Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಿದ್ಧರಾಮಯ್ಯರಿಂದ ಸಚಿವ ಪ್ರಮೋದ್ ಮಧ್ವರಾಜ್, ಪತ್ರಕರ್ತ ಮನೋಹರ್ ಪ್ರಸಾದರಿಗೆ ಬಹಿರಂಗ ಅವಮಾನ: ದರ್ಪ, ದುರಹಂಕಾರ ಮೆರೆದ ಸಿಎಂ !

ಉಡುಪಿ: ಇಂದು (19.11.2017) ಸಂಜೆ ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ‘ದಿವಂಗತ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯ ನೂತನ ಮತ್ತು ಅಪೂರ್ಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದರ್ಪ, ದುರಹಂಕಾರ, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರ ನಡುವೆ ಸಂವಹನದ ಕೊರತೆ ಇರುವುದು ಮತ್ತು ಗೊಂದಲವಿರುವುದು ಸಾರ್ವಜನಿಕರ ಮುಂದೆ ಬಟಾಬಯಲಾಗಿದೆ.

ಸಮಾರಂಭದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ರವರು ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಪೂರ್ಣ ಪ್ರಮಾಣದಲ್ಲಿ ಶುಭಾಶಿರ್ವಾದ ನೀಡಿದ ಬಳಿಕ, ಉದಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥರೂ, ಕವಿ, ಲೇಖಕರು ಆದ ಮನೋಹರ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮನೋಹರ ಪ್ರಸಾದ್ ರವರಿಗೆ ನಿರೂಪಣಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಅವಕಾಶ ಕೊಡಲಿಲ್ಲ. ಬದಲಾಗಿ ಹಿಂದಕ್ಕೆ ತಳ್ಳಿ ಸಭಾಸದರ ಎದುರೇ ಅವಮಾನಗೊಳಿಸಿದ ವಿದ್ಯಾಮಾನ ನಡೆಯಿತು.

ಮನೋಹರ್ ಪ್ರಸಾದ್ ರವರನ್ನು ಪರಿಚಯ ಇರುವ ಹಲವರು ಈ ವಿದ್ಯಾಮಾನವನ್ನು ನೋಡಿ ಅತೀವ ಬೇಸರ ವ್ಯಕ್ತಪಡಿಸಿದರು ಮತ್ತು ಸಿದ್ಧರಾಮಯ್ಯ ವಿರುದ್ಧ ತಮ್ಮ ತಮ್ಮಲ್ಲೇ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಮನೋಹರ ಪ್ರಸಾದ್ ರವರಿಗೆ ಮಾಡಿದ ಅಪಮಾನ, ಇಡೀ ಮಾಧ್ಯಮಲೋಕಕ್ಕೆ ಮಾಡಿದ ಅಪಮಾನವೆಂದು ಕೆಲವರು ಮಾತನಾಡಿಕೊಂಡರು ಮತ್ತು ಇಂಥವರ ಕಾರ್ಯಕ್ರಮಗಳಿಗೆಲ್ಲ ನಿರೂಪಣೆ ಮಾಡಿಕೊಳ್ಳಲು ಮನೋಹರ ಪ್ರಸಾದ್ ರಂಥವರು ಯಾಕೆ ಒಪ್ಪಿಕೊಳ್ಳುತ್ತಾರೋ ಎಂದು ಮಾತನಾಡಿಕೊಂಡರು.

ಸಮಾರಂಭದಲ್ಲಿ ಭಾಷಣ ಮಾಡಿದ ಸಿದ್ಧರಾಮಯ್ಯನವರು, ಸರಕಾರಿ ಆಸ್ಪತ್ರೆಯನ್ನು ಭೂಮಿ ಸಹಿತವಾಗಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಖಾಸಗೀ ಆಸ್ಪತ್ರೆ ನಿರ್ಮಿಸಲು ಸರಕಾರ ನೀಡಿದ್ದನ್ನು ಪದೇ ಪದೇ ಸಮರ್ಥಿಸಿಕೊಂಡರು. ನಮಗಾರಿಗೂ ಯಾವುದೇ ರೀತಿಯ ಶಂಕೆಯೂ ಇಲ್ಲ ಎನ್ನುವುದನ್ನೂ ಪದೇ ಪದೇ ಸ್ಪಷ್ಟಪಡಿಸುವ ಪ್ರಯತ್ನ ನಡೆಸಿದರು.  ಈ ಸಂದರ್ಭದಲ್ಲಿ, ಒಂದು ಹಂತದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರು  ತಾವು ಕುಳಿತಿದ್ದ ಸ್ಥಳದಿಂದಲೇ ಸಿದ್ಧರಾಮಯ್ಯನವರನ್ನು ಉದ್ಧೇಶಿಸಿ, ”ಅದು ಹಾಗಲ್ಲ, ಹೀಗೆ” ಎಂದು ಹೇಳಲು ಮುಂದಾದರು. ಆದರೆ ಸಿದ್ಧರಾಮಯ್ಯನವರು ಪ್ರಮೋದ್ ಮಧ್ವರಾಜ್ ರವರ ಮಾತಿಗೆ ಸ್ವಲ್ಪವೂ ಸೊಪ್ಪು ಹಾಕಲಿಲ್ಲ. ಬದಲಾಗಿ ಪ್ರಮೊದ್ ಮಧ್ವರಾಜ್ ರವರ ಮಾತಿಗೆ ಅರ್ಧದಲ್ಲೇ ತಡೆ ಒಡ್ಡಿದರು. ಮಾತ್ರವಲ್ಲ, ”ನಿಮಗೇ ಕನ್ಫ್ಯೂಸ್ (confuse) ಇದೆ ! ನೀವಾ ಶಾಸಕ, ನಾನಾ ? ಬಿ.ಆರ್.ಶೆಟ್ಟರಲ್ಲಿ ಕೇಳ್ರಿ” ಎಂದು ಸಭೆಯಲ್ಲೇ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಪ್ರಮೋದ್ ಮಧ್ವರಾಜ್ ರವರನ್ನು ಸ್ವಲ್ಪವೂ ಮುಲಾಜು ತೋರಿಸದೆ ಬಹಿರಂಗವಾಗಿಯೇ ಅಪಮಾನಿಸಿದರು.

ಈ ಪ್ರಸಂಗದ ಮೂಲಕ, ಬಿ.ಆರ್.ಶೆಟ್ಟಿಯವರು ನಿರ್ಮಿಸುತ್ತಿರುವ ಆಸ್ಪತ್ರೆ ಬಗ್ಗೆ ಸರಕಾರದ ಪ್ರಮುಖ ಭಾಗವೇ ಆಗಿರುವ ಮುಖ್ಯಮಂತ್ರಿ ಹಾಗೂ ಕ್ಯಾಬಿನೇಟ್ ಮಂತ್ರಿ, ಅದರಲ್ಲೂ ಉಡುಪಿ ಜಿಲ್ಲಾ ಉಸ್ತುವಾರೀ ಸಚಿವರ ನಡುವೆ ಸಂವಹನದ ಕೊರತೆ ಇರುವುದು, ಗೊಂದಲ ಇರುವುದು, ಮಾಹಿತಿ ಕೊರತೆ ಇರುವುದು, ಸರಕಾರ ಯಾವುದೋ ಸತ್ಯವನ್ನು ಮರೆ ಮಾಚುತ್ತಿರುವುದು, ಯಾವುದೋ ಕೆಲವು ಸುಳ್ಳುಗಳನ್ನು ಹೇಳಲಾಗುತ್ತಿದೆ ಎಂಬಿತ್ಯಾದಿ ಅಂಶಗಳು ಬಯಲಾದುವು.

ಯಾವುದೋ ಒಂದು ಸತ್ಯವನ್ನು ಹೇಳಲು ಸಾಧ್ಯವಾಗದೆ ಅವಕಾಶ ವಂಚಿತರಾದ ಅಥವಾ ಯಾವುದೋ ಕೆಲವು ಸುಳ್ಳುಗಳನ್ನು ಮುಖ್ಯಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವ ಪ್ರಯತ್ನದಲ್ಲಿ ವಿಫಲರಾದ ಸಚಿವ ಪ್ರಮೋದ್ ಮಧ್ವರಾಜ್ ರವರು ತಮ್ಮ ಎರಡನೇ ಪ್ರಯತ್ನವಾಗಿ ಸ್ವಲ್ಪ ಹೊತ್ತು ಬಿಟ್ಟು ತಾವು ಲುಳಿತಿದ್ದ ಸ್ಥಳದಿಂದ ಎದ್ದು ನಿಂತು ಯಾವುದೋ ಒಂದು ದಾಖಲಾತಿಯ ಕಾಗದವನ್ನು ಕೈಯ್ಯಲ್ಲಿ ಹಿಡಿದುಕೊಂಡು ಅದನ್ನು ಮುಖ್ಯಮಂತ್ರಿಗಳಿಗೆ ತೋರಿಸಲು ಮುಖ್ಯಮಂತ್ರಿ ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ಹೋಗಲು ಹೊರಟಾಗ, ಮತ್ತೆ ಸಿದ್ದರಾಮಯ್ಯನವರು ಸಚಿವ ಪ್ರಮೋದ್ ಮಧ್ವರಾಜ್ ರವರ ಆ ಪ್ರಯತ್ನಕ್ಕೂ ತಡೆ ಒಡ್ಡಿದರು. ಕೈಯ್ಯಲ್ಲೇ, ”ಬೇಡ ಬೇಡ ಹತ್ತಿರಕ್ಕೆ ಬರಬೇಡ, ಅದೆಲ್ಲ ಬೇಡ, ಹೋಗು ಹೋಗಿ ಕುಳಿತುಕೊ” ಎಮದು ಸಂಜ್ಞೆಯಲ್ಲೇ ಸಚಿವ ಪ್ರಮೋದ್ ಮಧ್ವರಾಜ್ ರವರನ್ನು ಅವರ ಸ್ವಸ್ಥಾನಕ್ಕೆ ಹೋಗುವಂತೆ ಮಾಡಿದರು. ರೆಡನೇ ಬಾರಿ ಸಚಿವ ಪ್ರಮೋದ್ ಮಧ್ವರಾಜ್ ರವರಿಗೆ ಸಭೆಯಲ್ಲೇ ಎಲ್ಲರೆದುರೇ ಸಿದ್ಧರಾಮಯ್ಯನವರು ಅಪಮಾನಿಸಿದರು.

ಈ ವಿದ್ಯಾಮಾನವನ್ನು ಗಮನಿಸಿದ ಸಾರ್ವಜನಿಕರು ”ಆಸ್ಪತ್ರೆ ಬಗ್ಗೆ ಸಚಿವ ಪ್ರಮೋದರಿಗೆ ಸ್ಪಷ್ಟವಾಗಿ ಗೊತ್ತಿಲ್ಲವೆಂದು ಕಾಣುತ್ತದೆ ಅಥವಾ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಏನೋ ಸುಳ್ಳು ಹೇಳುತ್ತಿರಬೇಕು” ಎಂದು ಮಾತನಾಡಿಕೊಳ್ಳುವಂತಾಯಿತು. ಮಾತ್ರವಲ್ಲ, ”ಸಿದ್ಧರಾಮಯ್ಯನವರು ಸಭಾ ವೇದಿಕೆಯಲ್ಲೇ ಹೀಗೆ ನಿರೂಪಣೆ ಮಾಡುವವರಿಗೆ, ಸಚಿವರಿಗೆ ಅಪಮಾನಿಸುವುದು ಸರಿಯಲ್ಲ” ಎಂದೂ ನಾಗರಿಕರು ಪರಸ್ಪರ ಚರ್ಚಿಸುವಂತೆ ಮಾಡಿದರು.

ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಬಿ.ಆರ್.ಶೆಟ್ಟಿ, ಶ್ರೀಮತಿ ಬಿ.ಆರ್.ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಜಿಲ್ಲಾಧಿಕಾರಿ ಪ್ರಯಾಂಕ ಮೇರಿ ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದರು.

 

One Comment

  1. deepakudupi49@gmail.com'

    ದೀಪಕ್ ಯು

    November 21, 2017 at 4:24 pm

    ಅಂತು ಇಂತು ಗೊಂದಲದೊಳಗೆ ಇನ್ನೂ ಪೂರ್ತಿಗೊಳ್ಳದ ಕಟ್ಟಡಲ್ಲಿ ಆಸ್ಪತ್ರೆಯ ಉಧ್ಘಾಟನೆ ಸಾಂಕೇತಿಗವಾಗಿ ನಡೆದು ಹೋಯಿತು …

Leave a Reply

Your email address will not be published. Required fields are marked *