Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ನೂತನ ಇಂಗ್ಲೀಷ್ ಕಂಡುಹಿಡಿದ ಉಡುಪಿ ತಾಪಂ ಇಒ !

* ಸರಳಾತಿಸರಳ ಇಂಗ್ಲಿಷ್ ವಾಕ್ಯವನ್ನೂ ದೋಷವಿಲ್ಲದೆ ಬರೆಯಲಾಗದ ಸಿಬಂದಿ * ಪರಿಶೀಲಿಸದೆ ಸಹಿ ಹಾಕುವ ಇಒ !

ಉಡುಪಿ: ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಒ)ಯವರು ಕಚೇರಿಯ ಅಧಿಕೃತ ಕಾಗದ ಪತ್ರಗಳಿಗೆ, ಆದೇಶಗಳಿಗೆ ಸಹಿ ಹಾಕುವ ಸಂದರ್ಭದಲ್ಲಿ, ಪತ್ರದಲ್ಲಿ ಬರೆಯಲಾಗುವ ಮುಖ್ಯಾಂಶಗಳಿರುವ ವಿಷಯ ಮತ್ತು ಉಲ್ಲೇಖಗಳನ್ನು ಒಮ್ಮೆಯೂ ನೋಡುವುದಿಲ್ಲವೇ ? ಪತ್ರದಲ್ಲಿರುವ ವಾಕ್ಯಗಳ ಮೇಲೆ ಸ್ವಲ್ಪವೂ ಕಣ್ಣಾಡಿಸದೆ, ಕಣ್ಣುಮುಚ್ಚಿಕೊಂಡು ಸಹಿ ಹಾಕುತ್ತಾರೆಯೇ ಎಂಬ ಪ್ರಶ್ನೆ ಇದೀಗ ಉದ್ಬವಿಸಿದೆ. ಮಾತ್ರವಲ್ಲ, ಈ ವಿಷಯ ಪ್ರಸ್ತುತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಚೇರಿ ಕಡತಗಳಲ್ಲಿ ಬಹಳಷ್ಟು ತಪ್ಪುಗಳಿದ್ದರೂ, ಅವುಗಳನ್ನು  ಗಮನಿಸದೆಯೇ, ಬದಲಾಯಿಸಲು ಸಹ ತಿಳಿಸದೆಯೇ ಸುಮ್ಮನಿರುತ್ತಾರೆಯೇ ಅಥವಾ ಅವರಿಗೂ ಈ ತಪ್ಪುುಗಳು ತಪ್ಪು ಎಂದು ತಿಳಿಯುವುದಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಪ್ರಜ್ಞಾವಂತ ವಲಯದಲ್ಲಿ ಮೂಡಿದೆ. ತಾಪಂ ಕಚೇರಿಯಿಂದ ಇಒ ಅವರು ಸಹಿ ಹಾಕಿದ ಪತ್ರವೇ ಇಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಮೂಲವಾಗಿದೆ.

ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಬೆಳ್ಳೆ ಗ್ರಾ.ಪಂ. ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರು ಹಲವು ಬಾರಿ ಉಡುಪಿ ತಾ.ಪಂ. ಮತ್ತು ಜಿ.ಪಂ.ಗೆ ದೂರು ನೀಡಿದ್ದರು. ಜಿಲ್ಲಾ ಪಂಚಾಯತ್ ಅಧಿಕೃತರು ಈ ದೂರನ್ನು ತಾ.ಪಂ. ಇ.ಒ.ಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದರು. ಇ.ಒ. ಅವರೂ ಇದೇ ಮಾದರಿಯಲ್ಲಿ ಕೈತೊಳೆದುಕೊಳ್ಳುವುದಕ್ಕಾಗಿ ಪಂಚಾಯತ್ ಪಿ.ಡಿ.ಒ.ಗೆ ಪತ್ರ ಬರೆದಿದ್ದರು. ಹೀಗೆ ಕ್ರಮವೆಂಬುದು ಪತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಇದನ್ನು ಗಮನಿಸಿದ ರಾಜೇಂದ್ರ ಶೆಟ್ಟಿ ಅವರು ಅಧಿಕಾರಿಗಳ ಕರ್ತವ್ಯಲೋಪದ ವಿರುದ್ಧ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ)ಗೆ ದೂರು ನೀಡಿದ್ದರು. ಎ.ಸಿ.ಬಿ.ಯವರು ಪ್ರಕರಣವನ್ನು ತಾ.ಪಂ.ಗೆ ವರ್ಗಾಯಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಎ.ಸಿ.ಬಿ. ಪತ್ರ ಸ್ವೀಕೃತವಾಗುತ್ತಿದ್ದಂತೆ ಎಚ್ಚೆತ್ತ ಇ.ಒ. ಅವರು, ಮೊಟ್ಟಮೊದಲ ಬಾರಿಗೆ ನೇರವಾಗಿ ಮೊಬೈಲ್ ಟವರ್ ಅಕ್ರಮಗಳ ಬಗ್ಗೆ ಕ್ರಮ ಜರಗಿಸಿ ತೆರಿಗೆ ವಸೂಲು ಮಾಡಲಾಗುವುದು ಎಂದು ಪ್ರತ್ಯುತ್ತರ ನೀಡಿ ಎ.ಸಿ.ಬಿ.ಗೆ ಕಳುಹಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಇ.ಒ. ಅವರು ನೇರವಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.

ಆದರೆ ಪತ್ರ ಬರೆಯುವಾಗ, ತಾ.ಪಂ. ಕಚೇರಿ ಸಿಬಂದಿ ”Deputy Superintendent of Police, Anti-Corruption Bureau, Udupi” ಎಂಬ ಒಂದು ಸರಳ ವಾಕ್ಯವನ್ನೂ ಸರಿಯಾಗಿ ಬರೆಯದೆ, ”Depety Superintendeal of Police Auto coverption Bureace Udupi” ಎಂದು ತಪ್ಪು ತಪ್ಪಾಗಿ ಬರೆದಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು. ಟೈಪ್ ಮಾಡುವಾಗ ಕನಿಷ್ಟ ಸ್ಪೆಲ್ಲಿಂಗ್ ಸಜೇಶನ್‌ಗಳನ್ನು ಬಳಸಿಕೊಳ್ಳಲೂ ಇವರಿಗೆ ಸಮಯವಿಲ್ಲವೇ ? ಪತ್ರ ಬರೆಯುವಾಗ ಇಷ್ಟೊಂದು ನಿಷ್ಕಾಳಜಿ ಸರಿಯೇ ಎಂಬುದು ಪ್ರಶ್ನೆ ಮತ್ತು ಚರ್ಚೆ.

 

ಮೊಬೈಲ್ ಟವರ್‌ಗಳಿಂದ ಆರೋಗ್ಯ ಹಾನಿ: ಪರಿಶೀಲನೆಗೆ ಜಿಲ್ಲಾ ವೈದ್ಯಾಧಿಕಾರಿ ಆದೇಶ

ಬೆಳ್ಳೆ ಗ್ರಾಪಂ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿರುವ ಸರಕಾರಿ ಹಾಗೂ ಖಾಸಗಿ ಮೊಬೈಲ್ ಟವರ್‌ಗಳ ಕಂಪನಾಂಕ, ತರಂಗಾತರಗಳಿಂದ ಸ್ಥಳೀಯರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ದೂರು ಸ್ವೀಕೃತವಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿಯವರು ಪೆರ್ಣಂಕಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಆದೇಶಿಸಿದ್ದಾರೆ. ಪತ್ರದ ಜತೆಗೆ ಮೊಬೈಲ್ ಟವರ್ ಸ್ಥಾಪನೆಗೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿ ಹಾಗೂ ರೇಡಿಯೇಷನ್ ಅಪಾಯಗಳ ಕುರಿತ ಮಾಹಿತಿಯನ್ನು ಲಗತ್ತಿಸಿದ್ದಾರೆ.

 

One Comment

  1. noname@gmail.com'

    no name

    September 15, 2017 at 1:37 pm

    very sad news ..that too executive officer is belongs to class 1 officer and is equivalent to assistant commissioner of one sub division rank.he should at least have cross check while signing a document /paper in GREEN ink

Leave a Reply

Your email address will not be published. Required fields are marked *