Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಮೂಡುಬೆಳ್ಳೆ-ರಾಂಪುರ ನಡುವೆ ಅಲ್ಲಲ್ಲಿ ದುರ್ವಾಸನೆ: ಕೋಳಿತ್ಯಾಜ್ಯ ಎಸೆದು ದುಷ್ಕೃತ್ಯ !

ಉಡುಪಿ: ಮೂಡುಬೆಳ್ಳೆಯಿಂದ ಅಲೆವೂರು ರಾಂಪುರ ವರೆಗಿನ ರಾಜ್ಯ ಹೆದ್ದಾರಿಯಲ್ಲಿ ಯಾರೋ ಕಿಡಿಗೇಡಿಗಳು ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಕೋಳಿ ತ್ಯಾಜ್ಯವನ್ನು ಸುರಿದು ಹೋಗಿರುವುದರಿಂದ ವಾಹನ ಸವಾರರು, ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ಅಸಹನೀಯವಾಗಿ ಪರಿಣಮಿಸಿದೆ.

ತಿರ್ಲಪಲ್ಕೆ – ನೆಲ್ಲಿಕಟ್ಟೆ ನಡುವೆ ಮೊನಾರ್ಕ್ ಎಂಟರ್ಪ್ರೈಸಸ್ ಬಳಿ, ತೋಕೋಳಿ ಏರು ರಸ್ತೆ ಬದಿ ಮತ್ತು ದೆಂದೂರುಕಟ್ಟೆ – ನಡು ಅಲೆವೂರು ಮಧ್ಯೆ ದೆಂದೂರುಕಟ್ಟೆ ಸೇತುವೆ ಬಳಿ ವಿಪರೀತ ದುರ್ವಾಸನೆ ಇದ್ದು, ಬಸ್ ನಲ್ಲಿ ಪ್ರಯಾಣಿಸುವವರು ಸಹ ಈ ಪ್ರದೇಶಗಳಲ್ಲಿ ಮೂಗು ಮುಚ್ಚುವುದು ಅನಿವಾಯಱ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.

ಮೂಡುಬೆಳ್ಳೆ – ರಾಂಪುರ ನಡುವೆ ಸಂಚರಿಸುವಾಗ ಹಳೆಯ ಬೀಡಿನಗುಡ್ಡೆ ಸ್ಮರಣೆಯಾಗುತ್ತದೆ. ಮಟ್ಟಾರ್ ನೆನಪಾಗುತ್ತದೆ. ರಾಜ್ಯ ಹೆದ್ದಾರಿಯ ಬದಿಯಲ್ಲಿ ಹೀಗೆ ಕೋಳಿ ತ್ಯಾಜ್ಯ ತಂದು ಸುರಿದ ದುಷ್ಕರ್ಮಿಗಳಿಗೆ ಶಾಪ ಹಾಕದೇ ಇರಲು ಸಾಧ್ಯವಾಗುವುದಿಲ್ಲ ಎಂಬಂತಾಗಿದೆ.

ಇಂಥ ಕೃತ್ಯವೆಸಗಿದವರು ಯಾರು ಎಂಬುದು ಗೊತ್ತಾಗಿಲ್ಲ. ಆದರೆ, ಹೀಗೆ ರಸ್ತೆ ಬದಿ ದುವಾಱಸನೆಯಿಂದ ಕೂಡಿದ ತ್ಯಾಜ್ಯವನ್ನು ಎಸೆದವರು ಉದ್ಧೇಶಪೂರ್ವಕ ತ್ಯಾಜ್ಯವನ್ನು ಎಸೆದರೆ ಅಥವಾ ಇನ್ನು ದಿನಾ ಹೀಗೆ ರಸ್ತೆ ಬದಿ ಎಸೆಯುವ ಕೃತ್ಯವೆಸಗಲಿದ್ದಾರೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.

ಸಾರ್ವಜನಿಕರು ಹಾಗೂ ಪರಿಸರವಾಸಿಗಳು ಕಾದು ನಿಂತಾದರೂ ಈ ತ್ಯಾಜ್ಯ ಎಸೆದವರನ್ನು, ಎಸೆಯುವವರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಿ ಪೊಲೀಸರಿಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ. ಗ್ರಾಮ ಪಂಚಾಯತ್ ಅಧಿಕೃತರು ಇವರನ್ನು ಪತ್ತೆಹಚ್ಚಿ ದಂಡ ವಿಧಿಸುವ ಮತ್ತು ಹೀಗೆ ಕೋಳಿ ತ್ಯಾಜ್ಯ ಎಸೆದವರದ್ದು ಕೋಳಿ ಫಾರಮ್ ಇದ್ದದ್ದೇ ಆದಲ್ಲಿ ಅದಕ್ಕೆ ನೀಡಿದ ಅನುಮತಿಯನ್ನು ರದ್ದುಗೊಳಿಸುವ ಕೆಲಸವನ್ನು ಮಾಡುವ ಮೂಲಕ ದಿಟ್ಟತನವನ್ನು ಪ್ರದರ್ಶಿಸಬೇಕಾಗಿದೆ.

Leave a Reply

Your email address will not be published. Required fields are marked *