Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಅಜೆಕಾರು ಕಾಲೇಜಿನಲ್ಲಿ ಯುವಸ್ಪಂದನದಿಂದ ಕಾರ್ಯಾಗಾರ

ಉಡುಪಿ: ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಸ್ಪಂದನ (ಯುವಕರಿಂದ ಯುವಕರಿಗಾಗಿ)ದ ವತಿಯಿಂದ ಕಾರ್ಕಳ ತಾಲೂಕು ಅಜೆಕಾರಿನ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 9ರಂದು ‘ಜೀವನ ಕೌಶಲ್ಯ’ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ವಿದ್ಯಾ ಡಿ. ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಭಗಿನಿ ಅನಿತಾ ಲಿಡಿಯಾ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. Mandamus ಎಜುಕೇಶನ್ ಅಕಾಡೆಮಿಯ ವಲಯ ಮುಖ್ಯಸ್ಥ ರವೀಂದ್ರ ಎಸ್. ನಾಯಕ್ ಹಾಗೂ  udupibits.in ಸಂಪಾದಕರಾದ ಶ್ರೀರಾಮ ದಿವಾಣ ಹಾಗೂ ಯುವಸ್ಪಂದನದ ಉಡುಪಿ ಜಿಲ್ಲಾ ಕೌನ್ಸಿಲರ್ ಶ್ಯಾಮಲಾ ಉಚ್ಚಿಲ ಅತಿಥಿಯಾಗಿ ಭಾಗವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ರೀನಾ ಬಿ.ಎಸ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಯುವಸ್ಪಂದನದ ಚೇತನ್ ಮಟ್ಟಾರ್ ಉಪಸ್ಥಿತರಿದ್ದರು. ಜ್ಯೋತಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಉಪನ್ಯಾಸಕರಾದ ಸುಂದರ ಪೂಜಾರಿ ಸ್ವಾಗತಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಕಿರಣ್ ಬಾಬು ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಪತ್ರಕರ್ತ ಶ್ರೀರಾಮ ದಿವಾಣ ಪರಿಸರ, ಸಂಬಂಧ, ರಕ್ಷಣೆ, ಓದು ಮತ್ತು ಬರೆಹ ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಯುವಸ್ಪಂದನದ ಚೇತನ್ ಹಾಗೂ ಶ್ಯಾಮಲಾರವರು ಮಕ್ಕಳಿಂದ ಇತರ ಪಠ್ಯೇತರ ಕ್ರೀಡಾ ಚಟುವಟಿಕೆಗಳನ್ನು ಮಾಡಿಸಿದರು.

Leave a Reply

Your email address will not be published. Required fields are marked *