Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಪಾಪದ ಪಿಂಡಗಳನ್ನು ಮುಗಿಸುವುದು ನಿಮಗೆ ಮೋದಿ ಕೊಟ್ಟ ಸಂಪುಟ ಖಾತೆಯ ಕೆಲಸವಾ, ಷಾ ಕೊಟ್ಟ ಸೂಚನೆಯ ?

ಉಪ್ಪಿನಕಾಯಿ-7: ಶ್ರೀರಾಮ ದಿವಾಣ

 

 • ಉಗ್ರ ಹೋರಾಟ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೂಚನೆ ನೀಡಿದ್ದರು. – ಪ್ರತಾಪಸಿಂಹ, ಬಿಜೆಪಿ ಸಂಸದ.

# ಸಂಘ ದಕ್ಷ

 

 • ಸಿದ್ದರಾಮಯ್ಯ ಎಂಬ ಪಾಪದ ಪಿಂಡವು ಎಲ್ಲಿ ಹುಟ್ಟಿದೆಯೋ ಅದನ್ನು ಅಲ್ಲಿಯೇ ಮುಗಿಸಬೇಕು. – ಅನಂತಕುಮಾರ ಹೆಗಡೆ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಮಂತ್ರಿ.

# ಪಾಪದ ಪಿಂಡಗಳನ್ನು ಮುಗಿಸುವುದು ನಿಮಗೆ ಮೋದಿ ಕೊಟ್ಟ ಸಂಪುಟ ಖಾತೆಯ ಕೆಲಸವಾ, ಷಾ ಕೊಟ್ಟ ಸೂಚನೆಯ ?

 

 • ಗೌರಿ ಲಂಕೇಶ್‌ ಹಂತಕರನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಗೌರಿ ಹಂತಕರ ಪತ್ತೆಗೆ ಇನ್ನೆಷ್ಟು ದಿನ ಬೇಕು ? ಆದಷ್ಟು ಬೇಗ ಹಂತಕರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. – ಪತ್ರಿಕಾ ವರದಿ.

# ಸಿಎಂ ಸಿದ್ದರಾಮಯ್ಯಗೆ ಬೇಸರವಾಗದಂತೆ, ಡ್ಯಾಮೇಜ್ ಆಗದಂತೆ ಎಚ್ಚರವಹಿಸಿ

 

 • ಬಿಜೆಪಿಯವರು ಭಕ್ತಿಯಿಂದಲ್ಲ, ರಾಜಕೀಯ ಲಾಭಕ್ಕೆ ರಾಮ, ಹನುಮ, ದತ್ತ ಜಯಂತಿ ಆಚರಿಸುತ್ತಿದ್ದಾರೆ. – ಗೃಹ ಸಚಿವ ರಾಮಲಿಂಗಾ ರೆಡ್ಡಿ.

# ಮೋದಿ ಭಕ್ತರ ಭಕ್ತಿ ಬಗ್ಗೆ ಡೌಟ್ ಬೇಡ

 

 • 2008ರಿಂದ 2016ರವರೆಗಿನ ಅಪರಾಧ ಪ್ರಕರಣಗಳ ಸಂಖ್ಯೆ ಪರಿಗಣಿಸಿದರೆ ಗುಜರಾತ್ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 10ನೇ ಸ್ಥಾನದಲ್ಲಿದೆ. – ರಾಮಲಿಂಗಾರೆಡ್ಡಿ (ಕರ್ನಾಟಕದ ಗೃಹ ಸಚಿವರು)

# ಚುನಾವಣೆಗೆ ಮೊದಲು ಇದನ್ನೇ ಮೋದಿ ಹಾಗೂ ಭಕ್ತರು ‘ಗುಜರಾತ್ ಮಾದರಿ’ ಅಂದದ್ದು

 

 • ನಮ್ಮ ಕುಟುಂಬದ ಮೇಲೆ ಬಿಜೆಪಿಯವರಿಗೆ ಜಾಸ್ತಿ ಪ್ರೀತಿ. ಹಿಂದೆ ಶೋಭಾ ಕರಂದ್ಲಾಜೆ ನನ್ನ ಪತ್ನಿ ಬಗ್ಗೆ ಮಾತನಾಡುತ್ತಿದ್ದರು. ಈಗ ಪ್ರತಾಪ್ ಸಿಂಹ ನನ್ನ ತಂದೆ ಬಗ್ಗೆ ಮಾತನಾಡಿದ್ದಾರೆ. – ದಿನೇಶ್ ಗುಂಡೂರಾವ (ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ)

# ಧ್ವೇಷವನ್ನೇ ಪ್ರೀತಿ ಎಂದು ತಿಳಿದುಕೊಂಡವರು ಅವರು

 

 • ಕಪಿಲ್‌ ಸಿಬಲ್ ಅವರು ರಾಮ ಜನ್ಮಭೂಮಿ ಪ್ರಕರಣವನ್ನು ವಿಳಂಬ ಮಾಡಲು ನೋಡುತ್ತಿದ್ದಾರೆ. – ಅಮಿತ್ ಷಾ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ)

# 2018ರಲ್ಲಿಯೇ ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಪೇಜಾವರ ಸ್ವಾಮೀಜಿ ಉಡುಪಿ ಧರ್ಮ ಸಂಸದ್ ನಲ್ಲಿ ಘೋಷಿಸಿದ್ದಾರೆ. ಚಿಂತೆ ಬಿಡಿ, ಷಾ…

 

 • ಕಾಂಗ್ರೆಸ್‌ ಪಕ್ಷ ಸೂಕ್ತ ನಾಯಕರಿಲ್ಲದೆ ದಿವಾಳಿಯಾಗಿದೆ. – ಪ್ರಧಾನಿ ನರೇಂದ್ರ ಮೋದಿ.

# ಬಿಜೆಪಿ, 56 ಇಂಚು ಎದೆಯ ನಾಯಕನಿದ್ದೂ ಅವನತಿಯ ಹಾದಿ ಹಿಡಿದಿದೆ

 

 • ಉಡುಪಿ ಕೃಷ್ಣ ಮಠದಲ್ಲಿ ಪಂಕ್ತಬೇಧವಿಲ್ಲ. ಇಲ್ಲಿ ಭೋಜನಶಾಲೆಯಲ್ಲಿ ದಲಿತರು, ಬ್ರಾಹ್ಮಣರು ಏಕಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. ಬಹುತೇಕ ಮಠ ಮಂದಿರಗಳಲ್ಲಿ ಪಂಕ್ತಿಬೇಧವಿಲ್ಲ. ದುರುದ್ಧೇಶದ ವದಂತಿಗಳಿಗೆ ಕಿವಿಗೊಡಬಾರದು. – ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ.

# ಸತ್ಯ ಸತ್ತೀತೇ

 

 • ಬ್ರಾಹ್ಮಣವಾದ, ಮನುವಾದ ಎನ್ನುವುದೇ ಇಲ್ಲ. ಅದು ಸಂತರನ್ನು, ಶಾಸ್ತ್ರಗಳನ್ನು, ಬ್ರಾಹ್ಮಣರನ್ನು ಅವಮಾನ ಮಾಡುವುದಕ್ಕೆ ಸೆಕ್ಯುಲರ್ ಮಾಫಿಯಾ ಹುಟ್ಟು ಹಾಕಿದ ಶಬ್ದ. ಇದರ ಹಿಂದೆ ರಾಜಕೀಯ ಉದ್ಧೇಶ ಇದೆ. – ಪೇಜಾವರ ಸ್ವಾಮೀಜಿ, ಉಡುಪಿ.

# ಇದ್ದರೆ ಇರುವುದು ಪೇಜಾವರ ವಾದ ಮಾತ್ರ

 

 • ಸಂತರು ಕೇವಲ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರೆ ಸಾಲದು, ಧರ್ಮವನ್ನು ಉಳಿಸುವ ಕಾರ್ಯವನ್ನೂ ಮಾಡಬೇಕು. – ವೀರಶೈವ ಮಹಾಂತ ಶ್ರೀ ಲಿಂಗಶಿವರಾಜರು.

# ಹೌದೌದು, ಅದಕ್ಕೆ ಇದೀಗ ಮಂದಿರ, ನಿವಾಸ, ಛತ್ರ ಇತ್ಯಾದಿ ಹೆಸರುಗಳಲ್ಲಿ ‘ಲಾಡ್ಜ್’ಗಳನ್ನು ಸ್ಥಾಪಿಸುತ್ತಿದ್ದೇವೆ.

 

 • ಕರ್ನಾಟಕದಲ್ಲಿ ರಾಜಕೀಯ ಬದಲಾವಣೆಯಾದಲ್ಲಿ ಸರಕಾರದ ವಶದಲ್ಲಿರುವ ಎಲ್ಲಾ ದೇವಳಗಳನ್ನೂ ಮುಕ್ತವಾಗಿಸಯುತ್ತೇವೆ. – ಡಾ.ಸುರೇಂದ್ರ ಕುಮಾರ್ ಜೈನ್, ವಿಹಿಂಪ ರಾಷ್ಟ್ರೀಯ ಜಂಟೀ ಕಾರ್ಯದರ್ಶಿ.

# ಧರ್ಮ ಸಂಸದ್, ಹಿಂದೂ ಸಮಾಜೋತ್ಸವ ಇತ್ಯಾದಿಗಳ ಹೆಸರಲ್ಲಿ ಬಿಜೆಪಿ ರಾಜಕಾರಣ ಮಾಡಿದ ಮೇಲೆಯೂ ಸರಕಾರ ಬದಲಾಗದಿದ್ದರೆ ಹೇಗೆ

 

 • ನ್ಯಾಯಾಲಯದ ಆದೇಶದ ಆಧಾರದ ನೆಪದಲ್ಲಿ ಮಂದಿರಗಳನ್ನು ಒಡೆಯುವ ಕೃತ್ಯವನ್ನು ಇಡೀ ಸಂತ ಸಮಾಜ ಕಠೋರ ಶಬ್ದಗಳಿಂದ ಖಂಡಿಸಿದೆ. – ಉಡುಪಿ ಧರ್ಮ ಸಂಸದ್ ಅಧಿವೇಶನದ ಬಗ್ಗೆ ಪತ್ರಿಕಾ ವರದಿ.

# ನ್ಯಾಯಾಂಗಕ್ಕೇ ಸವಾಲು     

Leave a Reply

Your email address will not be published. Required fields are marked *