Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಉಪ್ಪಿನಕಾಯಿ-1: ಶ್ರೀರಾಮ ದಿವಾಣ

* ನ್ಯಾಯಾಂಗದಲ್ಲಿ ದುರ್ಬಲರ ಪ್ರಾತಿನಿದ್ಯ ಹೆಚ್ಚಲಿ. – ರಮಾನಾಥ ಕೋವಿಂದ್ (ರಾಷ್ಟ್ರಪತಿಗಳು)

# ನ್ಯಾಯಾಂಗದಲ್ಲಿ ಹಣ-ಹೆಣ್ಣು-ಮಣ್ಣು ಎಂಬ ಅಮಿಷಗಳಿಗೆ ಬಲಿಯಾಗದ, ಬೆದರಿಕೆಗಳಿಗೆ ಜಗ್ಗದ, ಭಡ್ತಿಗಾಗಿ, ನಿವೃತ್ತರಾದ ಮೇಲೆಯೂ ಉನ್ನತ ಸ್ಥಾನ ಮಾನಗಳು ಸಿಗಬೇಕೆಂಬ ಕಾರಣಕ್ಕೆ ಆಡಳಿತ ಪಕ್ಷದ ಪರ ಪಕ್ಷಪಾತವೆಸಗದವರ ಸಂಖ್ಯೆ ಹೆಚ್ಚಲಿ.

* ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ಹಾವಲ್ಲ, ಇದು ತಪ್ಪು ಮಾಡುವವರಿಗೆ ಕಟ್ಟುವ ಹಗ್ಗ. – ಕೆ.ಆರ್.ರಮೆಶ್ ಕುಮಾರ್ (ಆರೋಗ್ಯ ಮಂತ್ರಿ)

# ಸರಕಾರಿ ಭೂಮಿಯನ್ನು ಖಾಸಗಿ ಆಸ್ಪತ್ರೆ ನಿರ್ಮಿಸಲು ಅನಿವಾಸಿ ಉದ್ಯಮಿಗೆ ಕೊಟ್ಟು ಪ್ರತಿಯಾಗಿ ಕೋಟಿ ಬೆಲೆಯ ಹ್ಯೂಬ್ಲೋಟ್ ವಾಚ್ ನ್ನು ಲಂಚವಾಗಿ ಪಡೆದುಕೊಂಡ, ಆಸ್ಪತ್ರೆಗಳಲ್ಲಿ ನರ್ಸ್ ಗಳಿಗೆ ಲಂಚ ಕೊಡುವುದನ್ನು, ಭ್ರಷ್ಟಾಚಾರವನ್ನು ಸಮರ್ಥಿಸುವ, ಬೆಂಬಲಿಸುವ, ಪ್ರೋತ್ಸಾಹಿಸುವ ಮಂತ್ರಿಗಳನ್ನು ಕಟ್ಟಿ ಹಾಕಲು ಸಹ ಇಂಥ ಹಗ್ಗವಿರಲಿ.

* ವೈದ್ಯರು ಯಮರಾಜನ ಸಹೋದರರು. – ಕೆ.ಆರ್.ರಮೆಶ್ ಕುಮಾರ್ (ಆರೋಗ್ಯ ಮಂತ್ರಿ)

# ಮಂತ್ರಿಗಳು ಯಮರಾಜನ ಅಪ್ಪನಾ ?

* ಕಚ್ಚುವ ಹಾವುಗಳಿಗಿಂತ, ಕಚ್ಚುವ ಮನುಷ್ಯರಿಂದ ಹೆಚ್ಚು ಜಾಗೃತವಾಬೇಕಾಗಿದೆ. – ಕೆ.ಆರ್.ರಮೇಶ್ ಕುಮಾರ್ (ಆರೋಗ್ಯ ಮಂತ್ರಿ)

# ನಿಜವಾದ ಮಾತು. ಅದಕ್ಕೆ ಜನರು ಹೆಚ್ಚಾಗಿ ಮಂತ್ರಿಗಳಿಗೆ ಉಗಿಯುವುದು.

* ಪ್ರೀತಿಸುವ ಮನಸ್ಥಿತಿ ಇಲ್ಲದಿದ್ದರೂ, ಅವರನ್ನು ಧ್ವೇಷಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬಾರದು. – ಕು.ಗೋ. (ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ)

# ಬಲಪಂಥೀಯ, ಎಡಪಂಥೀಯ, ಪ್ರಗತಿಪರ ಸಂಘಟನೆಗಳ ನಾಯಕರಿಗೆ, ಹಿಂದೂ-ಮುಸ್ಲೀಂ ಕೋಮುವಾದಿಗಳಿಗೆ, ಸಾಧು ಸಂತರಿಗೆ ನಿಮ್ಮ ಮಾತು ಮುಟ್ಟಲಿ, ತಟ್ಟಲಿ.

* ದೇಶಪ್ರೇಮದಿಂದ ಸೇನೆ ಸೇರಬೇಕು. ಕೇವಲ ವೃತ್ತಿಗಾಗಿ ಸೇನೆ ಸೇರಬಾರದು. – ಡಾ.ಸುಬ್ರಹ್ಮಣ್ಯ ಭಟ್ (ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ)

# ಸೇನೆಯನ್ನೇ ವಿಸರ್ಜಿಸಬೇಕೆಂದು ನಿಮ್ಮ ಮಾತಿನ ಅರ್ಥವಾ ? ಸೇನೆ ಸೇರದವರಿಗೆ ಸೇನೆ ಸೇರಲು ಪ್ರೋತ್ಸಾಹಿಸುವ ಕೆಲಸವಾಗಲಿ.

* ಉಡುಪಿ ಕೃಷ್ಣ ಮಠದಲ್ಲಿ ಪಂಕ್ತಿಬೇಧವಿಲ್ಲ. ಇಲ್ಲಿ ಭೋಜನ ಶಾಲೆಯಲ್ಲಿ ದಲಿತರು, ಬ್ರಾಹ್ಮಣರು ಏಕಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. – ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ (ಉಡುಪಿಯಲ್ಲಿ ಸುದ್ಧಿಗೋಷ್ಠಿಯಲ್ಲಿ)

# ರಾತ್ರಿಯನ್ನು ಹಗಲು ಎನ್ನಲು ಪೇಜಾವರ ಸ್ವಾಮೀಜಿಗೆ ಮಾತ್ರವೇ ಸಾಧ್ಯ

Leave a Reply

Your email address will not be published. Required fields are marked *