Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಪುಸ್ತಕಗಳ ಪ್ರದರ್ಶನ: ಮಾಧ್ಯಮಲೋಕದಲ್ಲಿ udupibits.in ನೂತನ ಪ್ರಯೋಗ

# ಮಾಧ್ಯಮ ಜಗತ್ತಿನಲ್ಲಿ ಇದು udupibits.in ನ ಹೊಸ ಪ್ರಯೋಗ. ಮಾತ್ರವಲ್ಲ, ಇದು ಮಾಧ್ಯಮ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಪ್ರಯೋಗವೂ ಆಗಿದೆ. ಹಳೆಯ ಪತ್ರಿಕೆಗಳಿಗೆ ಮತ್ತು ಪುಸ್ತಕಗಳಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ, ಸಾಧುವೂ ಅಲ್ಲ. ಅವುಗಳು ಅತ್ಯಮೂಲ್ಯವೂ, ಅತ್ಯುಪಯುಕ್ತವೂ ಆಗಿವೆ, ಆಗಿರುತ್ತವೆ.

ಹಳೆಯ ಪತ್ರಿಕೆಗಳು ಮತ್ತು ಪುಸ್ತಕಗಳು ಪ್ರಪಂಚದ, ದೇಶದ, ರಾಜ್ಯದ, ಜಿಲ್ಲೆ ಹಳ್ಳಿಗಳ ಹಾಗೂ ನಾಡಿನ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿಗಳ ಇತಿಹಾಸ, ಚರಿತ್ರೆಯನ್ನು ಸಾರಿ ಹೇಳುತ್ತವೆ.

‘ಗಣಪತಿ ದಿವಾಣ ಸ್ಮಾರಕ ಗ್ರಂಥಾಲಯ’ದಲ್ಲಿ ಲಭ್ಯವಿರುವ ಕೆಲವು ಆಯ್ದ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು, ‘ಪತ್ರಿಕೆ – ಪುಸ್ತಕ ಪ್ರದರ್ಶನ’ ಎಂಬ ನೂತನ ಪ್ರಯೋಗ ಮಂಟಪದಲ್ಲಿ  ಪ್ರದರ್ಶನಕ್ಕೆ ಇರಿಸಲಾಗಿದೆ. ಯಾವುದೇ ದಿನ ಮತ್ತು ಸಮಯದಲ್ಲಿ ಬೇಕಾದರೂ ಆಸಕ್ತರು ಈ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ವೀಕ್ಷಿಸಬಹುದಾಗಿದೆ. – ಸಂಪಾದಕ.

  • ಪತ್ರಿಕೆ, ಪುಸ್ತಕ ಸಂಗ್ರಾಹಕರು: ಶ್ರೀರಾಮ ದಿವಾಣ. ಫೋಟೋ: ವಿನಾಯಕ ದಿವಾಣ.

 

 

 

 

One Comment

  1. sangamesh.saundattimath@gmail.com'

    Saundattimath

    November 11, 2017 at 8:43 pm

    ಬೇರೆ ಪ್ರದೇಶಗಳಲ್ಲಿ ಲಭ್ಯ ಇಂತಹ ಪುಸ್ತಕ ಪತ್ರಿಕೆಗಳನ್ನು
    ಕೂಡ ಅಂತರ್ಜಾಲದಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸಿ.ಈ ಪ್ರಯತ್ನ ಅಭಿನಂದನೀಯ.

Leave a Reply

Your email address will not be published. Required fields are marked *