Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಕವಿತೆ: ಹಚ್ಚಬೇಕಿದೆ ಹಣತೆ ನಿಜದ ಬೆಳಕಿಗಾಗಿ

ಹಚ್ಚಬೇಕಿದೆ ಹಣತೆ
ಬೆಂಕಿಯನ್ನಲ್ಲ

ಹಣತೆ ಹಚ್ಚಬೇಕಿದೆ
ಮನುಕುಲದ ಒಳಿತಿಗೆ

ಹಣತೆ ಹಚ್ಚಬೇಕಿದೆ
ಮನದ ಕಲ್ಮಷಗಳ ಸರಿಸಲು

ಹಣತೆ ಹಚ್ಚಬೇಕಿದೆ
ಜಾತಿ ಎಂಬ ಅನಿಷ್ಟವ ಸುಡಲು

ಹಣತೆ ಹಚ್ಚಬೇಕಿದೆ
ಸ್ನೇಹ ಪ್ರೀತಿಯ ದಾರಿ ಹುಡುಕಲು

ಹಣತೆ ಹಚ್ಚಬೇಕಿದೆ
ಎಲ್ಲರ ಬದುಕ ಬೆಳಗಲು

ಹಣತೆ ಹಚ್ಚಬೇಕಿದೆ
ಸ್ವಾತಂತ್ರ್ಯ, ಸಮಾನತೆಗಾಗಿ

ಹಣತೆ ಹಚ್ಚಬೇಕಿದೆ
ನಿಜ ಬೆಳಕಿಗಾಗಿ.

-ಎಚ್.ಆರ್.ನವೀನ್ ಕುಮಾರ್, ಹಾಸನ

Leave a Reply

Your email address will not be published. Required fields are marked *