Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕಂದಕ ಸೃಷ್ಟಿಸುವ ಸಂಘ, ಪರಿಷತ್ತು, ದಳಗಳ ಪೋಷಕರಲ್ಲಿ ನೀವೂ ಒಬ್ಬರು…

ಉಪ್ಪಿನಕಾಯಿ-5: ಶ್ರೀರಾಮ ದಿವಾಣ

 

  • ಸೆಂಟ್ರಲ್ ಜೈಲಿನಲ್ಲಿ ದುಡ್ಡು ಕೊಟ್ಟವರಿಗೆ ಎಲ್ಲಾ ಸೌಲಭ್ಯ. – ವಿಜಯವಾಣಿ ವರದಿ.

# ಸೆಂಟ್ರಲ್ ಜೈಲ್ ಅಂತ ಅಲ್ಲ. ಸಬ್ ಜೈಲಲ್ಲೂ ದುಟ್ಟು ಕೊಟ್ಟವರಿಗೆ ಸರ್ವ ಸೌಲಭ್ಯಗಳು ಸಿಗುತ್ತವೆ. ಮಂತ್ರಿಗಳು, ಅಧಿಕಾರಿಗಳು, ಮಾಧ್ಯಮಗಳು ಸಹ ಅಷ್ಟೆ. ಪತ್ರಿಕೆಗಳಿಗೆ ದುಡ್ಡು ಕೊಟ್ಟರೆ ಕೊಟ್ಟವರ ಬಗ್ಗೆ ಪತ್ರಿಕೆ ಪುರವಣಿ ಮಾಡಿ ಇಂದ್ರ ಚಂದ್ರ ಎಂದು ಹೊಗಳಲು ಸಹ ನಾಚಿಕೆ ಪಡುವುದಿಲ್ಲ.

 

  • ಕುರುಬ ಸಮುದಾಯವನ್ನು ಎಸ್ ಟಿ ವರ್ಗಕ್ಕೆ ಸೇರಿಸಿ. – ಸಂಗೊಳ್ಳಿ ರಾಯಣ್ಙ ಬ್ರಿಗೇಡ್ ನಿಂದ ಸಿಎಂಗೆ ಮನವಿ.

# ನಮ್ಮನ್ನೂ ಎಸ್ ಟಿ ವರ್ಗಕ್ಕೆ ಸೇರಿಸಿ. – ಬ್ರಾಹ್ಮಣ, ಬಂಟ, ಬಿಲ್ಲವ ಸಮುದಾಯಗಳು ಮುಂದಿನ ದಿನಗಳಲ್ಲಿ ಕೊಡಬಹುದಾದ ಮನವಿ.

 

  • ಸಮಾಜದಲ್ಲಿ ಕಂದಕ ಸೃಷ್ಟಿಸುವ ಕಾರ್ಯಗಳು ರಾಜಕಾರಣಿಗಳಿಂದ, ಮಾಧ್ಯಮಗಳಿಂದ, ಸಾಮಾಜಿಕ ಜಾಲತಾಣಗಳಿಂದ ಆಗುತ್ತಿದೆ. – ಡಾ.ಮೋಹನ್ ಆಳ್ವ (ನುಡಿಸಿರಿಯಲ್ಲಿ)

# ಸಮಾಜದಲ್ಲಿ ಕಂದಕ ಸೃಷ್ಟಿಸುವ ಸಂಘ, ಪರಿಷತ್ತು, ದಳಗಳ ಪೋಷಕರಲ್ಲಿ ನೀವೂ ಒಬ್ಬರು. ಇವುಗಳ ಸಮಾಜೋತ್ಸವ, ಸಮಾವೇಶ, ಸಭೆಗಳಲ್ಲಿ ವೇದಿಕೆ ಹಂಚಿಕೊಳ್ಳುವವರೂ ನೀವೇ. ಮಾಧ್ಯಮಗಳಿಗೆ ಹಣ (ಜಾಹೀರಾತು) ಕೊಟ್ಟು ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುವಂತೆ ಮಾಡುವವರೂ ನೀವೇ. ಕೆಲವು ಪ್ರಮುಖ ಮಾಧ್ಯಮಗಳನ್ನು ನೀವು ಖರೀದಿಸಿದಾಗ ಮಾಧ್ಯಮಗಳು ಮಾಡಬೇಕಾದ ಕಲಸವನ್ನು ಸಾಮಾಜಿಕ ಜಾಲತಾಣಗಳು ಸಮರ್ಥವಾಗಿ ಮಾಡಿದ್ದನ್ನು ನೀವು ಸಹಿಸುವುದಾರೂ ಹೇಗೆ ? ನಿಮ್ಮ ಆತಂಕ, ಆಕ್ರೋಶ ಎಲ್ಲವೂ ಸಹಜ, ನಿರೀಕ್ಷಿತ.

 

  • ಕಟೀಲು ಕ್ಷೇತ್ರಕ್ಕೂ, ಆರು ಆಟದ ಮೇಳಕ್ಕೂ ಯಾವುದೇ ಸಂಬಂಧ ಇಲ್ಲ. – ಜಯಕಿರಣ ವರದಿ.

# ದೇವಿ, ದೇವಸ್ಥಾನದ ಹೆಸರಲ್ಲಿ ಸ್ವಾರ್ಥಿಗಳಿಂದ ಬಿಸಿನೆಸ್. ತಿಂಗಳಿಗೆ 28 ಲಕ್ಷದ 80 ಸಾವಿರ ಗುಳುಂ !

 

  • ಕಟೀಲು ಮೇಳದ ಆಟ ಸಿಗಬೇಕಾದರೆ ನೇರವಾಗಿ ಹೋದರೆ ಸಿಗುವುದಿಲ್ಲ. ಅದಕ್ಕೆಂದೇ ಇರುವ ‘ಮಹಾನುಭವ’ರನ್ನು ಹಿಡಿದು ಸುತ್ತು ಬಳಸಿಕೊಂಡು ಹೋಗಬೇಕು. ಕಟೀಲು ಮೇಳದ ಆಟ ಸಿಗಬೇಕಾದರೆ ಹತ್ತು ವರ್ಷ ಕಾಯಬೇಕು ಎಂದು ಹೇಳುವುದರ ಗುಟ್ಟು ಇದಾಗಿದೆ. – ಜಯಕಿರಣ ವರದಿ.

# ಸತ್ಯ ಹೇಳಬೇಡಿ, ‘ಅಣ್ಣ’ನಿಗೆ ಬೇಸರವಾಗಬಹುದು, ಕೋಪವೂ ಬಂದೀತು, ಅಪಪ್ರಚಾರವನ್ನೂ ನಡೆಸಿಯಾರು ಜಾಗ್ರತೆ.

 

  • ಬದಲಾವಣೆಗೆ ಒಗ್ಗಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು. – ಸುಧಾ ನಾರಾಯಣಮೂರ್ತಿ (ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ)

# ಟಿವಿ, ಮೊಬೈಲ್ ಇತ್ಯಾದಿ ಬದಲಾದ ವ್ಯವಸ್ಥೆಗಳಿಗೆ ಯುವಜನಾಂಗ ಸಮರ್ಥವಾಗಿ ಮತ್ತು ಪೂರ್ಣವಾಗಿಯೂ ಒಗ್ಗಿಕೊಂಡಿದೆ, ಆತಂಕ ಬೇಡ ಮೇಡಂ.

 

  • ನಾಟ್ಯಾರಾಧನೆ ಮೂಲಕ ಭಗವಂತನ ದರ್ಶನ ಪಡೆಯಲು ಸಾಧ್ಯ. – ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ.

# ಹಾಗಾದರೆ ಇನ್ನು ವಿಳಂಬ ಮಾಡುವುದು ಸರಿಯಲ್ಲ, ತಪ್ಪಾಗುತ್ತದೆ. ಕೂಡಲೇ ದೇವಸ್ಥಾನಗಳನ್ನು, ಮಠಗಳನ್ನು ಬಂದ್ ಮಾಡಿ, ಇಲ್ಲೆಲ್ಲಾ ನಾಟ್ಯಾಲಯಗಳನ್ನು ತೆರೆದುಬಿಡಿ ಸ್ವಾಮೀಜಿಯವರೇ.

 

  • ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ ತಗ್ಗಿಸಲು ತಿಂಗಳ 2ನೇ ಭಾನುವಾರ ‘ಟ್ರಾಫಿಕ್ ಲೆಸ್ ಡೇ’. – ರಾಜ್ಯ ಸರಕಾರ.

# ಸಮಾವೇಶ, ಸಮಾಜೋತ್ಸವಗಳ ಹೆಸರಲ್ಲಿ ಪ್ರತೀದಿನವೂ ವಾಹನ ರ್ಯಾಲಿಗೆ ಮುಕ್ತ ಅವಕಾಶ.

 

  • ಕೈಗಾರಿಕೋದ್ಯಮಿಯನ್ನು ರೂಪಿಸಲು ನೆರವಾಗುವುದಕ್ಕಿಂತ, ಕೈಗಾರಿಕೋದ್ಯಮಿ ಆಗದಿರಲು ಏನೇನು ಬೇಕೋ ಅದನ್ನೆಲ್ಲಾ ಸರಕಾರ ಮಾಡುತ್ತಿದೆ. – ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ವಿಧಾನ ಪರಿಷತ್ ಸದಸ್ಯರು (ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ)

# ಹೋದಲ್ಲಿ ಬಂದಲ್ಲಿ ಎಲ್ಲೆಡೆ ಹೀಗೆ ಹೇಳಿಕೊಂಡು ಬನ್ನಿ. ಕೈಗಾರಿಕೋದ್ಯಮಿಯಾಗುವವರಿಗೆ ಸ್ಪೂರ್ಥಿ ಕೊಟ್ಟಂತಾಗುತ್ತದೆ, ಕೈಗಾರಿಕೋದ್ಯಮ ಬೆಳೆಯುತ್ತದೆ.

 

  • ಸಿದ್ಧರಾಮಯ್ಯರ ಮೇಲೆ ಆರೋಪಗಳಿರುವ ಅರ್ಕಾವತಿ ಬಡಾವಣೆ ರೀಡು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಸಲ್ಲಿಸಿದ ವರದಿಯ ಪರಿಶೀಲನೆಗೆ ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿದೆ. – ರಾಜ್ಯ ಸರಕಾರ.

# ಅರ್ಕಾವತಿ ಬಡಾವಣೆ ಪ್ರಕರಣಕ್ಕೆ ಸಂಬಂಧಿಸಿ ಟಿ.ಎಂ.ವಿಜಯ ಭಾಸ್ಕರ್ ಅವರು ಸಲ್ಲಿಸಿದ ವರದಿಯ ಪರಿಶೀಲನೆಗೆ ಇನ್ನೊಂದು ಸಮಿತಿಯನ್ನು ರಚಿಸಲಾಗಿದೆ. – ಮುಂದಿನ ವರ್ಷ ರಾಜ್ಯ ಸರಕಾರ ಪ್ರಕಟಿಸಬಹುದಾದ ನಿರ್ಧಾರ.

Leave a Reply

Your email address will not be published. Required fields are marked *