Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಸಂಘ ದೋಷ

ಉಪ್ಪಿನಕಾಯಿ-4: ಶ್ರೀರಾಮ ದಿವಾಣ

 

  • ಯುವಜನತೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ವೈಫೈ ಮುಂತಾದವುಗಳಲ್ಲಿ ಮುಳುಗಿಹೋಗದೆ, ಇವುಗಳ ದಾಸ್ಯದಿಂದ ಹೊರಬರಬೇಕು. – ಜಯಂತ ಕಾಯ್ಕಿಣಿ (ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನದಲ್ಲಿ)

#  ಹಿಂದಿನ ಮಾತು: ‘ಧರ್ಮ ಎನ್ನುವುದು ಡ್ರಗ್ಸ್ ಇದ್ದ ಹಾಗೆ’, ಇಂದಿನ ಮಾತು: ‘ವಾಟ್ಸ್ ಆ್ಯಪ್, ಫೇಸ್ ಬುಕ್ ಗಳು ಡ್ರಗ್ಸ್ ಕುಡಿದ ಹಾಗೆ’

  • ಯುವಜನರು ರಾಜಕೀಯ ಪಕ್ಷಗಳಿಂದ ಹೊರಬಂದು ಪ್ರಜ್ಞಾವಂತರಾಗಿ, ಮಾನವಂತರಾಗಿ, ಸ್ವತಂತ್ರ ಬದುಕು ನಡೆಸಬೇಕು. ಸಾಕ್ಷಿಪ್ರಜ್ಞೆ ಬೆಳೆಸಿಕೊಳ್ಳಬೇಕು. – ಜಯಂತ ಕಾಯ್ಕಿಣಿ (ಸಾಹಿತ್ಯ ಸಮ್ಮೇಳನದಲ್ಲಿ)

# ರಾಜಕೀಯ ಎಂಬುದು ಒಂದು ವಿಷ ಚಕ್ರವ್ಯೂಹ. ವಿಷ ಕುಡಿದು ಒಳಗೆ ಹೋದವರು ಹೊರಗೆ ಬಂದರೆ ಔಷಧ ಮಾಡಬಹುದು. ಒಳಗೆ ಇದ್ದರೆ ಅದೇ ವಿಷದಲ್ಲೇ ಅಲ್ಲೇ ಸಾಯುತ್ತಾರೆ. ದೇಶವನ್ನೂ ಸಾಯಿಸುತ್ತಾರೆ.

 

  • ದೇಶದ ಜನರನ್ನು ಒಗ್ಗೂಡಿಸಲು ಸಂವಿಧಾನದಿಂದ ಮಾತ್ರ ಸಾಧ್ಯ. ಸಂವಿಧಾನ ಇರುವುದರಿಂದಲೇ ದೇಶದ ಎಲ್ಲಾ ಜನರೂ ಒಂದಾಗಿ ಬಾಳುತ್ತಿದ್ದಾರೆ. – ನರೇಂದ್ರ ಮೋದಿ (ಪ್ರಧಾನಮಂತ್ರಿ)

#  ಪ್ರಧಾನಿಯಾದ ಮೇಲೆ ಆದ ಜ್ಞಾನೋದಯ, ಪೇಜಾವರರಿಗೂ ಇದನ್ನ ಹೇಳಿ.

 

  • ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅಂತ್ಯಕಾಲ ಸಮೀಪಿಸಿದೆ. ಜಗದೀಶ ಶೆಟ್ಟರ್ (ಬಿಜೆಪಿ ನಾಯಕ)

# ಹೋ…, ಇದಕ್ಕಾ ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಣ್ಣೀರು ಸುರಿಸ್ತಾ ಇರೋದು ?

 

  • ಬಿಜೆಪಿ ನಾಯಕರ ಮನಸ್ಸು ಕಸದ ತೊಟ್ಟಿ, ದ್ವೇಷ ಹುಟ್ಟು ಹಾಕುವ ಯಂತ್ರಗಳು, ಮೌಖಿಕವಾಗಿ ಭೇದಿ ಮಾಡುತ್ತಾರೆ ಮತ್ತು ಮಾನಸಿಕ ಮಲಬದ್ಧತೆಯುಳ್ಳವರು. – ದಿನೇಶ್‌ ಗುಂಡೂರಾವ್‌, ಪ್ರೊ.ಕೆ.ಇ. ರಾಧಾಕೃಷ್ಣ (ಕಾಂಗ್ರೆಸ್ ನಾಯಕರು)

# ಸಂಘದೋಷ

 

  • ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲಾ ತಂತ್ರಗಳೂ ಸವಕಲು ನಾಣ್ಯದಂತಾಗಿವೆ. ಇದು ಮನವರಿಕೆ ಆದ ಮೇಲೆ ‘ಗೋಹತ್ಯೆ ನಿಷೇಧ’ ವಾಪಸ್ ಪಡೆಯೋ ನಿರ್ಧಾರಕ್ಕೆ ಬಂದಿರಬಹುದು. – ಎಚ್.ಡಿ.ದೇವೇಗೌಡ (ಮಾಜಿ ಪ್ರಧಾನಿ)

# ಅಧಿಕಾರದ ಅಮಲೇರಿಸಿಕೊಂಡವನು ಅದರಿಂದ ಹೊರಬರಲಾರ. ಅಧಿಕಾರಕ್ಕಾಗಿ ಆತ ಏನು ಬೇಕಾದರೂ ಮಾಡಬಲ್ಲ, ಹೇಳಬಲ್ಲ.

 

  • ‘ಆಧಾರ್‌’ ಮೂಲಕ ಬೇನಾಮಿ ಆಸ್ತಿ ಪತ್ತೆ ಮಾಡಲಾಗುವುದು. – ಪ್ರಧಾನಿ ನರೇಂದ್ರ ಮೋದಿ.

# ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಕೊಡುಗೆಯೇ, ಈಗ ಮೋದಿಗೆ ಬ್ರಹ್ಮಾಸ್ತ್ರ.

 

  • ನರೇಂದ್ರ ಮೋದಿ ಸರಕಾರದ್ದು ಬರಿಯ ಮಾತು, ಕಾರ್ಯಾಚರಣೆ ಶೂನ್ಯ. – ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

# ಆಧುನಿಕ ಉತ್ತರ ಕುಮಾರ

 

  • ವಿವಾದ ಎಬ್ಬಿಸಿ ಚಿತ್ರಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಾಧ್ಯಮಗಳೂ ಇಂಥ ವಿವಾದಗಳನ್ನು ಪೋಷಿಸುತ್ತಿವೆ. – ಸಂಸದೀಯ ಸಮಿತಿ

# ರೋಗಿ ಬಯಸೋದು ಹಾಲು, ವೈದ್ಯ ಹೇಳಿದ್ದೂ ಹಾಲು-ಹಣ್ಣು.

 

  • ಉತ್ತಮ ಸಮಾಜ ನಿರ್ಮಾಣಕ್ಕೆ ಓದು ಪೂರಕ. ಓದಿ ತಿಳುವಳಿಕೆ ಹೊಂದಿರುವವರು ಸಾಮಾಜಿಕ ಗಲಭೆಗಳಲ್ಲಿ ಪಾಲ್ಗೊಂಡ ನಿದರ್ಶನಗಳಿಲ್ಲ. – ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

# ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ಬಿಜೆಪಿ ಮುಂತಾದ ಆರ್ ಎಸ್ ಎಸ್ ಪರಿವಾರದ ಕಾರ್ಯಕರ್ತರು ಇನ್ನಾದರೂ ಓದುವ ಅಭ್ಯಾಸ ಬೆಳೆಸಿಕೊಂಡು ಸಾಮಾಜಿಕ ಶಾಂತಿಗೆ ಕಾರಣರಾಗಲಿ.

Leave a Reply

Your email address will not be published. Required fields are marked *