Realtime blog statisticsweb statistics
udupibits.in
Breaking News
# ನವೆಂಬರ್ 1 – 2: ಕಾರ್ಕಳ ತಾಲೂಕು ಕಾಂತಾವರದ ಕನ್ನಡ ಭವನದಲ್ಲಿ ಕಾಂತಾವರ ಉತ್ಸವ, ಪ್ರಶಸ್ತಿಗಳ ಪ್ರದಾನ, 12 ಕೃತಿಗಳ ಬಿಡುಗಡೆ, ತಾಳಮದ್ದಳೆ

ಕಾಂತಾವರದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಕಾಂತಾವರ (ಬೆಳುವಾಯಿ): ಕಾಂತಾವರ ಗ್ರಾಮ ಪಂಚಾಯತ್ ವತಿಯಿಂದ ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಂಘ ಹಾಗೂ ಕಾರ್ಕಳ ಸ್ತ್ರೀ ಶಕ್ತಿ ಸಮೂಹ ಇವುಗಳ ಸಹಯೋಗದೊಂದಿಗೆ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರನೆ ಮತ್ತು ಸೇವೆಗಾಗಿ ಸಂಪರ್ಕ ಕಾನೂನು ಮಾಹಿತಿ ಜಾಗೃತಿ ಆಂದೋಲನದ ಅಂಗವಾಗಿ, ಕಾನೂನು ಅರಿವು ನೆರವು ಕಾರ್ಯಕ್ರಮದ ಭಾಗವಾಗಿ ನವೆಂಬರ್ 17ರಂದು ಕಾಂತಾವರ ಕನ್ನಡ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಕಾರ್ಕಳ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪುಟ್ಟರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯ ಎಸ್.ಕೋಟ್ಯಾನ್, ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ವಿಜಯ ಕುಮಾರ್, ಕಚೇರಿ ಅಧೀಕ್ಷಕರಾದ ವಿಜಯಲಕ್ಷ್ಮಿ ದಿನ್ನಿ, ಪ್ರಭಾ ಹಾಗೂ ಕಾಂತಾವರ ಗ್ರಾಮ ಕರಣಿಕರಾದ ರವಿಚಂದ್ರ ಪಾಟೀಲ್ ಅವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಯಕರ ಎಸ್. ವಂದನಾರ್ಪಣೆ ಸಲ್ಲಿಸಿದರು.

ಚಿತ್ರ: ಜಗದೀಶ್ ಆರ್.ಬಿ.

Leave a Reply

Your email address will not be published. Required fields are marked *