Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡೈಲಾಗ್ ಸಾಕು, ಆ್ಯಕ್ಷನ್ ಬೇಕು

ಉಪ್ಪಿನಕಾಯಿ-12: ಶ್ರೀರಾಮ ದಿವಾಣ

 

  • ಮನುಷ್ಯನನ್ನು ಕೊಲ್ಲುವುದು ತಪ್ಪು. ಇಂಥ ಖಂಡನೀಯ ಅಪರಾಧವನ್ನು ಬಳಸಿಕೊಂಡು ರಾಜಕೀಯ ಮಾಡುವವರು ದೊಡ್ಡ ರಾಕ್ಷಸರು. ಈ ಮೂಲಕ ಸಮಾಜ, ಯುವಕರಲ್ಲಿ ದ್ವೇಷದ ಬೀಜ ಬಿತ್ತಿ ಹಾದಿ ತಪ್ಪಿಸುತ್ತಿರುವ, ಕೊಲೆಗೆ ಕೊಲೆ ಎಂಬುದನ್ನು ಸಾರುತ್ತಿರುವ ರಾಜಕೀಯದ ವಿರುದ್ಧ ಈ ಸಾಮರಸ್ಯ ನಡಿಗೆ. – ಪ್ರಕಾಶ್ ರಾಜ್ (ಖ್ಯಾತ ಚಿತ್ರನಟ)

# ಇಲ್ಲಿ ರಾಕ್ಷಸರೇ ಧರ್ಮ ರಕ್ಷಕರು ಮತ್ತು ಸಂಸ್ಕೃತಿ ರಕ್ಷಕರ ವೇಷದಲ್ಲಿದ್ದಾರೆ, ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ !

 

  • ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಕಾರಣ. ಬಿಜೆಪಿಯ ಐದಾರು ಮುಖಂಡರು ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. – ರಾಮಲಿಂಗಾ ರೆಡ್ಡಿ (ಗೃಹ ಸಚಿವರು)

# ಜವಾಬ್ದಾರಿಯುತ ಗೃಹ ಸಚಿವರು ಆರೋಪಿಸುವುದಲ್ಲ. ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳಡಿ ವಿರುದ್ಧ ಕೇಸು ಜಡಿದು ಜೈಲಿಗೆ ಹಾಕುವ ಕೆಲಸ ಮಾಡಬೇಕು. ರಣಹೇಡಿಗಳು ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರಿಯಲೇಬಾರದು.

 

  • ಅಮಾಯಕರ ರಕ್ಷಣೆ ಸರ್ಕಾರದ ಜವಾಬ್ದಾರಿ. ಶಾಂತಿ ಭಂಗ ತರುವ ಯಾರೇ ಆಗಲಿ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. – ಆರ್.ವಿ.ದೇಶಪಾಂಡೆ (ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು)

# ಡೈಲಾಗ್ ಸಾಕು, ಆ್ಯಕ್ಷನ್ ಬೇಕು.

 

  • ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು. ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮದ ಆಧಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕಾ ಪ್ರಕಟಣೆಯಲ್ಲಿರುವ ಆರೋಪಗಳು ಸುಳ್ಳು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿಯಿಂದ ಸಾಬೀತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಹಾಗೂ ಪತ್ರಿಕಾ ಪ್ರಕಟಣೆ ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಕೋಮು ದ್ವೇಷದ ಮೂಲಕ ವಿಭಜಿಸುವ ತಂತ್ರವಾಗಿದೆ. – ಹೇಮಂತ ನಿಂಬಾಳ್ಕರ್ (ಪಶ್ಚಿಮ ವಲಯದ ಐಜಿಪಿ)

# ಬಂಟ್ವಾಳ ಪೊಲೀಸರು ‘ವಾರ್ತಾಭಾರತಿ’ ವರದಿಗಾರರೊಬ್ಬರ ವಿರುದ್ಧ ಕೆಲ ತಿಂಗಳ ಹಿಂದೆ ವರದಿಯೊಂದಕ್ಕೆ ಸಂಬಂಧಿಸಿ ಕೇಸು ದಾಖಲಿಸಿ ಜೈಲಿಗೆ ಹಾಕಿದ್ದರು. ಈಗ ಹೊನ್ನಾವರದ ಘಟನೆಗೆ ಸಂಬಂಧಿಸಿ ಸುಳ್ಳು ಪತ್ರಿಕಾ ಹೇಳಿಕೆ ನೀಡಿದ ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿದವರ ವಿರುದ್ಧ ನಿಮ್ಮ ಕರ್ತವ್ಯ ದಕ್ಷತೆಯನ್ನು ತೋರಿಸಿಬೇಕು.

 

  • ರಾಜ್ಯದಲ್ಲಿ ನಡೆದ ಹಿಂದೂಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಬಿಜೆಪಿ ನಾಯಕರ ಒತ್ತಾಯ. – ಪತ್ರಿಕಾ ವರದಿ.

# ಹತ್ಯೆಗೀಡಾದ ಮುಸ್ಲೀಮರು ಮತ್ತು ಕ್ರೈಸ್ತರು ಮನುಷ್ಯರಲ್ಲವೇ ?

 

  • ಕಾಂಗ್ರೆಸಿಗರು ಮೊದಲು ಅವರ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸಿಗರ ಮುಖ ರಾಕ್ಷಸ ಮುಖವೋ,  ಮನುಷ್ಯರ ಮುಖವೋ ಗೊತ್ತಾಗುತ್ತೆ. – ಅನಂತಕುಮಾರ್ ಹೆಗಡೆ (ಕೇಂದ್ರ ಮಂತ್ರಿ)

# ಗೋ ಮುಖದ ಹಿಂದೆ ರಾಕ್ಷಸ ಮುಖ ಕಂಡದ್ದಂತೂ ಹೌದು.

 

  • ಪೊಲೀಸರು ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರವಿ ಬೆಳಗೆರೆ ವಿರುದ್ಧದ ಪ್ರಕರಣದಲ್ಲಿ ತಳಕು ಹಾಕುವ ಪ್ರಯತ್ನ ಮೇಲ್ನೋಟಕ್ಕೆ ಕಂಡು ಬರುತ್ತಿದೆ. – ಕೆ.ದಿವಾಕರ್ (ರವಿ ಬೆಳಗೆರೆ ಪರ ವಕೀಲರು)

# ಪತ್ತೆಯಾಗದ ಪ್ರಕರಣಗಳನ್ನು ಯಾರಾದರೊಬ್ಬರ ತಲೆಗೆ ಕಟ್ಟುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಲಾಗಾಯ್ತಿನಿಂದಲೂ ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆ.

 

  • ಪ್ರಧಾನಿ ನರೇಂದ್ರ ಮೋದಿ ತೈವಾನ್‌ನಿಂದ ಆಮದಾಗುವ 80 ಸಾವಿರ ಮೌಲ್ಯದ ಅಣಬೆ ತಿನ್ನುತ್ತಾರೆ. ಹಾಗಾಗಿ ಅವರು ಬೆಳ್ಳಗಿದ್ದಾರೆ. ಒಂದು ಅಣಬೆಯ ಬೆಲೆ 80 ಸಾವಿರ. ಒಂದು ದಿನದಲ್ಲಿ ಮೋದಿ 5 ಅಣಬೆ ತಿನ್ನುತ್ತಾರೆ. 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾದಾಗಿನಿಂದಲೂ ಅವರು ಅಣಬೆ ತಿನ್ನುತ್ತಿದ್ದಾರೆ. ಮೋದಿ ಅವರು ಪ್ರತಿ ತಿಂಗಳು20 ಕೋಟಿ ಮೊತ್ತದ ಅಣಬೆಯನ್ನು ತಿನ್ನುತ್ತಾರೆ. – ಅಲ್ಪೇಶ್ ಠಾಕೂರ್ (ಗುಜರಾತ್ ಕಾಂಗ್ರೆಸ್ ನಾಯಕ)

     # 2001ರಿಂದ ಮೋದಿಗಾಗಿ ಆಮದು ಮಾಡಿದ ಅಣಬೆ ಬಗ್ಗೆ ಮತ್ತು ಇದಕ್ಕಾಗಿ ಖರ್ಚು ಮಾಡಿದ ಹಣದ ಮೂಲದ ಬಗ್ಗೆ ತನಿಖೆಯಾಗಲಿ. ಸ್ವದೇಶಿ ಅಲ್ಲ, ವಿದೇಶಿ ಪ್ರಿಯ ಮೋದಿಯ ನಿಜ ಬಣ್ಣ ಬಯಲಾಗಲಿ.

 

  • ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂಬ ಕಾರಣಕ್ಕೆ, ಅದು ಕೂಡ ಮತದಾನ ಪ್ರಕ್ರಿಯೆಯ ಕೊನೆಯ ಹಂತದಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಪ್ರತಿ ದಿನ ಹೊಸ ಹೊಸ, ವಾಸ್ತವ ಅಲ್ಲದ ಮತ್ತು ನಂಬಲು ಸಾಧ್ಯವಿಲ್ಲದ ಕಥೆಗಳನ್ನು ಹೆಣೆಯುವ ಅಗತ್ಯವಿದೆಯೇ ? – ಶತ್ರುಘ್ನ ಸಿನ್ಹಾ (ಬಿಜೆಪಿ ಸಂಸದ)

# ಅವಾಸ್ತವಿಕ ಕಥೆಗಳನ್ನು ಕಟ್ಟಿ ಪ್ರಚಾರ ಮಾಡದೆ ಅಧಿಕಾರಕ್ಕೆ ಬರುವುದಾದರೂ ಹೇಗೇ ?      

 

Leave a Reply

Your email address will not be published. Required fields are marked *