Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಯಕ್ಷಗಾನ ಬರೇ ಹರಕೆ ಸೇವೆಯೇ ಅಥವಾ ಕಲಾ ಪ್ರಸ್ತುತಿಯೇ ?

# ಕಳೆದ ಕೆಲವು ದಿನಗಳ ಹಿಂದೆ ಕಟೀಲು ಮೇಳದ ಕಲಾವಿದರ ಬದಲಾವಣೆ ಆಗಿ ಮೇಳ ಹೊರಟಾಗ ಭಾರೀ ನಿರೀಕ್ಷೆ ಮೂಡಿಸಿತ್ತು. ಈ ಬಾರಿ ಕಲಾವಿದರ ಬದಲಾವಣೆ ಮೇಳದ ಶ್ರೇಯಸ್ಸಿಗೆ ಅನುಕೂಲಕರ ಎಂಬುದು ಕಲಾಭಿಮಾನಿಗಳ ಅಂಬೋಣವಾಗಿತ್ತು. ಈ ನಡುವೆ ಮೇಳ ತೊರೆದ ಪ್ರತಿಭಾನ್ವಿತ ಕಲಾವಿದರನ್ನು ಬೆಂಬಲಿಸಿದವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಝಾಡಿಸಿದ್ದೂ ಆಯಿತು. ಕೊನೆಗೂ ಹೊರಟ ಮೇಳಗಳಲ್ಲಿ ಅನೇಕ ಬದಲಾವಣೆಗಳಾದವು. ಆದರೆ ಪ್ರಸಂಗಕ್ಕೆ ಬೇಕಾದ ಕಲಾವಿದರನ್ನು ಭಾಗವತರು ಸೂಚಿಸಬೇಕಿತ್ತು. ಪ್ರಸ್ತುತ ಯಾವ ಮೇಳದಲ್ಲಿಯೂ ಆ ಪ್ರಕ್ರಿಯೆ ನಡೆಯುತ್ತಿಲ್ಲ. ಕಲಾವಿದರು ಮಾಡುತ್ತಿರುವ ಪಾತ್ರ ಆ ಕಲಾವಿದರಿಗೆ ಒಗ್ಗುತ್ತಿದೆಯೇ ಎಂಬುದನ್ನು ಗಮನಿಸುತ್ತಿಲ್ಲ. ಪ್ರದರ್ಶನದ ಹರಕೆ ತೀರಿಸುವುದು ಹಾಗೂ ಪಾತ್ರದ ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ.

ಉದಾಹರಣೆಗೆ, ಶ್ರೀ ದೇವಿ ಮಹಾತ್ಮೆ. ಬಾಲಕೃಷ್ಣ ಮಿಜಾರು ಅವರು ತೆಂಕುತಿಟ್ಟಿನ ಅತ್ಯಂತ ಸುಂದರ ಚುಟ್ಟಿ ಇಡುವ ಕಲಾವಿದ. ಆದರೆ ಮೇಳದಲ್ಲಿ ಅದನ್ನು ನೋಡುವ ಅವಕಾಶವಿಲ್ಲ. ಅದೇ ಮೇಳದ ಸ್ತ್ರೀ ವೇಷಧಾರಿಯೊಬ್ಬರಿಗೆ ಬ್ರಹ್ಮನ ಪಾತ್ರ ನೀಡಲಾಗಿದೆ. ಇನ್ನೋರ್ವ ಕಲಾವಿದರಂತೂ ಮಹಿಷ ಪಾತ್ರದಿಂದ ಹಿಂಬಡ್ತಿ ಹೊಂದಿ ದೇವಿಯ ಸೇವೆಗಾಗಿ ಶಂಖದುರ್ಗರ ಪಾತ್ರ ನಿರ್ವಹಿಸಲು ತೊಡಗಿದ್ದಾರೆ.
ಈ ರೀತಿ ಬೇರೆ ಮೇಳದಲ್ಲಿಯೂ ಸಾಕಷ್ಟು ಉದಾಹರಣೆ ಇದೆ.

ಜೂನಿಯರ್ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿಈ ವ್ಯವಸ್ಥೆ ಮಾಡಿದ್ದೇವೆ ಎಂಬ ಸಮರ್ಥನೆ ನೀಡಬಹುದು. ಆದರೆ ಅದನ್ನು rotation ಪದ್ಧತಿಯಲ್ಲಿ ನಡೆಸಬಹುದಲ್ಲವೇ. ಮೇಳದ ವ್ಯವಸ್ಥೆಯಲ್ಲಿ ಕಲಾಭಿಮಾನಿಗಳು ಮಧ್ಯ ಪ್ರವೇಶಿಸಬಾರದು ನಿಜ. ಆದರೆ ಯಕ್ಷಗಾನಕ್ಕೆ ಹೋಗಿ ಪ್ರೇಕ್ಷಕರು ನಿದ್ರೆ ಮಾಡುವ ಪರಿಸ್ಥಿತಿ ಬಂದರೆ ವ್ಯವಸ್ಥೆಯಿಂದಾಗುವ ಪ್ರಯೋಜನವೇನು ?

ಇನ್ನಾದರೂ ಪ್ರದರ್ಶನದ ಗುಣಮಟ್ಟವನ್ನು ಕಾಯುವ ನಿಟ್ಟಿನಲ್ಲಿ ಪ್ರಯತ್ನವಾಗಲಿ. ಕಲಾಭಿಮಾನಿಗಳ ಸಲಹೆಯನ್ನು ಕೂಡಾ ಗಮನಿಸಲಿ. ಪಾತ್ರ ಹಂಚಿಕೆಯಲ್ಲಿ ಭಾಗವತರಿಗೆ ಸಂಪೂರ್ಣ ಜವಾಬ್ದಾರಿ ನೀಡಲಿ. ಭಾಗವತರ ನಿರ್ದೇಶನದಲ್ಲಿ ಕಲಾವಿದರು ಬೆಳೆಯುವಂತಾಗಲಿ. ಅಮ್ಮುಂಜೆಯವರಂಥ ಪ್ರತಿಭೆಗೆ ಮತ್ತೊಮ್ಮೆ ಅವಕಾಶ ದೊರೆಯಲಿ. ಕಟೀಲು ಮೇಳ ಗತವೈಭವಕ್ಕೆ ಮರಳಲಿ.

ಓರ್ವ ಯಕ್ಷಾಭಿಮಾನಿ

(* ಸಾಂದರ್ಭಿಕ ಚಿತ್ರ)

Leave a Reply

Your email address will not be published. Required fields are marked *