Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಿಸೆಂಬರ್ 17: ಕಾಂತಾವರದಲ್ಲಿ ಡಾ.ಶರಭೇಂದ್ರ ಸ್ವಾಮಿ ಉಪನ್ಯಾಸ

ಕಾಂತಾವರ (ಬೆಳುವಾಯಿ): ಕಾಂತಾವರ ಅಲ್ಲಮ ಪ್ರಭು ಪೀಠವು ಪ್ರತೀ ತಿಂಗಳ ಮೂರನೇ ಆದಿತ್ಯವಾರ ಆಯೋಜಿಸುವ ‘ಅನುಭವದ ನಡೆ ಅನುಭಾವದ ನುಡಿ’ ಕಾಂತಾವರ ಬಾರಾಡಿ ಶೃಂಗಶ್ಯಾಮಲಾ ವೆಂಕಟೇಶ ಮಯ್ಯ ಮತ್ತು ನಿರಾಭಾರಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 17ರಂದು ಮಧ್ಯಾಹ್ನ 3 ಗಂಟೆಗೆ ಕಾಂತಾವರ ಕನ್ನಡ ಭವನದ ಅಲ್ಲಮ ಪ್ರಭು ವೇದಿಕೆಯಲ್ಲಿ ನಡೆಯಲಿದೆ.

72ನೇ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರು ನಡೆಸಿಕೊಡಲಿದ್ದಾರೆ. ‘ಅಂಬಿಗರ ಚೌಡಯ್ಯನ ವಚನಗಳಲ್ಲಿ ಪ್ರತಿಭಟನೆಯ ಧ್ವನಿ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಲಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮದವರಾದ ಡಾ.ಶರಭೇಂದ್ರ ಸ್ವಾಮಿಯವರು, ಧಾರವಾಡದ ಕರ್ನಾಟಕ ವಿವಿಯಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಮೂರನೇ ರ್ಯಾಂಕ್ ನೊಂದಿಗೆ ಪಡೆದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಪಡೆದವರು. ರಾಜಶೇಖರನ ‘ಕಾವ್ಯಮೀಮಾಂಸೆ’ ಮತ್ತು ಕನ್ನಡದ ಖ್ಯಾತ ಕವಿ ರನ್ನನ ಗುರುವಾದ ಜಿನಸೇನಾಚಾರ್ಯರ ‘ಪೂರ್ವ ಪುರಾಣ’ದ ಅಧ್ಯಯನದ ಹಿನ್ನೆಲೆಯಲ್ಲಿ ‘ಕಾವ್ಯಸ್ವರೂಪ: ಒಂದು ವಿಮರ್ಶಾತ್ಮಕ ನಿಲುವು’ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ಪದವಿಯನ್ನು ಪಡೆದವರು.

ಧಾರವಾಡದ ಸಿ.ಎಸ್.ಐ.ಕಾಲೇಜಿನಲ್ಲಿ ಕೆಲವರ್ಷ ಸಂಸ್ಕೃತ ಉಪನ್ಯಾಸಕರಾಗಿದ್ದ ಶರಭೇಂದ್ರ ಸ್ವಾಮಿ, ರಂಗಭೂಮಿ ನಟನಾಗಿ, ಕವಿಯಾಗಿ, ನಾಟಕ ರಚನಾಕಾನಾಗಿ ಪ್ರಸಿದ್ಧಿ ಪಡೆದವರು ಮತ್ತು ಜನಪ್ರಿಯರಾದವರು. ಪ್ರಸ್ತುತ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

 

Leave a Reply

Your email address will not be published. Required fields are marked *