Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪರದೆಯ ಹಿಂದಿನ ವ್ಯವಹಾರದ ಬಳಿಕ ಪರದಾಟ ಅನಿವಾರ್ಯ

ಉಪ್ಪಿನಕಾಯಿ-6: ಶ್ರೀರಾಮ ದಿವಾಣ

 

 • ಭಗವಂತನ ನಾಮಸ್ಮರಣೆಯಿಂದ ಮಾನವ ಮಾಡಿದ ಪಾಪಕರ್ಮಗಳೆಲ್ಲ ನಾಶವಾಗುತ್ತವೆ. – ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ.

#ಪಾಪಕರ್ಮ ಹೆಚ್ಚಲು ಇಂಥ ಮಾತುಗಳೇ ಸಾಕು.

 

 • ಭ್ರಷ್ಟರನ್ನು ಸಮಾಜದಿಂದ ದೂರ ಇಡುತ್ತಿದ್ದ ಒಂದು ಕಾಲ ಇತ್ತು. ಈಗ ಅವರನ್ನೇ ಸನ್ಮಾನ ಮಾಡಿ ಗೌರವಿಸುವ ಸ್ಥಿತಿ ಇದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

# ಇನ್ನೂ ಹತ್ತು ಸಲ ಹೇಳಿ.

 

 • ಮಾನವನು ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. – ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಅದಮಾರು ಮಠ, ಉಡುಪಿ.

# ಸರ್ವಸಂಗ ಪರಿತ್ಯಾಗಿ ಎನ್ನಿಸಿಕೊಂಡ ಸ್ವಾಮೀಜಿಗಳಿಗೆ ಇಂಥ ಉಪದೇಶ ಕೊಡುವ ಶೋಚನೀಯ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ. ಕಾರಣ; ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದೆ ಯುವತಿಯೊಬ್ಬಳ ಜೊತೆ ಸಂಬಂಧ ಬೆಳೆಸಿ, ಆಕೆ ಗರ್ಭವತಿಯಾಗಿ ಬೆದರಿಕೆ ಹಾಕಿದಾಗ ಮಧ್ಯವರ್ತಿ ಮೂಲಕ ಕೆಲವು ಲಕ್ಷ ಕೊಟ್ಟು ರಾಜಿ ಮಾಡಿಕೊಂಡು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಬೇಕಾಗಿ  ಬರದೇ ಇರುತ್ತದಾ ?

 

 • ಎಲ್ಲವೂ ಇದೆ ! ಕೊರತೆ ಸಮರ್ಥ ನಾಯಕನದ್ದೇ !! – ಚಕ್ರವರ್ತಿ ಸೂಲೆಬೆಲೆ.

# ನಿಜ, ಈ ಮಾತಿಗೆ ಮೋದಿ ಭಕ್ತರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸುವುದು ಬೇಡ.

 

 • ಯಾವ ಕ್ಷೇತ್ರ ದರ್ಶನವೂ ಕಾಂಗ್ರೆಸ್ ಪಾಪವನ್ನು ತೊಳೆಯಲಾರದು. – ಸಂತೋಷ್ ತಮ್ಮಯ್ಯ.

# ಬಿಜೆಪಿಯ ಪಾಪವನ್ನೂ…

 

 • ಶಿಕ್ಷಣ ವ್ಯವಸ್ಥೆಯಲ್ಲೇ ಅಸಮಾನತೆ, ಶ್ರೇಣಿಕೃತ ಇದೆ. ರಾಜ್ಯದಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಸಿಬಿಎಸ್ಇ, ಐಸಿಎಸ್ಇ, ಖಾಸಗಿ ಆಂಗ್ಲ ಮಾಧ್ಯಮ, ಅನುದಾನಿತ, ಸ್ಥಳೀಯ ಸರಕಾರದ ಶಾಲೆ, ಸರಕಾರಿ ಶಾಲೆ ಎಂಬ ಶ್ರೇಣಿಕೃತ ಶಿಕ್ಷಣ ವ್ಯವಸ್ಥೆ ಇದೆ. ಇದು ಸಮಾನತೆಗೆ ದೊಡ್ಡ ಅಪಚಾರ. – ಪ್ರೊ.ನಿರಂಜನಾರಾಧ್ಯ ವಿ.ಪಿ. (ಶಿಕ್ಷಣ ತಜ್ಞರು)

# ಸಮಾನತೆ ಎಂಬ ಶಬ್ದ ಭಾಷಣ ಮತ್ತು ಬರೆಹಕ್ಕೆ ಮಾತ್ರ ಸೀಮಿತವೆಂದು ಆಳಿದವರು ತಿಳಿದುಕೊಂಡಿದ್ದೇ ಈ ಅಸಮಾನತೆಗೆ ಕಾರಣ.

 

 • ಕೊಳ್ಳಿಯಿಟ್ಟದ್ದು ಸಾಕು, ಕೂಡಿ ಬಾಳುವ ಹೆಜ್ಜೆ ಬೇಕು. – ಆದರ್ಶ ಗೋಖಲೆ.

# ಧರ್ಮದ ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುವ ಸಂಘ, ಪರಿಷತ್ತು, ದಳ, ವೇದಿಕೆಗಳಲ್ಲಿ ಈ ಮಾತುಗಳನ್ನು ಹೇಳುವ ಕೆಲಸ ಮಾಡಿ.

 

 • ‘ಅನರ್ಹರು’ ಅತ್ಯಂತ ಗುರುತರ ಜವಾಬ್ದಾರಿಗಳಲ್ಲಿ ಕುಳಿತುಕೊಂಡಿರುವುದು ಕಾಣುತ್ತದೆ. ಅರ್ಹತೆ ಇಲ್ಲದವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. – ನಾಗತಿಹಳ್ಳಿ ಚಂದ್ರಶೇಖರ್ (ಅಧ್ಯಾಪಕ, ಕವಿ, ಲೇಖಕ, ಅಂಕಣಕಾರ, ಚಲನಚಿತ್ರ ನಟ ಮತ್ತು ನಿರ್ದೇಶಕರು)

# ಮೋದಿಯನ್ನು ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ.

 

 • ಕಾನೂನು ಉಲ್ಲಂಘಿಸಿ ಅತೀ ವೇಗದಿಂದ ವಾಹನ ಚಲಾಯಿಸಿ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು ಮಹಿಳೆಯೊಬ್ಬಳು ಗಾಯಗೊಳ್ಳಲು ಕಾರಣರಾದ ಸಂಸದ ಪ್ರತಾಪಸಿಂಹ ಬಂಧನ. – ಪತ್ರಿಕಾ ವರದಿ.

# ಬೆತ್ತಲೆ ಸಿಂಹಕ್ಕೆ ಕಾನೂನು ಇಲ್ಲ.

 

 • ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ಪೂರ್ಣಿಮಾ ಸುರೇಶ್ ನಾಯಕ್ ಕೊಯಿಲಾಡಿ ಅವರನ್ನು ಅಕಾಡೆಮಿ ಸಮಿತಿ ಸಭೆಗೆ ಆಹ್ವಾನಿಸದೆ ಅವಮಾನ – ಪತ್ರಿಕಾ ವರದಿ.

# ಕಾಂಗ್ರೆಸ್ ಸರಕಾರದ ಸಾಧನೆ

 

 • ಇಪ್ಪತ್ತು ಸಾವಿರ ಆಟಗಳು ಬುಕ್ಕಿಂಗ್ ಆಗಿದೆ ಎಂದು ಹೇಳುವ ಇವರು, ಒಂದು ತಿಂಗಳ ಪಟ್ಟಿ ರಚಿಸುವುದಕ್ಕೇ ಪರದಾಟ ನಡೆಸುವುದು ಯಾಕೆ ? – ಪತ್ರಿಕಾ ವರದಿ.

# ಪರದೆಯ ಹಿಂದಿನ ವ್ಯವಹಾರದ ಬಳಿಕ ಪರದಾಟ ಅನಿವಾರ್ಯ              

 

 

 

 

Leave a Reply

Your email address will not be published. Required fields are marked *