Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತೆರಿಗೆ ವಸೂಲಾತಿಯಲ್ಲಿ ಬೆಳ್ಳೆ ಗ್ರಾಪಂ ಕರ್ತವ್ಯಲೋಪ: ಜಮಾಬಂದಿಯಲ್ಲಿ ದೂರು

ಉಡುಪಿ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯವೆಸಗಿತ್ತಿರುವ ಮೊಬೈಲ್ ಟವರ್ ಗಳ ಬಾಬ್ತು ಸಂಬಂಧಿಸಿದ ಕಂಪೆನಿಗಳಿಂದಾಗಲೀ, ಬಾಡಿಗೆದಾರರಿಂದಾಗಲೀ ಗ್ರಾಪಂ ಆಡಳಿತ ನಿಯಮಾನುಸಾರ ತೆರಿಗೆ ವಸೂಲಾತಿ ಮಾಡುವಲ್ಲಿ ವಿಫಲವಾಗಿದೆ ಎಂದು ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಸೆ.5ರಂದು ನಡೆದ ಗ್ರಾಪಂ ಜಮಾಬಂದಿಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಮೊಬೈಲ್ ಟವರ್ ಗಳ ಜತೆಗೆ ಇತರ ಕೆಲವು ನಿರ್ಧಿಷ್ಟ ಕಟ್ಟಡಗಳಿಂದಲೂ ಅಧ್ಯಕ್ಷರು ತೆರಿಗೆ ವಸೂಲಿ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ 2015-16ರ ಜಮಾಬಂದಿಯಲ್ಲೂ ದೂರು ನೀಡಲಾಗಿತ್ತು. 2015-16ರ ಜಮಾಬಂದಿಯಲ್ಲಿ ಗ್ರಾಪಂನ ಈ ನ್ಯೂನತೆಯ ಬಗ್ಗೆ ದಾಖಲಿಸಿಕೊಳ್ಳಲಲಾಗಿತ್ತಾದರೂ, ಅಧ್ಯಕ್ಷರು ನ್ಯೂನತೆಯನ್ನು ಸರಿಪಡಿಸಲು ಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಾಜೇಂದ್ರ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

ತೆರಿಗೆ ವಸೂಲಾತಿಯಲ್ಲಿನ ಲೋಪ, ಕರ್ತವ್ಯಲೋಪದ ಬಗ್ಗೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆಯೂ ದೂರಿನಲ್ಲಿ ಗ್ರಾಪಂ ಸದಸ್ಯ ರಾಜೇಂದ್ರ ಶೆಟ್ಟಿ ಒತ್ತಾಯಿಸಿದ್ದಾರೆ.

ಈ ನಡುವೆ, ಜನರೇಟರ್ ಮೂಲಕ ಕಾರ್ಯವೆಸಗುತ್ತಿರುವ ಮೊಬೈಲ್ ಟವರ್ ನಿಂದಾಗಿ ಪರಿಸರವಾಸಿಗಳಿಗೆ ಹಾಗೂ ಇತರ ಜೀವಸಂಕುಲಕ್ಕೆ ಆಗುತ್ತಿರುವ ಜೀವಹಾನಿ ಮತ್ತು ಮಾನಸಿಕ ಕಿರಿಕಿರಿ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಅವರು ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಿಗೆ ನಿರ್ದೆಶನ ನೀಡಿದ್ದಾರೆ.

ಅಕ್ರಮ ಮೊಬೈಲ್ ಟವರ್ ಗಳ ವಿರುದ್ಧ ಸಾರ್ವಜನಿಕರು ನೀಡಿದ ದೂರಿನ ಆಧಾರದಲ್ಲಿ ಸಂಬಂಧಪಟ್ಟವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಿ ಉಡುಪಿ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಉಡುಪಿ ತಾಲೂಕು ಪಂಚಾಯತ್ ಗೆ ಪತ್ರ ಬರೆದಿದೆ.

 

Leave a Reply

Your email address will not be published. Required fields are marked *