Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನ.1-2: ಕಾಂತಾವರದಲ್ಲಿ 26 ಕೃತಿಗಳ ಬಿಡುಗಡೆ, ಪ್ರಶಸ್ತಿ ಪ್ರದಾನ, ಭರತನಾಟ್ಯ, ವಯೋಲಿನ್ ವಾದನ

ಉಡುಪಿ: ಕಾರ್ಕಕಳ ತಾಲೂಕು ಕಾಂತಾವರದ ಕನ್ನಡ ಸಂಘ (ರಿ) ಸಂಸ್ಥೆಯ 41ರ ಸಂಭ್ರಮ ಮತ್ತು ಕಾಂತಾವರ ಉತ್ಸವ- 2017 ಹಾಗೂ ವಿವಿಧ ಕೃತಿಗಳ ಬಿಡುಗಡೆ ಕಾರ್ಯಕ್ರಮಗಳು ನವೆಂಬರ್ 1 ಮತ್ತು 2 ರಂದು ಕಾಂತಾವರ ಕನ್ನಡ ಭವನದಲ್ಲಿ ಜರುಗಲಿದೆ.

ನ. ಒಂದರಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮಗಳ ಉದ್ಘಾಟನೆ, ಸಂಘದ ದತ್ತಿ ಪ್ರಾಯೋಜಕತ್ವದ 2017ನೇ ಸಾಲಿನ ಪ್ರಶಸ್ತಿ ಪ್ರದಾನ ಮತ್ತು ನೂತನ ಕೃತಿಗಳ ಬಿಡುಗಡೆ ನಡೆಯಲಿದೆ. ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸ್ಕೃತ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಂಬೈನ ಹಿರಿಯ ಸಾಹಿತಿ ಪ್ರೊ.ಜಿ.ಡಿ.ಜೋಷಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಚೆನ್ನೈ ನ ಡಾ.ತಮಿಳ್ ಸೆಲ್ವಿ ‘ಕರ್ನಾಟಕ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ’, ಕಾರ್ಕಳದ ಪ್ರೊ.ಎಂ.ರಾಮಚಂದ್ರ ‘ವಿದ್ವತ್ ಪರಂಪರಾ ಪ್ರಶಸ್ತಿ’, ಉಡುಪಿಯ ಪ್ರೊ.ಎನ್.ಟಿ.ಭಟ್ ‘ಕಾಂತಾವರ (ಅನುವಾದ) ಸಾಹಿತ್ಯ ಪುರಸ್ಕಾರ’, ಮೈಸೂರಿನ ಪ್ರೊ.ಸಿ.ನಾಗಣ್ಣ ‘ಕಾಂತಾವರ ಸಾಹಿತ್ಯ ಪುರಸ್ಕಾರ’ ಹಾಗೂ ಬೆಳ್ಮಣ್ ನ ಡಾ.ಬಿ.ಜನಾರ್ದನ ಭಟ್ ‘ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ’ ಸ್ವೀಕರಿಸಲಿದ್ದಾರೆ.

  • ಡಾ. ತಮಿಳ್ ಸೆಲ್ವಿ

ಡಾ.ಬಿ.ಜನಾರ್ದನ ಭಟ್ ಸಂಪಾದಿಸಿರುವ ”ರಮಾನಂದ ಘಾಟೆಯವರ ಸಮಗ್ರ ಕತೆಗಳು”, ರಸಿಕ ಪುತ್ತಿಗೆ ಅವರ ‘ಮಂತ್ರ ತಂತ್ರ ಸಿದ್ಧಾಂತ ಅನುಭವಗಳು’, ಡಾ.ನಾ.ಮೊಗಸಾಲೆಯವರ ಲೇಖನಗಳ ಸಂಗ್ರಹ ‘ಶರಣರ ನುಡಿಹೆಜ್ಜೆ ನಡೆಗೆಜ್ಜೆ’, ಡಾ.ನಾ.ಮೊಗಸಾಲೆಯವರ ಆತ್ಮ ವೃತ್ತಾಂತ ‘ಬಯಲಬೆಟ್ಟ’ (ದ್ವಿತೀಯ ಮುದ್ರಣ) ಮತ್ತು ಬೆಳಗೋಡು ರಮೇಶ್ ಭಟ್ ರವರ ‘ಕಾಂತಾವರದ ಕಾಂತಾ-ರವ ಡಾ.ನಾ.ಮೊಗಸಾಲೆ’ ಎಂಬ ಐದು ಕೃತಿಗಳು ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

  • ಡಾ.ನಾ.ಮೊಗಸಾಲೆ                                                    * ಡಾ.ಬಿ.ಜನಾರ್ದನ ಭಟ್

ನ.2ರಂದು ಬೆಳಗ್ಗೆ 10 ಗಂಟೆಗೆ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳ ಬಿಡುಗಡೆ ಮತ್ತು ‘ಕಾಂತಾವರ ಉತ್ಸವ-2017’ ನಡೆಯಲಿದೆ. ಸಂಸದ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಮಂತ್ರಿ ಡಾ.ಮೂಡಬಿದಿರೆ ವೀರಪ್ಪ ಮೊಯಿಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ‘ನಾಡಿಗೆ ನಮಸ್ಕಾರ’ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ.ಕೃಷ್ಣ ಪ್ರಸಾದ್ ಕೆ. ಅವರು ‘ಕಾಂತಾವರ ಕನ್ನಡ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

  • ಡಾ.ಎಂ.ವೀರಪ್ಪ ಮೊಯಿಲಿ

‘ಮಂಗಳೂರಿನ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್’ (ಲೇಖಕರು: ಶ್ರೀನಿವಾಸ ದೇಶಪಾಂಡೆ), ‘ಹಿರಿಯ ಸಾಹಿತಿ ರಾಜಕೀಯ ಮುತ್ಸದ್ಧಿ: ಡಾ.ಎಂ.ವೀರಪ್ಪ ಮೊಯಿಲಿ’ (ಲೇ: ಮನೋಹರ ಪ್ರಸಾದ್), ‘ಪ್ರಸಿದ್ಧ ಚಲನಚಿತ್ರ ನಿರ್ದೇಶಕ: ಗಿರೀಶ್ ಕಾಸರವಳ್ಳಿ’ (ಲೇ: ಶರತ್ ಕಲ್ಕೋಡು), ‘ಸಾಹಿತ್ಯ ಸಿರಿ: ಪ್ರೊ.ಬ.ಹೆ.ಶ್ರೀಧರ’ (ಲೇ: ಮೋಹನ ಭಾಸ್ಕರ ಹೆಗ್ಡೆ), ‘ಹಿರಿಯ ರಂಗಕರ್ಮಿ: ಬಿ.ವಿ.ಕಾರಂತ’ (ಲೇ: ಡಾ.ಜಯಪ್ರಕಾಶ ಮಾವಿನಕುಳಿ), ‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ (ಲೇ: ಶ್ರೀರಾಮ ದಿವಾಣ), ‘ಹಿರಿಯ ಲೇಖಕಿ: ವೈದೇಹಿ’ (ಲೇ: ಡಾ.ಬಿ.ಎನ್.ಸುಮಿತ್ರಾಬಾಯಿ), ‘ಹಿರಿಯ ಲೇಖಕಿ: ಸಾರಾ ಅಬೂಬಕರ್’ (ಲೇ: ದೇವಿಕಾ ನಾಗೇಶ್), ‘ಛಾಂದಸಿಗ ಡಾ.ಶಿಮಂತೂರು ನಾರಾಯಣ ಶೆಟ್ಟಿ’ (ಲೇ: ಡಾ.ದಿನಕರ ಎಸ್.ಪಚ್ಚನಾಡಿ), ‘ಸಾಹಿತ್ಯ ಪರಿಚಾರಕ: ಪ್ರೊ.ಎಂ.ರಾಮಚಂದ್ರ ಕಾರ್ಕಳ’ (ಲೇ: ಡಾ.ಪಾದೆಕಲ್ಲು ವಿಷ್ಣು ಭಟ್), ‘ಹವಿಕನ್ನಡದ ಮಹಾಕವಿ: ಬಾಳಿಲ ಪರಮೇಶ್ವರ ಭಟ್’ (ಲೇ: ಡಾ.ಹರಿಕೃಷ್ಣ ಭರಣ್ಯ), ‘ಹಿರಿಯ ಸಾಹಿತಿ: ಡಾ.ಹರಿಕೃಷ್ಣ ಭರಣ್ಯ’ (ಲೇ: ರವಿಶಂಕರ ಜಿ.ಕೆ.), ‘ಯಕ್ಷ ಕಲಾವಿದ: ಮಿಜಾರ್ ಅಣ್ಣಪ್ಪ’ (ಲೇ: ಡಾ.ಯೋಗೀಶ ಕೈರೋಡಿ), ‘ಚಿಂತಕ: ಪ್ರೊ.ಪ್ರಭಾಕರ ಆಚಾರ್ಯ ಕಾರ್ಕಳ’ (ಲೇ: ಸದಾನಂದ ನಾರಾವಿ), ‘ಮಾಜಿ ಶಾಸಕ: ದೂಮಪ್ಪ ಮಂಗಳೂರು’ (ಲೇ: ರಮಾನಾಥ ಕೋಟೆಕಾರು), ಹಿರಿಯ ಸಾಹಿತಿ: ಪ್ರೊ.ಪ್ರಭಾಕರ ಶಿಶಿಲ’ (ಲೇ: ಡಾ.ವೈ.ಶಂಕರ ಪಾಟಾಳಿ), ‘ಗಾಂಧಿವಾದಿ ಕೋಚಣ್ಣ ರೈ’ (ಲೇ: ಜಗನ್ನಾಥ ರೈ), ‘ಜಾನಪದ ಕಲಾವಿದ: ಕುಮಾರಪಾತ್ರಿ ದರೆಗುಡ್ಡೆ ಶ್ಯಾಮ ಶೆಟ್ಟಿ’ (ಲೇ: ಡಾ. ಎಸ್.ಆರ್.ಅರುಣಕುಮಾರ್), ‘ಹಿರಿಯ ಪ್ರಸಂಗ ಕರ್ತೃ: ಕಂದಾವರ ರಘುರಾಮ ಶೆಟ್ಟಿ’ (ಲೇ: ಪ್ರೊ.ಉದಯಕುಮಾರ ಶೆಟ್ಟಿ), ‘ಪ್ರಸಿದ್ಧ ಅನುವಾದಕ: ಡಾ.ವಾಸುಬಿ.ಪುತ್ರನ್’ ಮುಂಬೈ (ಲೇ: ಡಾ.ವಿಶ್ವನಾಥ ಕಾರ್ನಾಡ್) ಮತ್ತು ‘ ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ’ (ಲೇ: ಎಚ್.ದಿವಾಕರ ಭಟ್ ಯಾಜಿ) ಬಿಡುಗಡೆಗೊಳ್ಳಲಿರುವ ಕೃತಿಗಳು.

  • ಗಣಪತಿ ದಿವಾಣ

ಮಧ್ಯಾಹ್ನ ಗಂಟೆ 2ರಿಂದ ಮಂಗಳೂರಿನ ಕು.ಶ್ವೇತಾ ಅರೆಹೊಳೆ ಇವರಿಂದ ಭರತನಾಟ್ಯ ಮತ್ತು ಕಾರ್ಕಳದ ಕು.ಮಹತೀ ಇವರಿಂದ ವಯೋಲಿನ್ ವಾದನ ಕಾರ್ಯಕ್ರಮಗಳು ಜರುಗಲಿವೆ. ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಜಯಾ ಬ್ಯಾಂಕ್ ನ ಉಪಮಹಾ ಪ್ರಬಂಧಕರಾದ ಸುದಾಕರ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

 

 

 

Leave a Reply

Your email address will not be published. Required fields are marked *