Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಇಲ್ಲಿ ಶೆಟ್ಟಿಗೆ ಲಾಭ ಮಾಡಿಕೊಟ್ಟು ಬಡವರಿಗೆ ದ್ರೋಹವೆಸಗಿದ ನೀವು, ಈಗ ಕೇಂದ್ರದ ನೀತಿ ಆಯೋಗಕ್ಕೆ ಉಪದೇಶ ಕೊಡ್ತಿದ್ದೀರಿ. ಥೂ… 

ಉಪ್ಪಿನಕಾಯಿ-5: ಶ್ರೀರಾಮ ದಿವಾಣ

 

  • ಉತ್ತಮ ಸೇವೆ ಒದಗಿಸುತ್ತಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ನೀತಿ ಆಯೋಗದ ನಿರ್ಧಾರ ಸರಿಯಲ್ಲ. ಆರೋಗ್ಯ ಮೂಲಭೂತ ಹಕ್ಕು. ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾಗಿ ಬಡವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಕೊಡುವುದು ಸರ್ಕಾರದ ಉದ್ದೇಶವಾಗಬೇಕು. ಆದರೆ, ಕೇಂದ್ರ ಸರಕಾರ ಸಿದ್ಧಪಡಿಸಿರುವ ಪ್ರಸ್ತಾವನೆ ಖಾಸಗಿಯವರಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದೆ. –ಕೆ.ಆರ್.ರಮೇಶ್ ಕುಮಾರ್ (ಆರೋಗ್ಯ ಸಚಿವ)

# ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋಟಿ ಬೆಲೆಯ ಜಮೀನು ಸಹಿತ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಕೊಡುವಾಗ ನಿಮಗಿದು ಗೊತ್ತಿರಲಿಲ್ಲವೆ ಆರೋಗ್ಯ ಸಚಿವರೇ ? ಇಲ್ಲಿ, ಬಿ.ಆರ್.ಶೆಟ್ಟಿಗೆ ಲಾಭ ಮಾಡಿಕೊಟ್ಟು ಬಡವರಿಗೆ ದ್ರೋಹವೆಸಗಿದ ನೀವು, ಈಗ ಕೇಂದ್ರದ ನೀತಿ ಆಯೋಗಕ್ಕೆ ಉಪದೇಶ ಕೊಡ್ತಿದ್ದೀರಿ. ಥೂ…

 

  • ಆಡಳಿತಕ್ಕೆ ಮಾನವೀಯ ಸ್ಪರ್ಶ ನೀಡುವುದರ ಜೊತೆಗೆ ಜನರ ಸಂಕಷ್ಟ ಆಲಿಸಲು ಜನತಾ ದರ್ಶನದಂಥ ಹೊಸ ವ್ಯವಸ್ಥೆ ರೂಪಿಸುತ್ತೇನೆ. – ಕೆ.ರತ್ನಪ್ರಭಾ (ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ)

# ಮೊಟ್ಟಮೊದಲು, ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಮುಖ್ಯಮಂತ್ರಿಗಳ ‘ಜನಸ್ಪಂದನ’ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕಾಯಕಲ್ಪ ಕೊಡಲು ಸಾಧ್ಯವೇ ನೋಡಿ.

 

  • ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡವರು ಜಾತ್ಯತೀತ ವಿರೋಧಿಗಳು. -ಮುಖ್ಯಮಂತ್ರಿ ಸಿದ್ದರಾಮಯ್ಯ.

# ಅದಕ್ಕೇ ಇರಬೇಕು, ಧರ್ಮ ಸಂಸದ್ ಆಯೋಜಿಸಿದ ಪೇಜಾವರರ ಕೃಷ್ಣ ದೇವಾಲಯವನ್ನು ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಪಡೆದುಕೊಳ್ಳದೆ ಬಿಟ್ಟುಬಿಟ್ಟದ್ದು.

Leave a Reply

Your email address will not be published. Required fields are marked *