Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಸಂತರು, ಸ್ವಾಮೀಜಿಗಳು ರಾಜಕೀಯ ಪುಡಾರಿಗಳಾಗಬಹುದಾ ?

ಉಪ್ಪಿನಕಾಯಿ-8: ಶ್ರೀರಾಮ ದಿವಾಣ

 

  • ಸತ್ಯ ಇರುವಲ್ಲಿ ಧರ್ಮದ ಅಗತ್ಯವೇ ಇಲ್ಲ. ಅಸತ್ಯ ಇರುವಲ್ಲಿ ಧರ್ಮವನ್ನು ತೋರಿಸಿ ಲಾಭ ಪಡೆಯುವ ಪ್ರಯತ್ನ ನಡೆಯುತ್ತದೆ. ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳಲ್ಲಿ ಸುಧಾರಣೆ ಆಗಬೇಕೇ ವಿನಾ ಭಾವುಕ ವಿಷಯಗಳ ಮೂಲಕ ಜನರನ್ನು ಕೆರಳಿಸುವುದಕ್ಕೆ ಅರ್ಥವೇ ಇಲ್ಲ. – ಖ್ಯಾತ ಚಿತ್ರನಟ ಉಪೇಂದ್ರ (‘ಪ್ರಜಾಕೀಯ’ ಪಕ್ಷದ ಸ್ಥಾಪಕರು)

# ಸತ್ಯವೇ ಧರ್ಮ. ಅಸತ್ಯ ಮತ್ತು ಧ್ವೇಷವನ್ನೇ ಉಸಿರಾಡುವ, ಭಾವುಕ ವಿಷಯಗಳನ್ನೇ ಅಜೆಂಡಾ ಮಾಡಿಕೊಂಡಿರುವ ಸಂಘ, ಪರಿಷತ್ತು, ದಳ ಇತ್ಯಾದಿಗಳ ಹುನ್ನಾರಗಳನ್ನು ಜನ ಅರಿತರೆ ಸತ್ಯದ ಸಾಕ್ಷಾತ್ಕಾರವಾದೀತು.

 

  • ರಾಜಕಾರಣದಲ್ಲಿರುವ ಎಲ್ಲಾ ಅವ್ಯವಸ್ಥೆಗಳಿಗೆ ಪಾರ್ಟಿ ಫಂಡ್ ಮೂಲವಾಗಿದೆ. – ಚಿತ್ರನಟ ಉಪೇಂದ್ರ.

# ಪಾರ್ಟಿ ಫಂಡ್ ಸಂಗ್ರಹದಲ್ಲಿ ಬಿಜೆಪಿ ನಂ.1, ಕಾಂಗ್ರೆಸ್ ನಂ.2

 

  • ಜಾತಿ-ಧರ್ಮಗಳು ನಮ್ಮ ಮನೆ ಮನದಲ್ಲಿರಬೇಕು. – ಉಪೇಂದ್ರ.

#  ಮನದಲ್ಲಿರುವ ಕಾರಣಕ್ಕೇ, ಜಾತಿ ಭವನಗಳನ್ನು ಸರಕಾರದಿಂದ ಅನುದಾನ ಪಡೆದು ಅಲ್ಲಲ್ಲಿ ಕಟ್ಟುತ್ತಿದ್ದೇವೆ.

 

  • 8 ತಿಂಗಳ ಹೆಣ್ಣು ಮಗುವನ್ನು 200 ರೂಪಾಯಿಗೆ ಮಾರಾಟ ಮಾಡಿದ ಬುಡಕಟ್ಟು ಕುಟುಂಬ. – ಪತ್ರಿಕಾ ವರದಿ.

# ಪ್ರಕಾಶಿಸುತ್ತಿರುವ ಭಾರತದ ಅಚ್ಛೆ ದಿನ್

 

  • ಆದಷ್ಟು ಬೇಗ ನದಿಗಳನ್ನು ಜೋಡಿಸುವ ಅವಶ್ಯಕತೆ ಇದೆ. – ನಿತಿನ್ ಗಡ್ಕರಿ (ಕೇಂದ್ರ ಜಲ ಸಂಪನ್ಮೂಲ ಸಚಿವರು)

# ಮೋದಿಯ ಬಿಜೆಪಿ ಜೊತೆ ಅಡ್ವಾಣಿ, ಜೋಷಿ, ಸಿನ್ಹಾದ್ವಯರ ಜೋಡಣೆ ಅನಗತ್ಯ ಅಂತೀರಾ ?

 

  • ಸಾಹಿತಿಗಳು ರಾಜಕೀಯ ಚಿಂತಕರಾಗಬೇಕೇ ಹೊರತು ರಾಜಕೀಯ ಪುಡಾರಿಗಳಾಗಬಾರದು. – ಡಾ.ಮೋಹನ್ ಆಳ್ವ ( ಮೂಡಬಿದಿರೆ ಆಳ್ವಸ್‌ ಫೌಂಡೇಶನ್‌ ಅಧ್ಯಕ್ಷರು)

# ಸಂತರು, ಸ್ವಾಮೀಜಿಗಳು ರಾಜಕೀಯ ಪುಡಾರಿಗಳಾಗಬಹುದಾ ?

 

  • ಸಮಾಜ ಹಾಗೂ ಧರ್ಮ ಎನ್ನುವ ಎರಡು ವಿಶಾಲ ಪದಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. – ಡಾ.ಮೋಹನ್ ಆಳ್ವ.

# ಸಮಾಜೋತ್ಸವ, ಸಂಸದ್ ಬಗ್ಗೆ ಹೇಳುತ್ತಿದ್ದೀರಾ ?

 

  • ಮೈಸೂರಿನ ಯದುವಂಶದ ಸೊಸೆ ಹಾಗೂ ರಾಣಿ ತ್ರಿಷಿಕಾ ಕುಮಾರಿ ಅವರು ಬುಧವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. – ಪತ್ರಿಕಾ ವರದಿ.

# ಅತ್ಯಮೂಲ್ಯ ಸುದ್ದಿ, ಅಭಿವೃದ್ಧಿ ಪತ್ರಿಕೋದ್ಯಮ !

 

  • ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ  ತಲೆ ಕಡಿದು ತಂದವರಿಗೆ 10 ಲಕ್ಷ ರೂ. ಬಹುಮಾನವನ್ನು ಯುವ ಬಿಜೆಪಿ ಘೋಷಿಸಿದರೆ, ಮತ್ತೊಂದೆಡೆ ಸಂಸದ ಪ್ರತಾಪ್​ಸಿಂಹ ತಲೆ ತೆಗೆದವರಿಗೆ ಅಷ್ಟೇ ಮೊತ್ತದ ಬಹುಮಾನ ನೀಡುವುದಾಗಿ ಜೆಡಿಎಸ್ ಘೋಷಿಸಿದೆ. – ಪತ್ರಿಕಾ ವರದಿ.

# ಮಹಾಭಾರತಕ್ಕೆ ಉತ್ತರ ಕುಮಾರ !  ಪ್ರಜಾತಂತ್ರ ಭಾರತದಲ್ಲಿ ಪ್ರತಾಪ-ಕುಮಾರ !!

Leave a Reply

Your email address will not be published. Required fields are marked *