Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೋದಿ ಭಕ್ತರ ಬಾಯಲ್ಲಿ ನೀವು ದೇಶದ್ರೋಹಿಯಾಗುವ, ಹಿಂದೂ ವಿರೋಧಿಯಾಗುವ ದಿನ ದೂರವಿಲ್ಲ !  

ಉಪ್ಪಿನಕಾಯಿ-13: ಶ್ರೀರಾಮ ದಿವಾಣ

 

  • ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡ ಕಾರಣಕ್ಕೆ ಜೈಲಿಗೆ ಹೋದರು. ಇದೇ ಕಾರಣಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ಜೈಲಿಗೆ ಹೋದರು. – ಮುಖ್ಯಮಂತ್ರಿ ಸಿದ್ಧರಾಮಯ್ಯ.

# ನರೇಂದ್ರ ಮೋದಿ ನಮ್ಮ ನಾಯಕರು. ನಗದು ವ್ಯವಹಾರ ಮಾಡಬಾರದು ಎನ್ನುವುದು ಮೋದಿಯವರ ಆಶಯವಾಗಿತ್ತು. ಅದಕ್ಕೆ ನಾವು ಚೆಕ್ ನಲ್ಲೇ ವ್ಯವಹಾರ ಮಾಡಿದ್ದೇವೆ, ಅವರ ಆಶಯದಂತೆ ನಡೆದುಕೊಂಡಿದ್ದೇವೆ !

 

  • ಸ್ವಜನ ಪಕ್ಷಪಾತದ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನೈತಿಕತೆ ಕಳೆದುಕೊಂಡಿದ್ದಾರೆ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. – ಅನಂತ ಕುಮಾರ್ ಹೆಗಡೆ (ಕೇಂದ್ರ ಮಂತ್ರಿ)

# ಸಿಬಿಐ, ಐಟಿ ಅಧಿಕಾರಿಗಳಂತೆ !

 

  • ಮಣಿಪಾಲ್‌ ಆಸ್ಪತ್ರೆಯನ್ನೂ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. – ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ.

# ಶಿವಮೊಗ್ಗಕ್ಕೆ ಹೋದಾಗ ಏನಾದರೊಂದು ಸುಳ್ಳು ಹೇಳ್ಬೇಕು ಅಂತ ಹೇಳಿದ ಸುಳ್ಳಾ ?

 

  • ಮೋದಿ ಅವರ ಕಾಲದಲ್ಲಿ ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. – ಪಿ.ಚಿದಂಬರಂ (ಮಾಜಿ ಕೇಂದ್ರ ಮಂತ್ರಿ, ಕಾಂಗ್ರೆಸ್ ನಾಯಕ)

# ಮೋದಿ ಕಾಲದಲ್ಲಿ ಮೋದಿಯಿಂದಾಗಿ ಸಿಕ್ಕಿದ ಯೋಗವನ್ನು ಉಳಿಸಬೇಕಲ್ಲ ?

 

  • ಕಳೆದ ಮೂರು ವರ್ಷಗಳಲ್ಲಿ ನಾನು ಪ್ರಧಾನಿ ಮೋದಿ ಅವರಿಗೆ 32 ಪತ್ರಗಳನ್ನು ಬರೆದಿದ್ದೇನೆ. ಆದರೆ ಪ್ರಧಾನಿ ಕಚೇರಿಯಿಂದ ಒಂದಕ್ಕೂ ಉತ್ತರ ಬಂದಿಲ್ಲ. – ಅಣ್ಣಾ ಹಜಾರೆ (ಸಾಮಾಜಿಕ ಹೋರಾಟಗಾಗಾರ)

# ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಚರಂಡಿ ಸರಿ ಇಲ್ಲ ಎಂದು ನೀವು ಪತ್ರ ಬರೆಯುತ್ತಿದ್ದರೆ, ಪ್ರಧಾನಿಗೆ ಬಂದ ಪತ್ರಕ್ಕೆ ಉತ್ತರಿಸಲು ಸರಕಾರಿ ಸಂಬಳದಲ್ಲಿ  ನಿಯುಕ್ತಿಗೊಂಡವರು ಪ್ರಧಾನಿಯ ಹೆಸರಲ್ಲಿ ನಿಮ್ಮ ಪತ್ರಕ್ಕೆ ಉತ್ತರ ಬರೆಯುತ್ತಿದ್ದರು !

 

·         ಕಳೆದ ಐದು ತಿಂಗಳಲ್ಲಿ ದೇಣಿಗೆಯಾಗಿ ಬಿಜೆಪಿ ಬೊಕ್ಕಸಕ್ಕೆ 80 ಸಾವಿರ ಕೋಟಿ ರುಪಾಯಿ ಹರಿದು ಬಂದಿದೆ.  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಳೆದ ಮೂರು ವರ್ಷಗಳಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇರುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಇದನ್ನು ನಾನು ಹೇಳುತ್ತಿಲ್ಲ. ಏಷ್ಯಾದಲ್ಲಿ ನಡೆಸಿದ ಸಮೀಕ್ಷೆಯಿಂದ ಇದು ಬಹಿರಂಗವಾಗಿದೆ. ಫೋರ್ಬಸ್ ನಿಯತಕಾಲಿಕೆ ವರದಿ ಮಾಡಿದೆ. – ಅಣ್ಣಾ ಹಜಾರೆ (ಹಿರಿಯ ಗಾಂಧಿವಾದಿ)

 #  ಮೋದಿ ಭಕ್ತರ ಬಾಯಲ್ಲಿ ನೀವು ದೇಶದ್ರೋಹಿಯಾಗುವ, ಹಿಂದೂ ವಿರೋಧಿಯಾಗುವ ದಿನ ದೂರವಿಲ್ಲ !

 

·         ಕಳೆದ ಮೂರು ವರ್ಷಗಳಿಂದ ನಾನು ಮೌನವಾಗಿದ್ದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಸ್ವಲ್ಪ ಕಾಲವಕಾಶ ನೀಡಬೇಕು. ಹಾಗಾಗಿ ನಾನು ಮೌನವಾಗಿದ್ದೆ. ಆದರೆ ಈಗ ನಾನು ಅವರ ವಿರುದ್ಧ ಮಾತನಾಡುವ ಸಮಯ ಬಂದಿದೆ. ಮಾರ್ಚ್ 23ರಿಂದ ಜನ ಲೋಕಪಾಲ್ ಗಾಗಿ ಮತ್ತು ದೇಶದ ರೈತರಗಾಗಿ ನಾನು ಮತ್ತೊಂದು ಚಳುವಳಿ ಆರಂಭಿಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

 # ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ನೀವು ನಡೆಸಿದ ಚಳುವಳಿಯ ಹಿಂದೆ  ಸಂಘ ಪರಿವಾರವಿತ್ತು. ಈಗ ಕೇಂದ್ರದಲ್ಲಿ ಮೋದಿ ಸರಕಾರವಿದೆ. ಹಾಗಾಗಿ ಈ ಸಲದ ನಿಮ್ಮ  ಚಳುವಳಿಯ ಹಿಂದೆ ಸಂಘ ಶಕ್ತಿ ಇರಲಾರದು ಮತ್ತು ನಿಮ್ಮ ವಿರುದ್ಧ ತೆರೆಮರೆಯಲ್ಲಿ  ಅದೇ ಸಂಘಶಕ್ತಿ ತೊಡೆಕಟ್ಟಿ ಅಪಪ್ರಚಾರ ಅಭಿಯಾನ ನಡೆಸಿದರೂ ಆಶ್ಚರ್ಯ ಬೇಡ !

 

·         ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಆದಲ್ಲಿ ಅದಕ್ಕೆ ನಗರ ಪೊಲೀಸ್‌ ಆಯುಕ್ತರೇ ಹೊಣೆಯಾಗಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿ ಮದ್ಯ ನಿಷೇಧವಿಲ್ಲದೇ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ‌ ಹೊಸ ವರ್ಷಾಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ. – ಪತ್ರಿಕಾ ವರದಿ.

# ಬಲಿಪಶು

 

·         ಹೊನ್ನಾವರದ ಪರೇಶ್‌ ಮೇಸ್ತ ಹತ್ಯೆಯು ಒಬ್ಬ ವ್ಯಕ್ತಿಯ ಹತ್ಯೆಯಾಗಿರದೆ, ಹಿಂದೂ ಧರ್ಮ ಮತ್ತು ಭಾರತೀಯತೆಯ ಹತ್ಯೆಯಾಗಿದೆ. – ಶ್ರೀರಾಮಚಂದ್ರಾಪುರಮಠದ ಆಡಳಿತ ಮಂಡಳಿ.

 # ಮಹಿಳೆಯ ಅತ್ಯಾಚಾರ ಮಹಿಳಾ ಸಮೂಹದ ಮೇಲಿನ ಅತ್ಯಾಚಾರದ ಹಾಗೆ !

ಮೇಸ್ತ ತನಿಖೆ ವಿಚಾರದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಸಂದೇಹಾಸ್ಪದವಾಗಿದೆ. ಇಡೀ ಸಂಸ್ಥೆಯ ಮೇಲಿರುವ ವಿಶ್ವಾಸಾರ್ಹತೆಯನ್ನು ಜನರು ಕಳೆದುಕೊಳ್ಳುವಂತಾಗಿದೆ. – ಶ್ರೀ ರಾಮಚಂದ್ರಾಪುರ ಮಠದ ಆಡಳಿತ ಮಂಡಳಿ.

 # ರಾಘವೇಶ್ವರ ಸ್ವಾಮೀಜಿ ಸರಣಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಕಾರಣ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಂತೆ…

 

·           ಹೊನ್ನಾವರದ ಪರೇಶ್ ಮೆಸ್ತ ಸಾವಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೈವಾಡ ಇರುವ ಅನುಮಾನ ಇದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಸಿಬಿಐಗೆ ಪತ್ರ ಬರೆಯಲಾಗುವುದು. – ಸಿ.ಎಂ.ಧನಂಜಯ (ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷರು)

# ಕರಂದ್ಲಾಜೆ ಜೊತೆಗೆ ಹೆಗಡೆಯ ಹೆಸರೂ ಸೇರಿಸಿ. ಮಂಪರು ಪರೀಕ್ಷೆ ನಡೆಸಿದರೆ ಕೆಲ ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಮನೆಯೊಳಗೆ ಸಂಪುವಿಗೆ ಬಿದ್ದು ಮೃತರಾದ ಮಹಿಳೆಯ ಕೊಲೆ ಪ್ರಕರಣವೂ ಬಯಲಾದೀತು !

 

·         ರಾಜಸ್ತಾನದ ಎಲ್ಲ ಸರ್ಕಾರಿ ಇಲಾಖೆಗಳ ಲೆಟರ್‌ಹೆಡ್‌ಗಳ ಮೇಲೆ ರಾಷ್ಟ್ರ ಲಾಂಛನದ ಜತೆಗೆ ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರ ಮುದ್ರಿಸಬೇಕು. – ರಾಜಸ್ತಾನದ ಬಿಜೆಪಿ ಸರ್ಕಾರದ ಆದೇಶ.

# ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಭಾವಚಿರ್ತವನ್ನೂ ಮುದ್ರಿಸಿಬಿಡಿ !

* ಭೂಗತ ಪಾತಕಿ ಬನ್ನಂಜೆ ರಾಜನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಉಡುಪಿ ಹೆದ್ದಾರಿ ಬದಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ.

# ಉಡುಪಿಯ ಬುದ್ದಿವಂತ ಯುವಜನರಿಂದ ರೌಡಿಸಂಗೆ ಪ್ರೋತ್ಸಾಹ 

Leave a Reply

Your email address will not be published. Required fields are marked *