Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಟೀಲು 5ನೇ ಮೇಳ ಟಾರ್ಗೆಟ್ !: ಆಡಳಿತ ಮಂಡಳಿಯ ಮುಸುಕಿನ ಗುದ್ದಾಟಕ್ಕೆ ಬೇಸತ್ತು ಪಟ್ಲ ಸತೀಶ್ ಶೆಟ್ಟಿ ಮೇಳಕ್ಕೆ ವಿದಾಯ ಹೇಳುವರೇ ?

# ಹೀಗೊಂದು ಸುದ್ದಿಯು ಪಟ್ಲ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು

ಈಗಾಗಲೇ ಒಂದು ವರ್ಗವು ಪಟ್ಲರನ್ನು target ಮಾಡಿ ಷಡ್ಯಂತ್ರ ರೂಪಿಸುತ್ತಿರುವ ವದಂತಿಗಳು ಇದಕ್ಕೆ ಪುಷ್ಟಿ ನೀಡುವಂತಿದೆ.

ಕಟೀಲಿನ 5 ನೇ ಮೇಳವನ್ನು ಆಗ್ರಪಂಕ್ತಿಯಲ್ಲಿರಿಸಿ ಕಲಾವಿದರ ಆಯ್ಕೆ, ಜೋಡಣೆ, ತರಬೇತಿ ನೀಡಿ ಕಲಾಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆಯುವಲ್ಲಿ ಪಟ್ಲರ ಪರಿಶ್ರಮಕ್ಕೆ ಶಹಬ್ಬಾಶ್ ಎಂದರೂ ತಪ್ಪಾಗಲಾರದು.

ಆದರೆ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಯಿಂದಾಗಿ ಬೇಸರಗೊಂಡ ಪಟ್ಲರು ಮೇಳದಿಂದ ಹೊರಬರಲಿದ್ದಾರೆಯೇ ? ಎಂಬ ಸಂಶಯವು ಅವರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಭಾಗವತರ ಹಿತೈಷಿಗಳು ಹೇಳುವಂತೆ ಕೆಲವೊಂದು ಉತ್ತರ ಸಿಗದ ಪ್ರಶ್ನೆಗಳು ಈ ರೀತಿಯಾಗಿದೆ.

▪ಕಲಾವಿದರು ತಮ್ಮ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರೂ ಅವರಿಗೆ ಕ್ಷಮೆ ಎಂಬುದು ಇಲ್ಲವೇ?

▪ಕಲಾವಿದರ ನೋವಿಗೆ, ಕಲಾವಿದರ ಕಷ್ಟಕ್ಕೆ ಏನೂ ಬೆಲೆ ಇಲ್ಲವೇ ? ಅಥವಾ ಪರಿಹಾರ ಇಲ್ಲವೇ ? 

 ▪ಹಿರಿಯ ಬಡ ಕಲಾವಿದ ನಗ್ರಿ ಮಹಾಬಲ ರೈ ತನ್ನನ್ನು ಮೇಳಕ್ಕೆ ಸೇರಿಸಿಕೊಳ್ಳಿ ಎಂದು ಕಣ್ಣೀರು ಸುರಿಸಿ, ಶಿರಬಾಗಿ ಕ್ಷಮೆ ಕೇಳಿದರೂ ಆಡಳಿತ ಮಂಡಳಿಯವರ ಮನ ಕರಗಲಿಲ್ಲವೇ ?

▪ಹಿರಿಯ ಕಲಾವಿದ ತಾನು ಮಾಡಿದ ತಪ್ಪಿಗೆ ನನಗೆ ಮೂಟೆ ಹೊರುವ ಕೆಲಸವನ್ನಾದರೂ ಕೊಡಿ ಎಂದಾಗಲೂ ಇವರ ಮನ ಮಿಡಿಯಲಿಲ್ಲವೇ ?

▪ಮೂರು ಮಂದಿ ಕಲಾವಿದರು ದಾರಿ ಕಾಣದೆ ಬೇರೆ ಮೇಳದತ್ತ ಮುಖ ಮಾಡಿದಾಗ ಅವರನ್ನು ಕರೆದು ಮಾತನಾಡದಷ್ಷು ಇವರ ಹೃದಯ ಕಲ್ಲಾಯಿತೇ ?

▪ಪ್ರಥಮ ಹಂತದಲ್ಲಿ , ಕೇವಲ 5 ನೇ ಮೇಳದ ಪಟ್ಲರು ತಯಾರು ಮಾಡಿದ ಕಲಾವಿದರನ್ನಷ್ಷೇ ಗುರಿಯಾಗಿಸಿ ಬದಲಾವಣೆ ಮಾಡಲಾಗಿತ್ತು , ತದನಂತರ ಸಮಸ್ಯೆ ಉಲ್ಬಣವಾದಾಗ ಮಾತ್ರ ಕೆಲವೊಂದು ಬದಲಾವಣೆ ಮಾಡಿರುವುದು ಯಾಕ್ಕಾಗಿ ?

▪ಪಟ್ಲರ ಜತೆ ಕಲಾವಿದರು ಕೈ ಜೋಡಿಸಿದರೆ ವ್ಯಕ್ತಿ ಪೂಜೆ ಎಂಬ ಕ್ಷುಲ್ಲಕ ಆರೋಪಗಳನ್ನು ಮಾಡುತ್ತಿರುವ ಕೆಲವರು, ಈಗ ಇರುವ 5 ನೇ ಮೇಳವನ್ನು ನೋಡಿದಾಗ ತಿಳಿಯುತ್ತದೆ. 6 ನೇ ಮೇಳದಲ್ಲಿದ್ದ ತನಗಿಷ್ಟವಾದ ಕಲಾವಿದರನ್ನು ಸುಣ್ಣಂಬಳರು ಕರೆತಂದಿರುವುದು ವ್ಯಕ್ತಿ ಪೂಜೆಯಲ್ಲವೇ ?

▪5 ನೇ ಮೇಳದ ಸುಮಾರು 90%  ಕಲಾವಿದರನ್ನು ಬೇರೆ ಬೇರೆ ಮೇಳಗಳಿಗೆ ಸಿಕ್ಕಿದಲ್ಲಿ ಬಿಸಾಡಿದ ಉದ್ದೇಶವೇನು ? ಇದು ಎದ್ದು ಕಾಣುವ ಷಡ್ಯಂತ್ರವೆಂದು ಪಟ್ಲರು ಯೋಚಿಸಿದರೇ ?

▪ಈ ಹಿಂದೆಯೂ ಯಕ್ಷಗಾನ ನಡೆಯುತ್ತಿರುವಾಗಲೇ ಮುಖ್ಯ ಚೆಂಡೆ ವಾದಕರು, ವೇಷದಾರಿಗಳು ಅರ್ಧದಲ್ಲಿಯೇ ಮೇಳ ಬಿಟ್ಟು ಹೋಗಿದ್ದು , ಆ ನಂತರ ಎರಡನೇ ದಿವಸಕ್ಕೆ ಅವರನ್ನು ಮೇಳಕ್ಕೆ ಸೇರಿಸಿಕೊಂಡಿಲ್ಲವೇ ?

▪ ತಿರುಗಾಟದ ಮಧ್ಯೆಯೂ ಎಷ್ಟೋ ಮಂದಿ ಕಲಾವಿದರು ಮೇಳ ಬಿಟ್ಟು ಹೊರಹೋಗಿದ್ದು, ಮತ್ತೆ ಅವರನ್ನು ಒಳಸೇರಿಸಿಕೊಂಡಿಲ್ಲವೇ ?

▪ಕಲಾವಿದರ ಪಾಲಿನ ದೇವರೆಂದೇ ಪ್ರಖ್ಯಾತರಾಗಿರುವ ಕಲಾವಿದರ ಕಲ್ಪವೃಕ್ಷ ಶ್ರೀ ಟಿ. ಶ್ಯಾಮ್ ಭಟ್ ಅವರು, ಕಲಾವಿದರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮಾಪಣೆ ಕೇಳಿದ ನಂತರ ಅವರನ್ನು ಮರುಸೇರ್ಪಡೆಗೊಳಿಸಿ ಎಂದು ತಿಳಿಸಿದ್ದರೂ ಅಂತಹ ಗೌರವ್ವಾನಿತ ವ್ಯಕ್ತಿಯ ಮಾತಿಗೆ ಬೆಲೆಯಿಲ್ಲವೇ ?

▪ಕಟೀಲು ತಾಯಿಯ, ಮೇಳದ ಯಜಮಾನರ ಹಾಗೂ ಸಾರ್ವಜನಿಕರ ಕ್ಷಮೆಯಾಚಿಸಿದ ನಂತರ ಕಲಾವಿದರ ಮರುಸೇರ್ಪಡೆ ಬಗ್ಗೆ ಪಟ್ಲರು ಪರಿಪರಿಯಾಗಿ ವಿನಂತಿಸಿದ್ದರೂ, ಒಮ್ಮೆಗೆ ಒಪ್ಪಿಗೆ ಸೂಚಿಸಿದ ಯಜಮಾನರು ತದನಂತರ ಯಾರದ್ದೋ ಮಾತಿಗೆ ಕಟ್ಟುಬಿದ್ದಿರುವುದು ಯಾಕೆ ?

▪ಬದಲಾವಣೆ ಮಾಡುವುದಾದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಲ್ಲಿ ಇಂತಹ ಸಮಸ್ಯೆಗಳು ಉಧ್ಬವಿಸುತ್ತಿರಲಿಲ್ಲ. ಆದರೆ 5 ನೇ ಮೇಳವನ್ನೇ ಗುರಿಯಾಗಿಸಿ ಬದಲಾವಣೆ ಮಾಡಿರುವುದು ಪಟ್ಲರಿಗೆ ಬೇಸರವಾಗಿರಬಹುದೇ ?

▪ಕಲಾವಿದರ ಶ್ರೇಯೋಭಿವೃದ್ಧಿಗೆ ಪಟ್ಲರು ಸ್ಥಾಪಿಸಿದ ಪಟ್ಲ ಫೌಂಡೇಶನ್ ಟ್ರಸ್ಟ್ ಕೆಲವರನ್ನು ಕಣ್ಣುಕುಕ್ಕಿಸುವಂತೆ ಮಾಡಿತೇ ?

▪ ಭಾಗವತರ ಗಮನಕ್ಕೆ ಬಾರದೇ ಕಲಾವಿದರೇ ತೆಗೆದುಕೊಂಡ ಆಕಸ್ಮಿಕ ನಿರ್ಧಾರಗಳು ಸಮಸ್ಯೆಗಳನ್ನು ತಂದೊಡ್ಡಿದ್ದರೂ, ಕೆಲವೊಂದು ಕಾಣದ ಕೈಗಳು ಇಲ್ಲಿಯೂ ಪಟ್ಲರನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿರುವುದು ಪಟ್ಲರ ಗಮನಕ್ಕೆ ಬಂದಿರಬಹುದೇ ?

▪ಮೇಳ ಹೊರಡುವ ದಿನದಂದು ರಂಗಸ್ಥಳದಲ್ಲಿ ತನ್ನ ನಿತ್ಯ ಸಹೋದ್ಯೋಗಿಗಳು ತನ್ನ ಬಳಿ ಇರದೇ ಇರುವುದನ್ನು ಕಂಡು ಕಂಠದಿಂದ ಸ್ವರ ಬಾರದೆ, ಕಣ್ಣಂಚಿನಲ್ಲಿರುವ ನೀರ ಹನಿಯನ್ನು ಒರೆಸುತ್ತಿರುವುದನ್ನು ಕಂಡ ಅಭಿಮಾನಿಯೋರ್ವ ಬಾವುಕನಾದನು.

 ▪ಆರಂಭದಿಂದ ಅಂತ್ಯದ ವರೆಗಿನ ತಿರುಗಾಟದ ಲಿಸ್ಟನ್ನು ಒಮ್ಮೆಲೇ ಪ್ರಕಟಿಸಿದ್ದಲ್ಲಿ ಹೆಚ್ಚಿನ ಒತ್ತಡಗಳನ್ನು ತಪ್ಪಿಸಬಹುದೆಂದು ಸೇವಾಕರ್ತರೊಬ್ಬರು ಹೇಳುತ್ತಿದ್ದರು.

ಒಟ್ಟಾರೆಯಾಗಿ ಕಟೀಲು ಮೇಳದ ಆಡಳಿತ ಮಂಡಳಿಯ ಒಳರಾಜಕೀಯ ದೊಂಬರಾಟದಿಂದ ಪಟ್ಲರಂತೂ ತೀವ್ರವಾಗಿ ನೊಂದಿರುವುದಂತು ಸತ್ಯ.

(ವಾಟ್ಸಾಪ್ ನಲ್ಲಿ ವೈರಲ್ ಆದ ಲೇಖನವಿದು. -ಸಂಪಾದಕ)

Leave a Reply

Your email address will not be published. Required fields are marked *