Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಇಲ್ಲಿ ಏಕವಚನವೇ ವ್ಯಾಕರಣ: ಕಾಪು ಸಿಪಿಐ ಹಾಲಮೂರ್ತಿ ವಿರುದ್ಧ ಅಸಮಾಧಾನ

ಉಡುಪಿ: ಕಾಪು ವೃತ್ತ ನಿರೀಕ್ಷಕರಾದ ಹಾಲಮೂರ್ತಿ ರಾವ್ ಕಚೇರಿಗೆ ಬರುವ ಸಾರ್ವಜನಿಕರ ಜತೆಗೆ ಅನುಚಿತ ಮತ್ತು ಅಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವೃತ್ತ ನಿರೀಕ್ಷಕರ ಕಚೇರಿಗೆ ಪ್ರತಿದಿನ ಹತ್ತಾರು ಜನರು ಹತ್ತಾರು ಕಾರಣಗಳಿಗಾಗಿ ವೃತ್ತ ನಿರೀಕ್ಷಕರನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾರೆ. ಸಭೆ, ಸಮಾರಂಭ, ಪ್ರತಿಭಟನೆ, ಇತ್ಯಾದಿಗಳಿಗೆ ಅನುಮತಿ ಪಡೆದುಕೊಳ್ಳಲೂ ಸ್ಥಳೀಯ ಗಣ್ಯರು ಬರುತ್ತಾರೆ. ಇಂಥವರೆಲ್ಲರ ಜತೆಗೆ ಹಾಲಮೂರ್ತಿ ರಾವ್ ಅವರು ಸೌಜನ್ಯಕ್ಕಾಗಿಯೂ ಕುಳಿತುಕೊಳ್ಳಲು ಹೇಳದೆ ನಿಲ್ಲಿಸಿ ಮಾತನಾಡಿಸುವುದು, ಏಕವಚನದಲ್ಲಿ ಸಂಭೋದಿಸುವುದು, ಬೆದರಿಸುವುದು, ಇತ್ಯಾದಿಗಳನ್ನು ಮಾಡುತ್ತಾರೆಂದು ದೂರಲಾಗಿದೆ.

ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಗಳ ಜತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಹೋಲಿಸಿದರೆ ಕರಾವಳಿಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಗೌರವ ನೀಡಲಾಗುತ್ತಿದೆ. ಆದರೂ ಪೊಲೀಸರು ಇದೇ ಜನರ ಜತೆಗೆ ಅತ್ಯಂತ ದರ್ಪ-ದೌಲತ್ತಿನಿಂದ ವರ್ತಿಸುತ್ತಿರುವ ಬಗ್ಗೆ ನಾಗರಿಕರಿಗೆ ಅಸಮಾಧಾನವಿದೆ.

ಕಾಪು ವೃತ್ತ ನಿರೀಕ್ಷಕರಾದ ಹಾಲಮೂರ್ತಿಯವರು ಪೊಲೀಸ್‍ ಅಧಿಕಾರಿಯಾಗುವ ಮುನ್ನ ಶಿಕ್ಷಕರಾಗಿದ್ದರು ಎನ್ನಲಾಗುತ್ತಿದೆ. ಶಿಕ್ಷಕರು ಗೌರವದ ವರ್ತನೆಗೆ ಹೆಸರಾದವರು. ಆದರೆ ಶಿಕ್ಷಕರಾಗಿದ್ದ ಹಾಲಮೂರ್ತಿಯವರು ಪೊಲೀಸ್ ಅಧಿಕಾರಿಯಾದ ಬಳಿಕ ಅಶಿಕ್ಷಿತರಂತೆ ನಡೆದುಕೊಳ್ಳುವುದು ಆಶ್ಚರ್ಯ ಹಾಗೂ ವಿಪರ್ಯಾಸ.

ಪೊಲೀಸ್ ಠಾಣೆಗಳಲ್ಲಿ ಜನರಿಗೆ ಅನ್ಯಾಯವಾದಾಗ ಜನರು ಪೊಲೀಸ್ ಠಾಣೆಗಿಂತ ಮೇಲಿನ ಅಧಿಕಾರಿಗಳಾದ ವೃತ್ತ ನಿರೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕೆ ಮೊರೆ ಹೋಗುತ್ತಾರೆ. ಆದರೆ ಕಾಪು ವೃತ್ತಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಾದರೂ ಆಗಬಹುದು, ವೃತ್ತ ನಿರೀಕ್ಷಕರಲ್ಲ ಎನ್ನುವಂತಾಗಿದೆ!

ಜಿಲ್ಲೆಗೆ ನೂತನ ಎಸ್.ಪಿ.ಯಾಗಿ ಆಗಮಿಸಿದ ಸೂಪರ್ ಕಾಪ್ ಖ್ಯಾತಿಯ ಡಾ| ಸಂಜೀವ ಪಾಟೀಲ್ ಅವರು ಮೊಟ್ಟಮೊದಲು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಬಗ್ಗೆ ಕನಿಷ್ಟ ಒಂದು ದಿನದ ಕಾರ್ಯಾಗಾರವನ್ನಾದರೂ ಹಮ್ಮಿಕೊಳ್ಳಬೇಕೆಂಬುದು ಸಾರ್ವಜನಿಕ ಅಪೇಕ್ಷೆ.

2 Comments

 1. pradip_shetty2351@yahoo.in'

  Pradeep Shetty

  August 28, 2017 at 1:11 pm

  ಜನರ ತಪ್ಪು ಗಳನ್ನು ಬದಲಾಯಿಸುವವರು ಮೋದಲು ತಾವು ಬದಲಾಗಬೇಕು..

 2. mgsudhir@gmail.com'

  Sudhir m

  August 28, 2017 at 8:03 pm

  Super .. Thakka pata agabeku

Leave a Reply

Your email address will not be published. Required fields are marked *