Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗ್ರಾಪಂ ನಿರ್ಣಯ ಧಿಕ್ಕರಿಸಿ ಕಾಪು ತಾಲೂಕಿಗೆ ಬೆಳ್ಳೆ ಸೇರ್ಪಡೆ: ಸೊರಕೆ ಕ್ರಮಕ್ಕೆ ಜನಾಕ್ರೋಶ- ಕೋರ್ಟ್ ಮೆಟ್ಟಿಲೇರಲು ಚಿಂತನೆ

# ಬ್ರಹ್ಮಾವರ, ಕಾಪು, ಬೈಂದೂರು ಸಹಿತ ಇತ್ತೀಚೆಗೆ ಘೋಷಣೆಯಾದ ಹೆಬ್ರಿ ತಾಲೂಕುಗಳ ಗಡಿ ನಿರ್ಣಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಅಕ್ಟೋಬರ್  27ರಂದು ನಡೆದ ಸಭೆಯ ನಡಾವಳಿಗಳ ಪ್ರತಿ udupibits.in ಗೆ ಲಭ್ಯವಾಗಿದ್ದು; ಇದರಲ್ಲಿ ಗ್ರಾಮ ಸಭೆ, ಸಾಮಾನ್ಯ ಸಭೆಯ ಸರ್ವಾನುಮತದ ನಿರ್ಣಯದ ಹೊರತಾಗಿಯೂ ಬೆಳ್ಳೆ ಗ್ರಾಮ ಪಂಚಾಯತ್ ನ್ನು ನೂತನ ಕಾಪು ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಶಾಸಕ ವಿನಯಕುಮಾರ್ ಸೊರಕೆ ಅವರು ಅಭಿಪ್ರಾಯ ನೀಡಿದ್ದನ್ನು ಪುರಸ್ಕರಿಸಿ ಬೆಳ್ಳೆ ಗ್ರಾಮ ಪಂಚಾಯತ್ ನ್ನು ಕಾಪು ತಾಲೂಕಿಗೆ ಸೇರ್ಪಡೆಗೊಳಿಸುವ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

 ಬೆಳ್ಳೆ ಗ್ರಾಮ ಪಂಚಾಯತ್ ನ್ನು ನೇರ ಸಂಪರ್ಕವಿರುವ ಉಡುಪಿ ತಾಲೂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಗ್ರಾಮ ಸಭೆಯ ನಿರ್ಣಯವನ್ನು ಸಾರಾಸಗಟಾಗಿ ನಿರ್ಲಕ್ಷಿಸಿರುವ ಸೊರಕೆಯವರು ಬೆಳ್ಳೆಯ ಜನತೆಗೆ ವಂಚನೆ, ವಿಶ್ವಾಸದ್ರೋಹ ಎಸಗಿದ್ದಾರೆ. ಕ್ಷೇತ್ರದ ಜನರ, ಜನಪ್ರತಿನಿಧಿಗಳ ಬೇಡಿಕೆಯನ್ನೇ ಅಲ್ಲಗಳೆದಿರುವ ಅವರು ಕೇವಲ ರಾಜಕೀಯ ಲಾಭಕ್ಕಷ್ಟೇ ಬೆಳ್ಳೆಯನ್ನು ಸೀಮಿತವಾಗಿರಿಸಿರುವುದು ಅವರ ಈ ಘಾತುಕ ನಡೆಯಿಂದ ಸ್ಪಷ್ಟವಾಗಿದೆ.

 ಇದೇ ಸಭೆಯಲ್ಲಿ ಬೇರೆ ಎಲ್ಲ ತಾಲೂಕುಗಳ ರಚನೆಗೆ ಸಂಬಂಧಿಸಿದಂತೆ ಜನರ ಬೇಡಿಕೆಗಳಿಗೆ ಬೆಲೆ ನೀಡಲಾಗಿದೆ. ಗ್ರಾಮ ಪಂಚಾಯತ್ ನಿರ್ಣಯಗಳಿಗೆ ಬೆಲೆ ನೀಡಿದ್ದು ಅದರಲ್ಲಿದ್ದಂತೆ ಕೆಲವು ಗ್ರಾಪಂಗಳನ್ನು ಹೊಸ ತಾಲೂಕುಗಳಿಗೆ ಸೇರ್ಪಡೆ ಮಾಡಿದರೆ, ಕೆಲವನ್ನು ಮೂಲ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ. ಜನರ ಅಭಿಪ್ರಾಯಕ್ಕೆ ಬೆಲೆ ನೀಡಿದ ಉಸ್ತುವಾರಿ ಸಚಿವರು, ಬೈಂದೂರು, ಕುಂದಾಪುರ, ಕಾರ್ಕಳ ಶಾಸಕರ ನಡೆ ನಿಜಕ್ಕೂ ಶ್ಲಾಘನೀಯ. ಪಕ್ಷ ಬೇದ ಮರೆತು ನಡೆದ ಉಸ್ತುವಾರಿ ಸಚಿವರ ನಡೆ ಮಾದರಿ. ಸಭೆಯ ಆರಂಭದಲ್ಲೇ ಅವರು ಜನರ ಭಾವನೆಗಳೇ ಅಂತಿಮ ಎಂದು ಘೋಷಿಸಿ ಪ್ರಜಾಪ್ರಭುತ್ವ ಕಾಪಾಡಿದ್ದಾರೆ. ಆದರೆ ಜನರ ಬೇಡಿಕೆಯನ್ನು ಒಮ್ಮೆಯೂ ಆಲಿಸದ, ಸ್ವತಃ ಅವರದೇ ಪಕ್ಷದ ಪಂ. ಅಧ್ಯಕ್ಷೆಯಾದಿಯಾಗಿ, ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಬೆಲೆ ನೀಡದ ಶಾಸಕ ಸೊರಕೆ ಮಾತ್ರ ಬೆಳ್ಳೆ ಗ್ರಾಮ ಪಂಚಾಯತ್ ನ್ನು ಒತ್ತಾಯಪೂರ್ವಕವಾಗಿ ಕಾಪುವಿಗೆ ಸೇರಿಸಿದ್ದಾರೆ.

 ಯಾವುದೇ ಸಮಿತಿಯ ಶಿಫಾರಸು ಇಲ್ಲದೆ ಅವೈಜ್ಞಾನಿಕವಾಗಿ  ಕಾಪು ತಾಲೂಕನ್ನು ರಚಿಸಲಾಗಿದೆ. ಹಾಗಾಗಿ ಇಲ್ಲಿ ಸೊರಕೆಯವರೇ ತಮ್ಮ ಮೂಗಿನ ನೇರಕ್ಕೆ ಹಾಗೂ ರಾಜಕೀಯ ಲೆಕ್ಕಾಚಾರದಲ್ಲಿ ಗ್ರಾಮ ಪಂಚಾಯತ್ ಗಳ ಸೇರ್ಪಡೆ ಮಾಡಿದ್ದಾರೆ. ಜನರ ಭಾವನೆಗಳಿಗೆ ಅವರು ಯಾವುದೇ ಬೆಲೆ ನೀಡಿರುವುದಿಲ್ಲ. ಬೆಳ್ಳೆಯ ಜನರು ಉಡುಪಿಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ರಾಜ್ಯ ಹೆದ್ದಾರಿ ಸಂಪರ್ಕ ಮಾರ್ಗವಾಗಿದೆ. ಜತೆಗೆ ಉಡುಪಿ ನಗರದ ಹೊರ ವಲಯದ ವ್ಯಾಪ್ತಿಯಲ್ಲಿದೆ. ಸರಕಾರಿ ಸಹಿತ ಪೂರಕ ಬಸ್ ವ್ಯವಸ್ಥೆಯಿದೆ. ಜತೆಗೆ ಜನರು ಎಲ್ಲದಕ್ಕೂ ಉಡುಪಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಡಿಸಿ ಕಚೇರಿಗೂ ಇಲ್ಲಿಂದ ಕೆಲವೇ ಕಿ.ಮೀ. ಅಂತರವಿದೆ. ಅದಾಗ್ಯೂ ಬೆಳ್ಳೆ ಗ್ರಾಮ ಪಂಚಾಯತ್ ಬೇಡಿಕೆಗೆ ಮನ್ನಣೆ ದೊರೆಯದಿರುವುದು ಶಾಸಕ ಸೊರಕೆ ತನ್ನ ಕ್ಷೇತ್ರದ ಈ ಭಾಗದ ಮತದಾರರಿಗೆ ಮಾಡುವ ಘೋರ ಅನ್ಯಾಯವೇ ಸರಿ.

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿ, ಮಚ್ಚಟ್ಟು, ಅಮಾಸೆಬೈಲು ಗ್ರಾಮಗಳನ್ನು ಹೆಬ್ರಿ ಸನಿಹದಲ್ಲಿದ್ದರೂ ವ್ಯಾವಹಾರಿಕವಾಗಿ ಕುಂದಾಪುರ ತಾಲೂಕನ್ನೇ ನೆಚ್ಚಿಕೊಂಡ ಪರಿಣಾಮ ಮತ್ತು ಭೌಗೋಳಿಕ ಅನುಕೂಲತೆಗಳನ್ನು ಪರಿಗಣಿಸಿ ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ.

 ಬಿಲ್ಲಾಡಿ ಬ್ರಾಹ್ಮಾವರಕ್ಕೆ, ಹಾಲಾಡಿ-ಹೆಂಗವಳ್ಳಿ-ಚಿತ್ತೂರು-ವಂಡ್ಸೆ ಕುಂದಾಪುರದಲ್ಲಿ, ಕಳ್ತೂರು-ಕರ್ಜೆ-ಕೊಕ್ಕರ್ಣೆ-ನಾಲ್ಕೂರು ಬ್ರಹ್ಮಾವರದಲ್ಲಿ, ಮಡಾಮಕ್ಕಿ-ಬೆಳ್ವೆ ಹೆಬ್ರಿಗೆ

 ಹತ್ತಿರದ ಸಂಪರ್ಕ ರಸ್ತೆಯನ್ನು ಪರಿಗಣಿಸಿ ಗ್ರಾಪಂ ನಿರ್ಣಯಕ್ಕೆ ಬೆಲೆ ನೀಡಿ ಬಿಲ್ಲಾಡಿ ಗ್ರಾಪಂನ್ನು ಹೆಬ್ರಿ ಬದಲಿಗೆ ಬ್ರಹ್ಮಾವರಕ್ಕೆ ಸೇರಿಸಲಾಗಿದೆ. ಹಾಲಾಡಿ, ಹೆಂಗವಳ್ಳಿಯನ್ನು ಗ್ರಾಪಂ ಕೋರಿಕೆಯಂತೆ ಕುಂದಾಪುರದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಚಿತ್ತೂರು, ವಂಡ್ಸೆಯನ್ನೂ ಗ್ರಾಪಂ ಕೋರಿಕೆಯಂತೆ ಕುಂದಾಪುರದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಕಳ್ತೂರು, ಕರ್ಜೆ, ಕೊಕ್ಕರ್ಣೆ, ನಾಲ್ಕೂರು ಗ್ರಾಮ ಪಂಚಾಯತ್ ಗಳನ್ನು ಅವುಗಳ ಕೋರಿಕೆ ಮೇರೆಗೆ ಬ್ರಹ್ಮಾವರದಲ್ಲಿ ಉಳಿಸಿಕೊಳ್ಳಲಾಗಿದೆ. ಮನವಿ ಮೇರೆಗೆ ಮಡಾಮಕ್ಕಿ, ಬೆಳ್ವೆ ಗ್ರಾಪಂಗಳನ್ನು ಹೆಬ್ರಿಗೆ ಸೇರಿಸಲಾಗಿದೆ. ಉಡುಪಿಗೆ ಇರುವ ಸಂಪರ್ಕದ ಹಿತದೃಷ್ಟಿಯಿಂದ ಪೆರ್ಡೂರು, ಭೈರಂಪಳ್ಳಿ, ಶಿರೂರು, ಬೆಳ್ಳರಪಾಡಿಗಳನ್ನು ಗ್ರಾಪಂ ಹಾಗೂ ಉಡುಪಿ ತಾಪಂ ನಿರ್ಣಯದಂತೆ ಉಡುಪಿಗೆ ಸೇರಿಸಲಾಗಿದೆ. ಕಡ್ತಲ ಗ್ರಾಮವನ್ನು ಕಡ್ತಲ ಗ್ರಾಪಂನ್ನು ಕಡ್ತಲದಲ್ಲಿ ಉಳಿಸಿಕೊಳ್ಳುವಂತೆ ಹೆಬ್ರಿ, ಕುಚ್ಚೂರು, ಶಿವಪುರ, ಮುದ್ರಾಡಿ, ನಾಡ್ಪಾಲು, ವರಂಗ ಗ್ರಾಪಂಗಳನ್ನು ತಾಪಂ ನಿರ್ಣಯದಂತೆ ಹೆಬ್ರಿಗೆ ಸೇರಿಸಲಾಗಿದೆ.

 ಈ ಮೇಲಿನ ಎಲ್ಲ ಪ್ರಕರಣಗಳಲ್ಲಿ ಗ್ರಾ.ಪಂ. ನಿರ್ಣಯಗಳನ್ನು, ಜನರ ಅಭಿಪ್ರಾಯ ಹಾಗೂ ಅನುಕೂಲತೆಗಳಿಗೆ ಬೆಲೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಅಭಿನಂದನಾರ್ಹರು. ಆದರೆ ಬೆಳ್ಳೆ ಗ್ರಾಪಂಗೆ ಸಂಬಂಧಿಸಿದಂತೆ ಗ್ರಾಪಂ ನಿರ್ಣಯದ ಹೊರತಾಗಿಯೂ ಯಾವುದೇ ಕಾರಣ ನೀಡದೆ ಕೇವಲ ಶಾಸಕರ ಅಭಿಪ್ರಾಯವನ್ನು ಪರಿಗಣಿಸಿ ಕಾಪುವಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿದೆ. ಮೇಲಿನ ಹತ್ತಾರು ಗ್ರಾಪಂ ಗಳಿಗೆ ಒಂದು ನ್ಯಾಯವಾದರೆ ಬೆಳ್ಳೆಗೆ ಇನ್ನೊಂದೇ ನ್ಯಾಯ ನೀಡಿ ತಾರತಮ್ಯ ಹಾಗೂ ಮೋಸ ಎಸಗುವಲ್ಲಿ ಶಾಸಕ ಸೊರಕೆ ಯಶಸ್ವಿಯಾಗಿದ್ದಾರೆ.

 ಕಾಪು ತಾಲೂಕಿಗೆ ಬೆಳ್ಳೆ ಸೇರ್ಪಡೆ ವಿರುದ್ಧ ಕೋರ್ಟ್ ಮೊರೆ ಹೋಗಲು ಚಿಂತನೆ

ಯಾವುದೇ ಶಿಫಾರಸು ಇಲ್ಲದೆ ಪುರಸಭೆ ಇದ್ದ ಹೊರತಾಗಿಯೂ ಕಾಪು ತಾಲೂಕು ರಚನೆ ಮಾಡಿ, ಗ್ರಾಮ ಸಭೆಗಳ ನಿರ್ಣಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಶಯವನ್ನು ಮೀರಿ ಹಾಗೂ ಇತರ ಗ್ರಾಪಂ ಗಳಿಗೆ ಅನುಸರಿಸಿದ ನೀತಿಯನ್ನು ಅನುಸರಿಸದೆ ಶಾಸಕರ ಏಕಮುಖ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತೆಗೆದುಕೊಂಡ ನಿರ್ಣಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಹೋರಾಟ ಸಮಿತಿ ನಿರ್ಧರಿಸಿದೆ.

 ಈ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಒಂದೊಮ್ಮೆ ಈ ಪ್ರಕ್ರಿಯೆ ಸಾಗಿದ್ದಲ್ಲಿ ನೂತನ ಕಾಪು ತಾಲೂಕು ರಚನೆ ಪ್ರಕ್ರಿಯೆಗೇ ಹಿನ್ನಡೆ ಉಂಟಾಗುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾದಲ್ಲಿ ಇದಕ್ಕೆ ಶಾಸಕ ವಿನಯ ಕುಮಾರ್ ಸೊರಕೆಯವರೇ ನೇರವಾಗಿಒ ಕ಻ರಣರೆಂದು ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *