Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಅಂತಾರಾಷ್ಟ್ರೀಯ ಕಲಾವಿದನನ್ನು ಮರೆತ ಸರಕಾರ, ಜಿಲ್ಲಾಡಳಿತ, ಬೆಳ್ಳೆ ಗ್ರಾಪಂ !

ಉಡುಪಿ: ಉಡುಪಿ ತಾಲೂಕಿನ ಕಟ್ಟಿಂಗೇರಿ ದೇವಸ್ಥಾನದ ಬಳಿ ಇರುವ ಕೆರೆ ಬದಿಯಲ್ಲಿ ಸಣ್ಣ ಗುಡಿಸಲಿನಲ್ಲಿ ಜನಿಸಿದ ಕೆ.ಕೆ. ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ಅವರು ವಿಶ್ವವಂದ್ಯ ಕಲಾವಿದರಾಗಿ ಊರಿನ, ಜಿಲ್ಲೆ, ರಾಜ್ಯ, ರಾಷ್ಟ್ರದ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದವರು. ಇಂಥ ಶ್ರೇಷ್ಠ ಕಲಾವಿದರ ನೆನಪು ಮಾತ್ರ ಸರಕಾರಗಳಿಗಾಗಲೀ, ಕನಿಷ್ಟ ಉಡುಪಿ‌ ಜಿಲ್ಲಾಡಳಿತ ಮತ್ತು ಬೆಳ್ಳೆ ಗ್ರಾಮ ಪಂಚಾಯತ್ ಆಡಳಿತಕ್ಕೆ‌ ಸಹ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕೆ.ಕೆ. ಹೆಬ್ಬಾರ್ ಅವರು ನಿಧನ ಹೊಂದಿ ವರ್ಷಗಳೇ ಕಳೆದರೂ ಅವರು ಹುಟ್ಟಿ ಬೆಳೆದ ಪರಿಸರದಲ್ಲಿ ಕನಿಷ್ಟ ಸ್ಮಾರಕವನ್ನೂ ರಚಿಸಲು ಕೂಡಾ ಇದುವರೆಗೂ ಆಡಳಿತ ವ್ಯವಸ್ಥೆ ಗೆ ಸಾಧ್ಯವಾಗಿಲ್ಲ‌ ಎಂಬುದು ಖೇದಕರ ಹಾಗೂ ಕಲೆ, ಸಂಸ್ಕೃತಿಯ ಬಗ್ಗೆ ಆಡಳಿತಕ್ಕಿರುವ ನಿಷ್ಕಾಳಜಿಗೆ ಸ್ಪಷ್ಟ ನಿದರ್ಶನವಾಗಿದೆ.

ಕೆ.ಕೆ. ಹೆಬ್ಬಾರ್ ಅವರು ಚಿತ್ರ ಬಿಡಿಸುತ್ತಿದ್ದರೆನ್ನಲಾದ ಕೆರೆ ಬದಿಯ ಬಂಡೆ ಕಲ್ಲು ಆಡಳಿತದ ನಿಷ್ಕಾಳಜಿಯನ್ನು ಅಣಕಿಸುವಂತಿದೆ. ಕಟ್ಟಿಂಗೇರಿಯ ಒಂದು ರಸ್ತೆಗೂ ಕೆ.ಕೆ.‌ಹೆಬ್ಬಾರ್ ಹೆಸರಿಲ್ಲದಿರುವುದು ಜನಪ್ರತಿನಿಧಿಗಳು ರಾಜಕಾರಣ ಮಾಡುದರಲ್ಲಿ ಮಾತ್ರ ಆಸಕ್ತರು ಎಂಬುದಕ್ಕೆ ಉದಾಹರಣೆಯಾಗಿದೆ ಕಲಾವಿದ ಕೆ.ಕೆ.ಹೆಬ್ಬಾರ್ ರವರ ನಿರ್ಲಕ್ಷ್ಯ.

ಬೆಳ್ಳೆ ಗ್ರಾಪಂ ಅಧ್ಯಕ್ಷೆ ಕಟ್ಟಿಂಗೇರಿ ವಾರ್ಡನ್ನೇ ಪ್ರತಿನಿಧಿಸುತ್ತಿದ್ದಾರೆ. ಅವರಾದರೂ ಮನಸ್ಸು ಮಾಡಿ ಕಟ್ಟಿಂಗೇರಿಯ ನೆಲದಲ್ಲಿ ಕೆ.ಕೆ. ಹೆಬ್ಬಾರ್ ಅವರ ಹೆಸರನ್ನುಳಿಸುವ ಪ್ರಯತ್ನ ಮಾಡಲಿ. ಇಲ್ಲದಿದ್ದರೆ ಮುಂದಿನ ತಲೆಮಾರಿಗೆ ಕೆ.ಕೆ. ಹಬ್ಬಾರ್ ಅವರು ಇದೇ ಕಟ್ಟಿಂಗೇರಿಯವರು ಎಂಬುದೇ ತಿಳಿಯದೇ ಹೋದಿತು ಎಂಬುದು ಕಲಾಸಕ್ತರ ಕೋರಿಕೆಯಾಗಿದೆ.

ಕಟ್ಟಿಂಗೇರಿ ಕೆರೆ: ಕೆ.ಕೆ.ಹೆಬ್ಬಾರ್ ಅವರು ಕೆರೆ ಬದಿಯಲ್ಲಿರುವ ಈ ಕಲ್ಲಿನ ಮೇಲೆ ಕುಳಿತು ಚಿತ್ರ ಬಿಡಿಸುತ್ತಿದ್ದರು

Leave a Reply

Your email address will not be published. Required fields are marked *