Realtime blog statisticsweb statistics
udupibits.in
Breaking News
# ಶೃಂಗೇರಿ ಜಗದ್ಗುರುಗಳ ನೇತೃತ್ವದ ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯದಂತೆ ಅತ್ಯಾಚಾರ, ಅನೈತಿಕ ಸಂಬಂಧದ ಆರೋಪವಿರುವ ಮಠಾಧಿಪತಿಗಳನ್ನು ಸಭಾದಿಂದ ಕೈಬಿಡಲಾಗಿದೆ. ಆದುದರಿಂದ, ಅಂಥ ಮಠಾಧೀಶರನ್ನು ಯಾರೂ ಬೆಂಬಲಿಸಬಾರದು. – ಅಖಿಲ ಹವ್ಯಕ ಒಕ್ಕೂಟ.

ಪತ್ರಕರ್ತ, ಹೋರಾಟಗಾರ ಜಯಂತ್ ಪಡುಬಿದ್ರಿ ನಿಧನ

ಉಡುಪಿ: ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪರಿಸರಪರ ಹೋರಾಟಗಾರ, ಪಡುಬಿದ್ರಿ ನಿವಾಸಿ ಜಯಂತ್ ಪಡುಬಿದ್ರಿ ಅವರು ಇಂದು ಬೆಳಿಗ್ಗೆ ಪಡುಬಿದ್ರಿಯಲ್ಲಿ ನಿಧನರಾಗಿದ್ದಾರೆ.

‘ಉದಯವಾಣಿ’, ‘ಜನವಾಹಿನಿ’, ‘ಜಯಕಿರಣ’ ಮೊದಲಾದ ದಿನ ಪತ್ರಿಕೆಗಳಲ್ಲಿ ವರದಿಗಾರ ಮತ್ತು ಉಪಸಂಪಾದಕರಾಗಿದ್ದ ಜಯಂತ್ ಪಡುಬಿದ್ರಿಯವರು ಬರೆದ ಅತ್ಯುತ್ತಮ ಮಟ್ಟದ ಲೇಖನಗಳು ‘ಕನ್ನಡ ಡಿಂಡಿಮ’ ಸಹಿತ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಏಂಜೆಲ್ ಹಾರ್ಡ್, ಕೊಜೆಂಟ್ರಿಕ್ಸ್, ನಾಗಾರ್ಜುನ ಮುಂತಾದ ಪರಿಸರ ವಿರೋಧಿ ಕಂಪೆನಿಗಳ ವಿರುದ್ಧ ರಾಜಿ ರಹಿತ ದಿಟ್ಟ ಹೋರಾಟ ನಡೆಸಿದ್ದ ಜಯಂತ್, ತುಳು ಜಾನಪದದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಇವರು ಬರೆದ ದೈವಗಳ ಬಗೆಗಿನ ಬರೆಹಗಳು ‘ಜಯಕಿರಣ’ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು.

ಶ್ರೇಷ್ಟ ಪತ್ರಕರ್ತರಾಗಿದ್ದ ಜಯಂತ್ ಪಡುಬಿದ್ರಿ, ವಯುಕ್ತಿಕ ಬದುಕಿನಲ್ಲಿ ನೋವು ಅನುಭವಿಸುತ್ತಿದ್ದರು. ಇವರ ನಿಧನಕ್ಕೆ udupibits.in ಬಳಗ ಸಂತಾಪ ವ್ಯಕ್ತಪಡಿಸಿದೆ.

 

 

Leave a Reply

Your email address will not be published. Required fields are marked *