Realtime blog statisticsweb statistics
udupibits.in
Breaking News
# ನವೆಂಬರ್ 1 – 2: ಕಾರ್ಕಳ ತಾಲೂಕು ಕಾಂತಾವರದ ಕನ್ನಡ ಭವನದಲ್ಲಿ ಕಾಂತಾವರ ಉತ್ಸವ, ಪ್ರಶಸ್ತಿಗಳ ಪ್ರದಾನ, 12 ಕೃತಿಗಳ ಬಿಡುಗಡೆ, ತಾಳಮದ್ದಳೆ

ಮಾಂಸವಿರುವ ಎಲ್ಲಾ ಪ್ರಾಣಿ, ಪಕ್ಷಿ ಮತ್ತು ಮನುಷ್ಯರನ್ನು ನಾಶಪಡಿಸಬೇಕು.      

ಉಪ್ಪಿನಕಾಯಿ-3: ಶ್ರೀರಾಮ ದಿವಾಣ

 

  • ಟಿ.ವಿ. ಧಾರವಾಹಿಯಲ್ಲಿನ ಪಾತ್ರವೊಂದರ ಅನುಕರಣೆ ಮಾಡಲು ಹೋದ ದಾವಣಗೆರೆ ಹರಿಹರದ ಬಾಲಕಿ ಪ್ರಾರ್ಥನಾ (7 ವರ್ಷ) ಸಾವು. – ಪತ್ರಿಕಾ ವರದಿ.

# ಟಿ.ವಿ. ಕಾರ್ಯಕ್ರಮಗಳು, ಟಿ.ವಿ.ಯಲ್ಲಿ ಬರುವ ಪಾತ್ರಗಳೇ ಆದರ್ಶ ಮತ್ತು ಮಾದರಿ ಎಂಬ ಭ್ರಮೆ ಹುಟ್ಟಿಸುವ ಹೆತ್ತವರು, ಸಮಾಜ ಮಾಧ್ಯಮಗಳೇ ಈ ಸಾವಿಗೆ ಕಾರಣ.

 

  • ಕಾಂಗ್ರೆಸ್ ದೇಶವನ್ನು ಮಾರಿದೆಯಾ ? – ಮಲ್ಲಿಕಾರ್ಜುನ ಖರ್ಗೆ (ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ)

# ಕಾಂಗ್ರೆಸ್ ದೇಶದ ಖಜಾನೆಯನ್ನು ಲೂಟಿ ಹೊಡೆದದ್ದಷ್ಟೆ. ಅದನ್ನೇ ಬಿಜೆಪಿ ದೇಶ ಮಾರಿದ್ದು ಎಂದು ಪ್ರಚಾರ ಮಾಡಿದ್ದು. ಆಗ ಕಾಂಗ್ರೆಸ್ ಮಾಡಿದ್ದನ್ನೇ ಈಗ ಪ್ರಧಾನಿ ಮೋದಿ ಮಾಡುತ್ತಿದ್ದಾರಷ್ಟೆ.

 

  • ಜಾತ್ಯತೀತರು, ಪ್ರಗತಿಪರರು, ಕ್ರಾಂತಿಕಾರಿಗಳ ಹೆಸರಿನಲ್ಲಿ ದೇಶ ಹಾಗೂ ಜನರ ದಿಕ್ಕುತಪ್ಪಿಸುತ್ತಿರುವರದ್ದು ಇದೇ ಕೊನೆಯ ತಲೆಮಾರು. – ಅನಂತಕುಮಾರ್ ಹೆಗಡೆ (ಕೇಂದ್ರದ ಮೋದಿ ಸರಕಾರದ ಮಂತ್ರಿ)

# ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶರಂತೆ ಹತ್ಯೆ ಆಗ್ತಾರೆ ಎಂದು ಹೇಳ್ತಿದ್ದೀರಾ ಹೆಗಡೆಯವರೇ ?

 

  • ಮುಖ್ಯ ಕಾರ್ಯದರ್ಶಿ ಸುಭಾಷ್‍ಚಂದ್ರ ಖುಂಟಿಆ ಅವರು ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿದ್ದಾರೆ.               – ಮುಖ್ಯಮಂತ್ರಿ ಸಿದ್ದರಾಮಯ್ಯ.

# ಉಡುಪಿಯ ಸರಕಾರ ಆಸ್ಪತ್ರೆ ಮತ್ತು ಸರಕಾರಿ ಭೂಮಿಯನ್ನು ಉದ್ಯಮಿ ಬಿ.ಆರ್.ಶೆಟ್ಟಿರಿಗೆ ಕೊಟ್ಟು, ಅವರ ವಿದೇಶದಲ್ಲಿರೋ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರೋ ವೈದ್ಯರಿಂದ ಕೋಟಿ ಬೆಲೆಯ ಹ್ಯೂಬ್ಲೋಟ್ ವಾಚನ್ನು ತಗೊಂಡು ಕೈ ಅಶುದ್ಧ ಮಾಡಿಕೊಂಡವರು ನೀವು ಅನ್ನೋದಷ್ಟೆ ವಿಷಯ ಮತ್ತು ವಿವಾದವಾಗಿರೋದು ಮುಕ್ಯಮಂತ್ರಿಗಳೇ..

 

  • ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಾಂಸ ರಫ್ತಿನ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಭಾರತೀಯ ಸಂಸ್ಕೃತಿ– ಪರಂಪರೆಯನ್ನು ಎತ್ತಿ ಹಿಡಿಯುತ್ತೇನೆ ಎನ್ನುವ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮಾತ್ರ ದಿಟ್ಟ ಕ್ರಮ ಕೈಗೊಂಡಿಲ್ಲ. – ದಯಾನಂದ ಸ್ವಾಮೀಜಿ (ವಿಶ್ವ ಪ್ರಾಣಿ ದಯಾ ಮಂಡಳಿ ಅಧ್ಯಕ್ಷರು)

#  ಹೀಗೆಲ್ಲಾ ಹೇಳಬಾರದು ಸ್ವಾಮೀಜಿಯವರೇ, ಮೋದಿ ವಿರುದ್ಧ ಮಾತನಾಡಿ ದೇಶದ್ರೋಹಿ, ಹಿಂದೂ ವಿರೋಧಿ ಅಂತ ಅನ್ನಿಸಿ ಬಿಡ್ಬೇಕು ಎಂಬ ಆಸೆಯಾ ನಿಮಗೆ ? ನಕಲಿ ಸಂತರ ಪಟ್ಟಿಯಲ್ಲೂ ನಿಮ್ಮ ಹೆಸರು ಹಾಕಿಬಿಟ್ಟಾರು ಜಾಗ್ರತೆ.

 

  • ಆರೋಗ್ಯ ಸೇವೆಯಲ್ಲಿ ನೆರೆಯ ಕೇರಳ ಮತ್ತು ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕ ತೀರಾ ಹಿಂದೆ ಉಳಿದಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳ ಸಂಖ್ಯೆಯಲ್ಲಿ ಶೇ 12ರಷ್ಟು ಕುಸಿತವಾಗಿದೆ. ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಂದ ದೂರವಾಗುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ತೀವ್ರ ಅನಾರೋಗ್ಯದಿಂದ ಬಳತ್ತಿರುವವರಲ್ಲಿ ಶೇ. 60ರಷ್ಟು ಜನ ಖಾಸಗಿ ಆಸ್ಪತ್ರೆಗಳಿಗೆ ಹೋದರೆ, ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಶೇ. 80ರಷ್ಟು ಜನಖಾಸಗಿ ಆಸ್ಪತ್ರೆಗಳನ್ನು ನೆಚ್ಚಿಕೊಂಡಿದ್ದಾರೆ. – ಕರ್ನಾಟಕ ಜ್ಞಾನ ಆಯೋಗದ ವರದಿ.

# ಸರಕಾರಿ ಆಸ್ಪತ್ರೆ ಇರೋದೇ ಗುತ್ತಿಗೆದಾರರ, ಅಧಿಕಾರಿಗಳ ಮತ್ತು ಮಂತ್ರಿಗಳ ಆರ್ಥಿಕಾರೋಗ್ಯದ ಅಭಿವೃದ್ಧಿಗೆ. ಹೆಚ್ಚು ಜನ ಖಾಸಗಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆಂದೇ ಸಿದ್ಧರಾಮಯ್ಯ, ರಮೇಶ್ ಕುಮಾರ್, ಪ್ರಮೊದ್ ಮಧ್ವರಾಜ್ ಎಂಬ ತ್ರಿಮೂರ್ತಿಗಳು ಉಡುಪಿ ಸರಕಾರಿ ಆಸ್ಪತ್ರೆಯನ್ನು ಜಮೀನು ಸಹಿತ ಉದ್ಯಮಿ ಶೆಟ್ಟಿರಿಗೆ ಕೊಟ್ಟಿದ್ದಾರೆ.

 

  • ಗುಜರಾತಿನ ಜನರು 22 ವರ್ಷದಿಂದ ಬಿಜೆಪಿ ಅಧಿಕಾರ ಅವಧಿಯಲ್ಲಿ ಮಾಡಿರುವ ಸಾಧನೆ ಏನು ಎಂದು ಕೇಳುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

# ಟ್ವೀಟ್ ಮಾಡಿದ್ದು, ಮತ್ತೇನು ಸಣ್ಣ ಸಾಧನೆಯಾ ?

 

  • ಪೇಜಾವರ ಸ್ವಾಮೀಜಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂದೆ ಕಾಂಗ್ರೆಸ್‌ ಸರ್ಕಾರ ಮತ್ತು ಬುದ್ಧಿಜೀವಿಗಳ ಕೈವಾಡ ಇದೆ. – ಬಿಜೆಪಿ ನಾಯಕ.

# ಧರ್ಮ ಸಂಸದ್ ಹಿಂದೆ ಬಿಜೆಪಿ ಕೈವಾಡ ಇದೆಯಾ ?

 

  • ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ‘ಆಳ್ವಾಸ್‌ ನುಡಿಸಿರಿ’ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್‌ ಆಳ್ವ ಅವರು ‘ಧರ್ಮಸಂಸದ್‌ ‘ನಲ್ಲಿ ಭಾಗಿಯಾದ ಕಾರಣಕ್ಕೆ ಪ್ರಶಸ್ತಿಯನ್ನು ತಿರಸ್ಕರಿಸಿರುವುದಾಗಿ ದೊರೆಸ್ವಾಮಿ ಹೇಳಿದ್ದಾರೆ. – ವರದಿ.

# ಆದರ್ಶ ವ್ಯಕ್ತಿಯ ಮಾದರಿ ನಡೆ.

 

  • ಮದುವೆಯಲ್ಲಿ ಮಾಂಸಾಹಾರಿ ಊಟ ನಿಷೇಧಿಸಬೇಕು. – ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ.

# ಮಾಂಸಾಹಾರ ತಯಾರು ಮಾಡುವವರನ್ನು ಜೈಲಿಗಟ್ಟಬೇಕು, ಮಾಂಸವಿರುವ ಎಲ್ಲಾ ಪ್ರಾಣಿ, ಪಕ್ಷಿ ಮತ್ತು ಮನುಷ್ಯರನ್ನು ನಾಶಪಡಿಸಬೇಕು.

Leave a Reply

Your email address will not be published. Required fields are marked *