Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸುಳ್ಳೇ ಜೀವನ ಸಾಕ್ಷಾತ್ಕಾರ             

ಉಪ್ಪಿನಕಾಯಿ-11: ಶ್ರೀರಾಮ ದಿವಾಣ

  • ಅಲೆಮಾರಿಗಳ ಕುರಿತು ಸಾಕಷ್ಟು ಸಂಶೋಧನೆಗಳು, ಅಧ್ಯಯನಗಳು ನಡೆದರೂ ಅವರಿಗೆ ಯಾವುದೇ ಪ್ರಯೋಜನ ಆಗದಿರುವುದು ದುರದೃಷ್ಟಕರ. – ಡಾ.ಬಾಲಗುರುಮೂರ್ತಿ.

    # ಸಂಶೋಧನೆ-ಅಧ್ಯಯನ ನಡೆಸಿದವರಿಗೆ ಪ್ರಯೋಜನವಾಗಿದೆ.

 

  • ಲೈಂಗಿಕ ದಮನಿತರ, ಶೋಷಿತರ ಅಧ್ಯಯನಕ್ಕೆ ಸಮಿತಿ ರಚಿಸಿದ ಸರಕಾರ, ಸಮಿತಿ ಸಲ್ಲಿಸಿದ ವರದಿಯಲ್ಲಿರುವ ಒಂದೇ ಒಂದು ಅಂಶವನ್ನೂ ಜಾರಿಗೊಳಿಸದಿರುವುದು ಖೇದಕರ. – ಡಾ.ಮೀನಾಕ್ಷಿ ಬಾಳಿ.

# ಸಮಿತಿಯ ವರದಿಯ ಮೇಲೆ ಮತ್ತೆ ಒಂದು ಉಪ ಸಮಿತಿ ಮಾಡ್ತಾರಂತೆ, ಆಮೇಲೆ ಮತ್ತೊಂದು ಪರಿಶೀಲನಾ ಸಮಿತಿ ಆಗುತ್ತಂತೆ, ನಂತರ ಸಾಧಕ ಬಾಧಕ ಸಮಿತಿಯಾಗಲಿದೆಯಂತೆ…

 

  • ಬ್ರಿಟೀಷರು ಮತ್ತು ಮುಸ್ಲೀಮರಿಂದ ಅಸ್ಪೃಶ್ಯತೆ ಜಾರಿಗೆ ಬಂದಿದೆ. – ಡಾ.ಪ್ರವೀಣಭಾಯ್ ತೊಗಾಡಿಯಾ (ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ)

# ಇದು ಅಂತಾರಾಷ್ಟ್ರೀಯ ಮಟ್ಟದ ಮೊಟ್ಟಮೊದಲ ಅದ್ಭುತ ಸಂಶೋಧನೆಯೇ ಸರಿ. ಡಾಕ್ಟರೇಟ್ ಕೊಡಲೇಬೇಕು.

 

  • ದೇವರ ಮುಂದೆ ಬಡವ, ಬಲ್ಲಿದ ಎಂಬ ಭಿನ್ನತೆ ಇಲ್ಲ. ಎಲ್ಲರೂ ಒಂದೆ ಎಂಬ ಭಾವನೆ ನಮಗೆ ಬರಬೇಕು. – ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಚಂದ್ರಶೇಖರ ಸ್ವಾಮಿ.

# ತಮ್ಮಂಥವರು, ಆಚರಣೆಯಲ್ಲಿ ಭಿನ್ನತೆ ಇಲ್ಲ ಎನ್ನುವುದನ್ನು ಕೃತಿಯಲ್ಲಿ ಮೊದಲು ತೋರಿಸಿಕೊಡಬೇಕು.

 

  • ಡಿ.15ರಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಬಗ್ಗೆ ಪ್ರಸ್ತಾಪಿಸಲು ಹಾಗೂ ಅದೇ ದಿನ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅವರನ್ನು ಭೇಟಿ ಮಾಡಿ, ಕೊಲೆ ಪ್ರಕರಣಗಳ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಮನವಿ ಮಾಡಲು ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. – ಪತ್ರಿಕಾ ವರದಿ.

# ಬಿಜೆಪಿಗೆ, ಸಂಘ ಪರಿವಾರದ ಕಾರ್ಯಕರ್ತರು ಮಾತ್ರವೇ ಮನುಷ್ಯರಂತೆ ಕಾಣುತ್ತಿದ್ದಾರಾ ?

 

  • ಅರ್ಧಕ್ಕೂ ಹೆಚ್ಚು ಭಾರತೀಯರು ಕನಿಷ್ಠ ಸೌಲಭ್ಯ ಇರುವ ಪ್ರತ್ಯೇಕ ಶೌಚಾಲಯ ಹೊಂದಿಲ್ಲ. ಕನಿಷ್ಠ ಸೌಲಭ್ಯದ ಶೌಚಾಲಯ ಇಲ್ಲದ ಹೆಚ್ಚು ಜನರನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. – ವಾಟರ್‌ಏಡ್ ವಾರ್ಷಿಕ ವರದಿ.

# ಗ್ರಾಮಕ್ಕೊಂದು ಮಂದಿರ ನಿರ್ಮಿಸಲು ಧರ್ಮ ಸಂಸದ್ ನಿರ್ಣಯ ತೆಗೆದುಕೊಂಡಿದೆಯಂತೆ.

 

  • ಶಾಲಾ ಪಠ್ಯಪುಸ್ತಕಗಳ ಮುಖಪುಟಗಳಿಗೆ ಕೇಸರಿ ಬಣ್ಣವನ್ನೇ ಬಳಸಬೇಕು ಎಂದು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ನಿರ್ಧಾರ ಕೈಗೊಂಡ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವ ಕಾರ್ಯ ಆರಂಭಗೊಂಡಿದೆ. ರಾಜಧಾನಿ ಲಖನೌದಿಂದ 300 ಕಿ.ಮೀ ದೂರದಲ್ಲಿರುವ ಪಿಲಿಭಿಟ್‌ ಜಿಲ್ಲೆಯಲ್ಲಿ 100 ಪ್ರಾಥಮಿಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. – ಪತ್ರಿಕಾ ವರದಿ.

# ಪ್ರತೀದಿನ ಶಾಲೆಗೆ ಬರುವಾಗ ಮಕ್ಕಳು ಮುಖಕ್ಕೆ ಕೇಸರಿ ಬಣ್ಣ ಬಳಿದುಕೊಂಡೇ ಬರತಕ್ಕದ್ದು !

 

·      ಕೆಲವೇ ಕೆಲವು ಇವಿಎಂ ಮತ್ತು ಮತದಾನ ದೃಢೀಕರಣ ರಸೀದಿ ಯಂತ್ರಗಳಲ್ಲಿ (ವಿವಿಪಿಎಟಿ) ದೋಷ ಕಂಡು ಬಂದಿತ್ತು. ತಕ್ಷಣವೇ ಅವುಗಳ ಬದಲಿಗೆ ಹೊಸ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. ದುರ್ಬಳಕೆ ಆಗಿಲ್ಲ. – ಚುನಾವಣಾ ಆಯೋಗ.

#  ಮೋದಿ ಯೋಗ

 

·      ಸತತ 22 ವರ್ಷಗಳಿಂದ ಗುಜರಾತಿನಲ್ಲಿ ಬಿಜೆಪಿ ಸರ್ಕಾರವಿದೆ. ನಾನು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನರೇಂದ್ರ ಮೋದಿ ಅವರ ಭಾಷಣಗಳಲ್ಲಿ ಅಭಿವೃದ್ಧಿ ಪರ ಮಾತುಗಳು ಕಾಣದಿರಲು ಕಾರಣವೇನು? – ರಾಹುಲ್ ಗಾಂಧಿ.

# 500, 1000 ರೂಪಾಯಿ ನೋಟಿನ ಸ್ಥಿತಿ ಈಗ ಅದರದ್ದು !

 

  • ಸೋಲುವ ಭೀತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಇಲ್ಲಸಲ್ಲದ ಸುಳ್ಳು ಹಬ್ಬಿಸುತ್ತಿದ್ದಾರೆ. ಇದು ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ. ಮೋದಿ ತಮ್ಮ ಈ ಹೇಳಿಕೆ ಬಗ್ಗೆ ದೇಶದ ಜನರ ಕ್ಷಮೆ ಕೇಳುತ್ತಾರೆ ಎಂಬ ವಿಶ್ವಾಸವಿದೆ. ಈ ಮೂಲಕ ಅವರು ತಮ್ಮ ಹುದ್ದೆ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಘನತೆಯನ್ನು ಕಾಪಾಡುತ್ತಾರೆ ಎಂದು ನಂಬಿದ್ದೇನೆ. – ಮಾಜಿ ಪ್ರಧಾನಿ ಮನಮೋಹನ ಸಿಂಗ್

# ಪ್ರಚಾರ ಸಿಕ್ಕಿದರೆ ಸಾಕು, ಘನತೆಯಿಂದ ನನಗೇನಾಗಬೇಕು ?

 

  • ಚುನಾವಣೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಪಾಕಿಸ್ತಾನವನ್ನು ಎಳೆದು ತರಬೇಡಿ. ಸುಮ್ಮನೆ ಕಲ್ಪಿತ ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು, ಸ್ವಂತ ಸಾಮರ್ಥ್ಯದಿಂದ ಗೆದ್ದು ತೋರಿಸಿ. – ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್.

# ಸುಳ್ಳೇ ಜೀವನ ಸಾಕ್ಷಾತ್ಕಾರ

            

 

 

Leave a Reply

Your email address will not be published. Required fields are marked *