Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಕಡಿಮೆಯಾದರೆ, ಉಳಿದವರಿಗೂ ಇದೆ ಗತಿ !

ಉಪ್ಪಿನಕಾಯಿ-9: ಶ್ರೀರಾಮ ದಿವಾಣ

 

 • ಎದೆ 56 ಇಂಚು ಇದ್ದರೂ,ಇಲ್ಲದಿದ್ದರೂ ಪರವಾಗಿಲ್ಲ, ಆದರೆ, ಹೃದಯ ವಿಶಾಲವಾಗಿರಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಗುಜರಾತ್ ದಲಿತ ನಾಯಕ ಜಿಗ್ನೇಶ್ ಕಿವಿಮಾತು. – ಪತ್ರಿಕಾ ವರದಿ.

# ಅಮೇರಿಕಾದ ಅಧ್ಯಕ್ಷರ ನಂತರ, ಮೋದಿಗೆ ಮದ್ದು ಕೊಟ್ಟ ಭಾರತದ ಯುವಕ 

 

 • ಪ್ರಧಾನಿಯ ನಡೆ ನುಡಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ.

# ತಡವಾಗಿ ಆದ ಸತ್ಯ ದರ್ಶನ

 

 • 1990 ಮತ್ತು 1992ರಲ್ಲಿ ನಡೆದ ಅಯೋಧ್ಯಾ ರಾಮ ಮಂದಿರ ಕರಸೇವೆ ನಮ್ಮ ಪಾಲಿನ ನಿಜವಾದ ಸ್ವಾತಂತ್ರ್ಯ ಹೋರಾಟವಾಗಿತ್ತು. – ನಳಿನ್ ಕುಮಾರ್ ಕಟೀಲ್ (ಬಿಜೆಪಿ ಸಂಸದ)

# 1947 ಮತ್ತು ಇದಕ್ಕೂ ಮೊದಲು ನಿಮ್ಮ ಪರಿವಾರ ಸಂಘಟನೆಗಳು ನಡೆಸಿದ ನಿಜವಾದ ಸ್ವಾತಂತ್ರ್ಯ ಹೋರಾಟ ಯಾವುದಾಗಿತ್ತೆಂದು ಹೇಳಿ

 

 • ಇಂದಿನ ಎಲೆಕ್ಷನ್ ಸಿಸ್ಟಂನಲ್ಲಿ ಒಬ್ಬ ಅಭ್ಯರ್ಥಿ 50 ಕೋಟಿ ರೂ. ವರೆಗೂ ಖರ್ಚು ಮಾಡುತ್ತಾನೆ. ಚುನಾವಣೆಗೆ ಪಾರ್ಟಿಗಳು ಸಾವಿರಾರು ಕೋಟಿ ಸುರಿಯುತ್ತವೆ. ಈ ದುಡ್ಡು ನಮ್ಮ ಜನರದ್ದು ತಾನೇ ? ಈ ವ್ಯವಸ್ಥೆ ಹೀಗೆಯೇ ಮುಂದುವರಿಯಬೇಕೇ ? ಅಭ್ಯರ್ಥಿಯ ಅರ್ಹತೆಗಿಂತಲೂ ಆತನಲ್ಲಿರುವ ದುಡ್ಡು, ಜಾತಿಯೇ ಮುಖ್ಯವಾದರೆ ಹೇಗೆ ? ಪ್ರಸ್ತುತ ದುಡ್ಡಿದ್ದ ಶೇಕಡಾ 20 ಮಂದಿ, ಉಳಿದ ಶೇಕಡಾ 80 ಮಂದಿಯನ್ನು ಆಳುತ್ತಿದ್ದಾರೆ. – ಚಿತ್ರನಟ ಉಪೇಂದ್ರ (ಕೆಪಿಜೆಪಿ ಸ್ಥಾಪಕ).

# ಇಲ್ಲಿ ದುಡ್ಡೇ ಸಮರ್ಥ ನಾಯಕ, ಜಾತಿಯೇ ಪ್ರಜಾತಂತ್ರ, ನಮ್ಮನ್ನಾಳುವ ಶೇಕಡಾ 20 ಮಂದಿಯೇ ಆದರ್ಶ, ಮಾದರಿ, ಸ್ಪೂರ್ತಿ !

 

 • ಕಳೆದ 4 ವರ್ಷಗಳಿಂದ ಲೋಕಪಾಲರನ್ನು ನೇಮಿಸಲು ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ, 2018ರ ಮಾರ್ಚ್ 23ರಂದು ಪ್ರತಿಭಟನೆ ನಡೆಸಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಿರ್ಧಾರ. – ಪತ್ರಿಕಾ ವರದಿ.

# ಕಳೆದ ಸಲ ನೀವು ಪ್ರತಿಭಟನೆ ಆರಂಭಿಸಿದಾಗ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿತ್ತು. ಹಾಗಾಗಿ ನಿಮ್ಮ ಪ್ರತಿಭಟನೆಯ ಹಿಂದೆ RSS-VHP-BJP-ABVP ಇತ್ಯಾದಿ ಪರಿವಾರ ಸಂಘಟನೆಗಳಿತ್ತು. ಈಗ ಇವರೇ ಆಡಳಿತದಲ್ಲಿದ್ದಾರೆ. ಹಾಗಾಗಿ ಈ ಬಾರಿ ನೀವು ಪ್ರತಿಭಟನೆ ನಡೆಸಿದರೆ, ನಿಮಗೆ ದೇಶದ್ರೋಹಿ ಪಟ್ಟ ಗ್ಯಾರಂಟಿ !

 

 • ರಾಜಕಾರಣಿಗಳು ಮಾದರಿಯಾಗಿರಬೇಕು. – ಮುಖ್ಯಮಂತ್ರಿ ಸಿದ್ಧರಾಮಯ್ಯ.

# ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಗೆ ಜಮೀನು ಸಹಿತ ಸರಕಾರಿ ಆಸ್ಪತ್ರೆಯನ್ನು ಕೊಟ್ಟು, ಅವರ ಕಡೆಯಿಂದ ಕೋಟಿ ಬೆಲೆಯ ಹ್ಯೂಬ್ಲೋಟ್ ವಾಚ್ ನ್ನು ಕೊಡುಗೆಯಾಗಿ ಪಡೆದುಕೊಳ್ಳುವುದು ಬಹದೊಡ್ಡ ಮಾದರಿ.

 

 • ಬೆಂಗಳೂರಿನಲ್ಲೇ ಮುದ್ರಿಸಿದ ಇಂಗ್ಲಿಷ್‌ ಪುಸ್ತಕಕ್ಕೆ ವಿದೇಶಿ ಪುಸ್ತಕಗಳೆಂದು ಹೆಚ್ಚು ಬೆಲೆ ನಿಗದಿ ಮಾಡಿ ಗ್ರಂಥಾಲಯ ಇಲಾಖೆ ಖರೀದಿ ಮಾಡುತ್ತಿದೆ. -ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆರೋಪ.

# ಕರ್ನಾಟಕದಲ್ಲೇ ತಯಾರಿಸಿದ 20ಕ್ಕೂ ಅಧಿಕ ರಾಸಾಯನಿಕಗಳನ್ನು ವಿದೇಶದಿಂದ ಖರೀದಿಸಿದ್ದು ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅತೀ ಹೆಚ್ಚು ಬೆಲೆಗೆ ಆರೋಗ್ಯ ಇಲಾಖೆ ಖರೀದಿ ಮಾಡುತ್ತಿದೆ.

 

 • ಶ್ರೀರಾಮನ ಬಗ್ಗೆ ಜನರಿಗೆ ಅಚಲ ವಿಶ್ವಾಸ ಹಾಗೂ ಧೃಢ ನಂಬಿಕೆ ಇದೆ. – ಪೇಜಾವರ ಸ್ವಾಮೀಜಿ.

# ವಿಸ್ವಾಸ ಮತ್ತು ನಂಬಿಕೆ ಇಲ್ಲದಿರುವುದು ಸ್ವಾಮೀಜಿಗಳಲ್ಲಿ.

 

 • ಪ್ರಧಾನಿ ಮೋದಿ ನೀಚ ಸ್ವಭಾವದ ಮನುಷ್ಯ. ಸಭ್ಯತೆಯೇ ಇಲ್ಲದವರು’ ಎಂದು ಟೀಕೆ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. – ಪತ್ರಿಕಾ ವರದಿ.

# ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಕಡಿಮೆಯಾದರೆ, ಉಳಿದವರಿಗೂ ಇದೆ ಗತಿ !

 

 • ದೇಶದಲ್ಲಿ ಭಾರಿ ಚರ್ಚೆಗೆ ಒಳಗಾದ ಏಕರೂಪ ನಾಗರಿಕ ಸಂಹಿತೆಯ ಜಾರಿ ಅಸಾಧ್ಯ. – ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ (ಕಾನೂನು ಆಯೋಗದ ಅಧ್ಯಕ್ಷರು).

# ಈ ಹೇಳಿಕೆ ವಿರುದ್ಧ RSS, VHP, BJP, ABVP ಪರಿವಾರದ ಪ್ರತಿಭಟನೆ ಯಾವಾಗಿಂದ ಶುರು ?

 

 • ನಾನು ಪ್ರಧಾನಿ ನರೇಂದ್ರ ಮೋದಿ ಅಲ್ಲ. ನಾನು ಒಬ್ಬ ಮನುಷ್ಯ. ಮನುಷ್ಯರಿಂದ ತಪ್ಪುಗಳಾಗುವುದು ಸಹಜ. – ರಾಹುಲ್‌ ಗಾಂಧಿ (ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಸಂಸದ).

# ಮೋದಿ ಮತ್ತು ಮೋದಿ ಭಕ್ತರ ಗಮನಕ್ಕೆ

 

Leave a Reply

Your email address will not be published. Required fields are marked *