Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಹಿಳಾ ವಿ.ಎ.ಗೆ ಬೆದರಿಕೆ: ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯ

ಉಡುಪಿ: ಕುತ್ಯಾರು ಗ್ರಾ.ಪಂ. ಗ್ರಾಮ ಲೆಕ್ಕಾಧಿಕಾರಿ ಮಮತಾ ದೇವಾಡಿಗ ಅವರಿಗೆ ಕರ್ತವ್ಯದ ವೇಳೆ ಕರೆ ಮಾಡಿ ಬೆದರಿಕೆ ಒಡ್ಡಿದ ಘಟನೆಯನ್ನು ರಾಜ್ಯ ಕಂದಾಯ ಇಲಾಖಾ ನೌಕರರ ಉಡುಪಿ ಜಿಲ್ಲಾ ಸಂಘ ಖಂಡಿಸಿದೆ.

ಕರೆ ಮಾಡಿ ಬೆದರಿಕೆ ಒಡ್ಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್‍ ಪ್ರಕಟನೆ ನೀಡಿದ್ದಾರೆ.

ಸೆ.14ರಂದು ಮಧ್ಯಾಹ್ನ ಮಮತಾ ಅವರು ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ, ವ್ಯಕ್ತಿಯೊಬ್ಬರು ಮಮತಾ ಅವರಿಗೆ ಕರೆ ಮಾಡಿ ಮಾತನಾಡುತ್ತಾ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಬೆದರಿಕೆಯಿಂದ ಆಘಾತಕ್ಕೆ ಒಳಗಾದ ಮಮತಾರವರು ಕುಸಿದು ಬಿದ್ದಿದ್ದು, ಬಳಿಕ ಅವರನ್ನು ಆಸ್ಪತ್ರೆಗ ಒಳರೋಗಿಯಾಗಿ ದಾಖಲಿಸಲಾಗಿತ್ತು.

ವಿಎ ಮಮತಾ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯುತ್ತಲೇ ಶಾಸಕ ವಿನಯ ಕುಮಾರ್ ಸೊರಕೆ, ಕುಂದಾಪುರ ಎಸಿ ಶಿಲ್ಪಾ ನಾಗ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರವಿ ಶಂಕರ್, ಹಿರಿಯ ಗ್ರಾಮ ಲೆಕ್ಕಿಗ ವಿಜಯ, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಪುನೀತ್, ಕಾರ್ಯದರ್ಶಿ ಕಾರ್ತಿಕೇಯ ಭಟ್ ಮೊದಲಾದವರು ಆಸ್ಪತ್ರೆಗ ಭೆಟಿ ನೀಡಿ ಮಮತಾ ದೇವಾಡಿಗರವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು.

ಪಣಿಯೂರು ಕುಂಜೂರು ನಿವಾಸಿ ಸುಂದರ ದೇವಾಡಿಗರವರ ಪುತ್ರಿಯಾಗಿರುವ ಮಮತಾರವರು, ಕಳೆದ ನಾಲ್ಕು ವರ್ಷಗಳಿಂದ ಕುತ್ಯಾರು ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *