಾರಿಗಳಿಂದ ಕಡತ ಪರಿಶಿಲನೆ

ಬೆಳ್ಳೆಯಲ್ಲಿ ಮೊಬೈಲ್ ಟವರ್ ಅಕ್ರಮ; ತಾಪಂ, ಗ್ರಾಪಂ ಹೊಣೆಗೇಡಿತನ: ಸ್ಥಳೀಯರ ಆರೋಗ್ಯ ಹಾನಿ, ಪಕ್ಷಿ ಸಂಕುಲ ನಾಶದತ್ತ!

ಉಡುಪಿ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾ.ಪಂ. ಆಡಳಿತದ ಮೂಗಿನ ನೇರಕ್ಕೆ ನಾಲ್ಕು ಮೊಬೈಲ್‍ ಟವರ್‍ಗಳು ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಅಕ್ರಮವಾಗಿ ಕಾರ್ಯವೆಸಗುತ್ತಿರುವುದು ಬೆಳಕಿಗೆ ಬಂದಿದೆ.

ಬೆಳ್ಳೆ ಪೇಟೆಗೆ ಸಮೀಪದ, ಗ್ರಾಪಂ ಕಚೇರಿ ಅನತಿ ದೂರದಲ್ಲೇ ಈ ಮೊಬೈಲ್‍ ಟವರ್ ಗಳು ಅಕ್ರಮವಾಗಿ ಕಾರ್ಯವೆಸಗುತ್ತಿದ್ದರೂ ಟವರ್ ಗಳ ಅಧಿಕೃತರಿಂದ ನಿಯಮಾನುಸಾರ ತೆರಿಗೆ ವಸೂಲು ಮಾಡುವಲ್ಲಿ ಕನಿಷ್ಟ ಆಸಕ್ತಿಯನ್ನು ತೋರಿಸದೆ ಗಂಭೀರ ಕರ್ತವ್ಯಲೋಪ ಎಸಗಿರುವ ಗ್ರಾಪಂ ಅಧಿಕೃತರು ಮತ್ತು ತಾಲೂಕು ಪಂಚಾಯತ್ ಅಧಿಕೃತರ ಕ್ರಮ ಅನುಮಾನಕ್ಕೆ ಕಾರಣವಾಗಿದೆ. ಇವರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದಿಂದಾಗಿ ಗ್ರಾಪಂಗೆ ಸಲ್ಲಬೇಕಾದ ಸಾವಿರಾರು ರೂ. ತೆರಿಗೆ ನಷ್ಟವಾಗಿದ್ದು ಇದಕ್ಕೆ ಇವರೇ ನೇರ ಹೊಣೆಯಾಗಿದ್ದಾರೆ.

ಬೆಳ್ಳೆ ಕುರ್ಸುಗುಡ್ಡೆಯಲ್ಲಿ ಎರಡು ಮತ್ತು ಪೇಟೆಯ ಹೊರಭಾಗದಲ್ಲಿ ಮತ್ತೆರಡು ಹೀಗೆ ಒಟ್ಟು ನಾಲ್ಕು ಟವರ್‍ಗಳ ಅಧಿಕೃತರು ತೆರಿಗೆ ಪಾವತಿಸದೆ ಅಕ್ರಮ ಎಸಗಿದ್ದಾರೆ. ಇವುಗಳಲ್ಲಿ ಸರಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ ಕೂಡಾ ಸೇರಿದೆ.

ಈ ನಾಲ್ಕು ಟವರ್‍ಗಳು ಕಳೆದ 8ಕ್ಕೂ ಅಧಿಕ ವರ್ಷಗಳಿಂದ ಕಾರ್ಯವೆಸಗುತ್ತಿವೆ. ಆದರೆ ಗ್ರಾಪಂಗೆ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸದೆ ಕಾರ್ಯವೆಸಗುತ್ತಿರುವ ಬಗ್ಗೆ ಹಾಗೂ ತೆರಿಗೆ ವಸೂಲಿಗೆ ಗ್ರಾಪಂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ವರ್ಷದ ಹಿಂದೆಯೇ ಪಂ.ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕೃತರಿಗೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿದ ಉನ್ನತಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಹಾಗೂ ಗ್ರಾಪಂಗೆ ನಿರ್ದೇಶಿಸಿದ್ದರು.

ಆದರೆ ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗಳು ಕೇವಲ ಪತ್ರ ವ್ಯವಹಾರಕ್ಕೇ ಸೀಮಿತರಾಗಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಪ್ರಸ್ತುತ ಹೈಕೋರ್ಟ್ ನಿರ್ದೇಶದಂತೆ, ಸರಕಾರ ಮೊಬೈಲ್‍ ಟವರ್ ಗಳಿಗೆ ವಾರ್ಷಿಕ 12 ಸಾವಿರ ರೂ. ತೆರಿಗೆ ನಿಗದಿಪಡಿಸಿದೆ. ತೆರಿಗೆ ಮೊತ್ತವನ್ನು ವಸೂಲು ಮಾಡುವಲ್ಲಿ ಗ್ರಾಪಂ ಮತ್ತು ತಾಪಂ ಅಧಿಕೃತರು ಆಸಕ್ತಿ ತೋರಿಸದಿರಲು ಕಾರಣವೇನು ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.

ಟವರ್ ಜನರೇಟರ್ನ ಕಂಪನ ಪ್ರಮಾಣ ವೈಪರೀತ್ಯ ಹಾಗೂ ಶಬ್ದಮಾಲಿನ್ಯ

ಈ ನಾಲ್ಕೂ ಮೊಬೈಲ್ ಟವರ್ ಗಳು ಜನವಸತಿ ಪ್ರದೇಶದಲ್ಲಿವೆ. ಟವರ್ ಗಳಿಗೆ ತಾಗಿಕೊಂಡಂತೇ ಹಲವಾರು ಮನೆಗಳಿವೆ. ಮೊಬೈಲ್ ಟವರೊಂದರ ಜನರೇಟರ್‍ ನಿಂದ ಶಬ್ದಮಾಲಿನ್ಯ ಆಗುವುದಲ್ಲದೆ, ಕಳೆದ ಕೆಲವು ತಿಂಗಳಿಂದ ಕಂಪನಾಂಕ ವೈಪರೀತ್ಯದಿಂದಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟಾಗುತ್ತಿದೆ ಹಾಗೂ ಪರಿಸರದಲ್ಲಿ ವಾಸಿಸುವ ಚಿಕ್ಕಪುಟ್ಟ ಹಕ್ಕಿಗಳ ಜೀವಹಾನಿ ಹಾಗೂ ಸಂತಾನ ಶಕ್ತಿ ನಷ್ಟವಾಗುತ್ತಿದೆ. ಈ ರೀತಿಯ ಶಬ್ದಮಾಲಿನ್ಯ ಉಂಟು ಮಾಡುವುದು ಹಾಗೂ ಕಂಪನ ವೈಪರೀತ್ಯ ಉಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಹಲವು ವರ್ಷಗಳಿಂದ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಂದ ಮೊಬೈಲ್ ಟವರ್ ಸ್ಥಾಪನೆ ಬಗ್ಗೆ ಎನ್ಒಸಿ ಪಡೆದಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿವೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ಮೊಬೈಲ್ ಟವರ್ ಗಳಿಗೆ ಲೈಸನ್ಸ್ ನೀಡುವಾಗ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಕೂಡ ಆರೋಪಗಳು ಕೇಳಿ ಬರುತ್ತಿವೆ.

Leave a Reply

Your email address will not be published. Required fields are marked *