Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅದೇನು ಕೃಷ್ಣನ ಆದರ್ಶ ?

ಉಪ್ಪಿನಕಾಯಿ-2: ಶ್ರೀರಾಮ ದಿವಾಣ

 

  • ಉಡುಪಿಯಲ್ಲಿ ನಡೆದ 15ನೇ ಧರ್ಮ ಸಂಸದ್ ನಲ್ಲಿ ಮೀಸಲಾತಿ ವಿರುದ್ಧ ಮಾತನಾಡಿದ ಕಾಶಿ ಬನಾರಸ್ ನ ಶಂಕರಾಚಾರ್ಯ ಸ್ವಾಮೀ ನರೇಂದ್ರನ್ ಸರಸ್ವತಿ ಭಾಷಣವನ್ನು ಸಂಘಟಕರು ತಡೆದರು. – ಪತ್ರಿಕಾ ವರದಿ.

# ಆಂತರಿಕ ಸಭೆಗಳಲ್ಲಿ ಮಾತನಾಡಬೇಕಾದ್ದನ್ನು ಬಹಿರಂಗ ಸಭೆಗಳಲ್ಲಿ ಮಾತನಾಡಿದರೆ ಸಂಘಟಕರು ತಡೆಯದೇ ಮತ್ತೇನು ತಾನೇ ಮಾಡುತ್ತಾರೆ, ಪಾಪ. ಕಾಲು ಕತ್ತರಿಸಬೇಕು, ಕೈ ಕತ್ತರಿಸಬೇಕು, ನಾಲಿಗೆ ಕತ್ತರಿಸಬೇಕು, ತಲವಾರು ಹಿಡಿಯಿರಿ, ಮತಾಂತರ, ಲವ್ ಜಿಹಾದ್, ಮುಸ್ಲೀಂ ಭಯೋತ್ಪಾದನೆ ಇಂಥ ಸಿದ್ಧ ವಿಷಯಗಳನ್ನು ಮಾತನಾಡುವುದನ್ನು ಬಿಟ್ಟು, ಪಾಪ, ಸ್ವಾಮೀ…

  • ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸ್ಲೀಮರಿಗೆ ಒಬ್ಬಳೇ ಒಬ್ಬಳು ಹುಡುಗಿ ಸಿಗದಂತೆ ಮಾಡುತ್ತೇವೆ. ನಮ್ಮ ಬಜರಂಗ ದಳದಲ್ಲೂ ಪ್ರೀತಿ ಮಾಡಲು ಯುವಕರಿದ್ದಾರೆ. ನಮಗೆ ರಾಮನ ಆದರ್ಶ ಮಾತ್ರವಲ್ಲ, ಕೃಷ್ಣನ ಆದರ್ಶವೂ ಗೊತ್ತು.

– ವಿಹಿಂಪ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ. (ಹಿಂದೂ ಸಮಾಜೋತ್ಸವದಲ್ಲಿ ಭಾಷಣ ಮಾಡುತ್ತಾ)

# ಅದೇನು ಕೃಷ್ಣನ ಆದರ್ಶ ? ಕೃಷ್ಣನ ಪೂಜೆ ಮಾಡುವ ಸನ್ಯಾಸಿಯರೂ ಕೃಷ್ಣನ ಅದೇ ಆದರ್ಶವನ್ನು ಪಾಲಿಸುತ್ತಾರಾ ಹೇಗೆ ? ಎಲ್ಲಕ್ಕೂ ಮೊದಲು; ಬ್ರಾಹ್ಮಣ ಪುರೋಹಿತರಿಗೆ, ಅಡುಗೆಯವರಿಗೆ ಬ್ರಾಹ್ಮಣ ದಂಪತಿಗಳೇ ತಮ್ಮ ಮಗಳನ್ನು ಕೊಟ್ಟು ವಿವಾಹ ಮಾಡದಿರುವ ಮತ್ತು ಬ್ರಾಹ್ಮಣ ಯುವತಿಯರು ಸಹ ಇವರನ್ನು ಮದುವೆಯಾಗಲು ನಿರಾಕರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿ.

 

  • ಪ್ರಧಾನಿ ಮೋದಿ ‘ಸುಳ್ಳು’ ಹೇಳುವುದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿದ್ದು, ದೇಶದ ಪ್ರಗತಿಯನ್ನೇ ಮರೆತಿದ್ದಾರೆ.            – ಮಾಯಾವತಿ (ಬಿಎಸ್ಪಿ ನಾಯಕಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ)

# ಸುಳ್ಳಾದರೇನು ? ಬಂಡವಾಳವಂತೂ ಹೌದಲ್ಲ ? ಬಂಡವಾಳದಿಂದಲೇ ತಾನೇ ಅಭಿವೃದ್ಧಿ ? ಮತ್ಯಾಕೆ ತಕರಾರು ?

 

  • ಭಾರತದಲ್ಲಿ ಹಿಂದೂ ಎಂದವರನ್ನು ಕಮ್ಯೂನಲ್ (ಕೋಮುವಾದಿ) ಎನ್ನಲಾಗುತ್ತದೆ. – ಟಿ.ವಿ.ಮೋಹನದಾಸ್ ಪೈ.                                                                                                                                                                                                  # ಹೋ…, ಭಯಂಕರ ಸಂಶೋಧನೆ. ಡಾಕ್ಟರೇಟ್ ಖಂಡಿತಾ ಕೊಡಬಹುದು, ಕೊಡಲೇಬೇಕು !
  • ಉತ್ತರ ಪ್ರದೇಶದ ಪೌರಸಂಸ್ಥೆಗಳ  ಚುನಾವಣಾ ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳಲ್ಲಿನ ದೋಷದಿಂದಾಗಿ ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ. – ಬಿಎಸ್ಪಿ ಅಭ್ಯರ್ಥಿ ಬುಲ್ ಬುಲ್ ಗೋಡಿಯಾಲ್ ಆರೋಪ, ಲಕ್ನೋ ಕೋರ್ಟಿಗೆ ಅರ್ಜಿ.

     # ಗುಜರಾತ್ ಮಾದರಿ ಚುನಾವಣೆ ಇರಲೂಬಹುದು.

 

  • ಬೆಂಗಳೂರು ಮಾಚೋನಹಳ್ಳಿಯ 96 ಎಕರೆ 12 ಗುಂಟೆ ‘ರಕ್ಷಿತ ಅರಣ್ಯ’ವನ್ನು 31 ಜಾತಿಗಳ ಸಂಘ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. – ಪತ್ರಿಕಾ ವರದಿ.

# ಜಾತ್ಯಾತೀತ ಸರಕಾರವೆಂದರೆ ಜಾತಿಗಳನ್ನು, ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡುವುದು, ಪ್ರೋತ್ಸಾಹಿಸುವುದು ಎಂದರ್ಥವಂತೆ ! ಉಡುಪಿಯಲ್ಲಿ ಬಡವರ ಸರಕಾರಿ ಆಸ್ಪತ್ರೆಯನ್ನು ಭೂಮಿ ಸಹಿತ ಅನಿವಾಸಿ ಉದ್ಯಮಿಗೆ ನೀಡಿ ಕೋಟಿ ಬೆಲೆಯ ಹ್ಯೂಬ್ಲೋಟ್ ವಾಚನ್ನು ಲಂಚವಾಗಿ ಪಡಕೊಂಡ ಸಿದ್ದರಾಮಯ್ಯರಿಂದ ಬೇರೇನು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಸರಕಾರದ ‘ಸರಕಾರಿ ಭೂದಾನ ಯೋಜನೆ’ !!

Leave a Reply

Your email address will not be published. Required fields are marked *