Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜಗದ್ಗುರು ನಿತ್ಯಾನಂದ ಮಂದಿರ ಸಂಸ್ಥಾಪಕಿ ಸಾಧ್ವೀ ಸೀತಮ್ಮ ಶೆಡ್ತಿ 33ನೇ ಪುಣ್ಯತಿಥಿ

ಉಡುಪಿ: ಉಡುಪಿ ನಗರಸಭೆ ಬಳಿ ಇರುವ ಜಗದ್ಗುರು ನಿತ್ಯಾನಂದ ಸ್ವಾಮೀ ಮಂದಿರ ಮಠದ ಸಂಸ್ಥಾಪಕಿ ಶ್ರೀಮತಿ ಸಾಧ್ವೀ ಸೀತಮ್ಮ ಶೆಡ್ತಿಯವರ 33ನೇ ಪುಣ್ಯತಿಥಿ ದಿನವನ್ನು ಇಂದು (12.10.2017) ಭಕ್ತಿ – ಗೌರವಗಳಿಂದ ಆಚರಿಸಲಾಯಿತು.

ಸಾಧ್ವೀ ಸೀತಮ್ಮ ಅವರು 1961ರ ನವೆಂಬರ್ 24ರಂದು ಸದ್ಗುರು ನಿತ್ಯಾನಂದ ಮಂದಿರವನ್ನು ಸ್ಥಾಪಿಸಿದ್ದರು. ಮಠವನ್ನು ಸ್ಥಾಪಿಸುವುದಕ್ಕಿಂತ ಕೆಲವು ವರ್ಷಗಳ ಮೊದಲು ನಿತ್ಯಾನಂದ ಸ್ವಾಮೀಯವರ ದರ್ಶನ ಭಾಗ್ಯ ಪಡೆದ ಸಾಧ್ವೀ ಸೀತಮ್ಮ, ಸ್ವಾಮಿಗಳ ಧೀಶಕ್ತಿಯ ಪ್ರಭಾವಕ್ಕೆ ಒಳಗಾಗಿ ಅವರ ಪರಮ ಭಕ್ತೆಯಾಗಿದ್ದರು.

ಸದ್ಗುರುಗಳ ಪಾದ ಸೇವಕಿಯಾದ ಬಳಿಕ ಅವರ ಸೂಚನೆಯಂತೆ ಉಡುಪಿಗೆ ಬಂದ ಸಾಧ್ವೀ ಸೀತಮ್ಮ, ಭೂಮಿ ಖರೀದಿಸಿ, ಸ್ವಲ್ಪ ಭೂಮಿಯನ್ನು ಸಹೋದರಿಗೆ ನೀಡಿದರೆ, ಉಳಿದ ಜಮೀನಿನಲ್ಲಿ ಮಠವನ್ನೂ, ಸದ್ಗುರು ನಿತ್ಯಾನಂದ ಮಂದಿರವನ್ನೂ ಸ್ಥಾಪಿಸಿದ್ದರು. ಮಂದಿರವನ್ನು ಸದ್ಗುರು ನಿತ್ಯಾನಂದರೇ ಉದ್ಘಾಟಿಸಬೇಕೆಂದು ಸಾಧ್ವೀ ಸೀತಮ್ಮರಿಗೆ ಇತ್ತಾದರೂ, ಅಷ್ಟರಲ್ಲಿ ಸದ್ಗುರು ಸಮಾಧಿಯಾದ ಹಿನ್ನೆಲೆಯಲ್ಲಿ, ಬಳಿಕ ಸದ್ಗುರು ನಿತ್ಯಾನಂದರವರ ಶಿಷ್ಯರಾದ ಜ್ಞಾನಾನಂದ ಸ್ವಾಮೀಗಳು ಮಂದಿರವನ್ನು ಉದ್ಟಾಟಿಸಿದ್ದರು.

ಸದ್ಗುರುಗಳ ನಿತ್ಯ ಪೂಜೆಗೂ, ಬಾಲ ಭೋಜನವನ್ನೂ ಆರಂಭಿಸಿದ ಸಾಧ್ವೀ ಸೀತಮ್ಮ, ಒಂದೆರಡು ವರ್ಷಗಳ ಕಾಲ ಮಠದಲ್ಲೇ ಇದ್ದು, 1984ರ ಅಕ್ಟೋಬರ್ 19ರಂದು ಸದ್ಗುರುಗಳ ಪಾದ ಸೇರಿದರು.

ಇದೀಗ ಪ್ರತೀ ಗುರುವಾರ ಮಂದಿರದಲ್ಲಿ ಬಾಲ ಭೋಜನ ಮತ್ತು ಸಾರ್ವಜನಿಕ ಅನ್ನದಾನ ಕಾರ್ಯಕ್ರಮಗಳು ಸದ್ಗುರುಗಳ ಭಕ್ತರ ನೆರವಿನೊಂದಿಗೆ ನಡೆಯುತ್ತಿದೆ. ಕೊಡವೂರು ತೋಟದಮನೆ ದಿವಾಕರ ಶೆಟ್ಟಿ ಕಾರ್ಯಾಧ್ಯಕ್ಷರಾಗಿಯೂ, ಎರ್ಮಾಳ್ ಶಶಿಧರ ಶೆಟ್ಟಿ ಅಧ್ಯುಕ್ಷರಾಗಿಯೂ, ಯೋಗೀಶ್ ಶಾನ್ ಭಾಗ್ ಕಾರ್ಯದರ್ಶಿಯಾಗಿಯೂ, ಉದಯಕುಮಾರ್ ಶೆಟ್ಟಿ ಬನ್ನಂಜೆ ಕೋಶಾಧಿಕಾರಿಗಳಾಗಿರುವ ಸೇವಾ ಸಮಿತಿಯು ಸರ್ವರೂ ಮೆಚ್ಚುವ ರೀತಿಯಲ್ಲಿ ಮಠವನ್ನು ನಿರ್ವಹಿಸಿಕೊಂಡುಬರುತ್ತಿದೆ.

 

 

 

Leave a Reply

Your email address will not be published. Required fields are marked *