Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೌದು, ನೀವೇ ಆ ಘನ ಕಾರ್ಯ ಮಾಡಿ ತೋರಿಸಿ, ಮಾದರಿಯಾಗಿ !

ಉಪ್ಪಿನಕಾಯಿ-15: ಶ್ರೀರಾಮ ದಿವಾಣ

 

  • ಪರೇಶ್ ಮೇಸ್ತ ಹತ್ಯೆ ಪ್ರಕರಣದ ಹಂತಕರನ್ನು ಬಂಧಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ. – ಕೇಂದ್ರ ಮಂತ್ರಿ ರಾಜನಾಥ ಸಿಂಗ್.

# ತನಿಖಾ ಕಾರ್ಯದಲ್ಲಿ ಸಕ್ರಿಯರಾಗಬೇಕಾಗಿದ್ದ ಪೊಲೀಸರನ್ನು ಬಂದೋಬಸ್ತ್  ಕೆಲಸದಲ್ಲಿ ತೊಡಗಿಸುವಂತೆ ಮಾಡುವಲ್ಲಿ ನಿಮ್ಮ ಪಕ್ಷ ಮತ್ತು ಸಂಘ ಯಶಸ್ವಿಯಾಗಿದೆ !

 

  • ಭಯ ಹುಟ್ಟಿಸುವ ರಾಜಕಾರಣ’ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಹುಲ್‌ ಅವಕಾಶ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು. – ಪತ್ರಿಕಾ ವರದಿ.

# ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡ ಮೇಲೆ, ವ್ಯಕ್ತಿಯ ಮೇಲೆ ವಿಶ್ವಾಸ ವ್ಯಕ್ತಪಡಿಸುವುದು ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಗೆ ಮತ್ತು ರಾಹುಲ್ ಮೇಲೆ, ಬಿಜೆಪಿಗೆ ಮೋದಿ ಮೇಲೆ ವಿಶ್ವಾಸ !

 

  • ಹೊನ್ನಾವರದ ಕೊಡ್ಲಗದ್ದೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುತ್ತಿಗೆಗೆ ಚೂರಿ ಹಾಕಲು ಯತ್ನಿಸಿದ್ದಾರೆ ಎಂಬುದು ಸುಳ್ಳು. ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ತಿಳಿದು ಬಂದ ವಿಷಯ ಏನೆಂದರೆ, ಆಕೆಯ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಬಾಲಕಿಯ ಗ್ರಾಮದವನೇ ಆದ ಗಣೇಶ ಈಶ್ವರ ನಾಯ್ಕ ಎಂಬಾತ ಆಕೆಗೆ ತೊಂದರೆ ಕೊಡುತ್ತಿದ್ದ. ಈತನ ಕಿರುಕುಳದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ಬಾಲಕಿ ತನ್ನ ಕೈಗಳಿಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ. ಆಕೆಯ ಮೇಲೆ ಹಲ್ಲೆ ನಡೆದಿದೆ ಎಂಬುದು ಅಲ್ಲಿನ ಗ್ರಾಮಸ್ಥರು ಹೇಳಿದ ಸುಳ್ಳು. ಬಾಲಕಿಯ ಕೈಯ ಮೇಲಿನ ಗಾಯ ಪರಿಶೀಲಿಸಿದ ವೈದ್ಯರು ಇದು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳ ಲಕ್ಷಣವನ್ನು ಹೊಂದಿರುತ್ತದೆ ಎಂದು ದೃಢಪಡಿಸಿದ್ದಾರೆ. ಆಪ್ತ ಸಮಾಲೋಚನೆಯ ಕಾಲದಲ್ಲಿ ಬಾಲಕಿ ಸಹ ಈ ಬಗ್ಗೆ ಒಪ್ಪಿಕೊಂಡಿದ್ದು. ನ್ಯಾಯಾಲಯದ ಮುಂದೆ ಬಾಲಕಿಯ ಹೇಳಿಕೆ ದಾಖಲಿಸಲಾಗಿದೆ.  – ಉತ್ತರ ಕನ್ನಡ ಜಿಲ್ಲಾ ಪೊಲೀಸ್.

  # ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಜಯವಿಲ್ಲ, ಧ್ವೇಷದಲ್ಲಿ ಹರಡುವ ವದಂತಿಗಳಿಗೆ ಆಯುಷ್ಯವಿಲ್ಲ, ಅನಂತನ ಅವಾಂತರ ಬೆತ್ತಲಾಯಿತಲ್ಲ

 

  • ಮುಂಬೈ ದಾಳಿ ಪ್ರಕರಣದ ಅಪರಾಧಿ, ಪಾಕಿಸ್ತಾನದ ಉಗ್ರ ಅಜ್ಮಲ್‌ ಕಸಬ್‌ ಗಲ್ಲು ಶಿಕ್ಷೆಗೊಳಗಾದ ದಿನದಂದುಕಸಬ್ ತಿಥಿ ಆಚರಿಸುವವರನ್ನು ಗುಂಡಿಕ್ಕಿ ಕೊಲ್ಲಬೇಕು. – ವಜುಭಾಯಿ ವಾಲಾ (ಕರ್ನಾಟಕದ ರಾಜ್ಯಪಾಲರು)

# ಹೌದು, ನೀವೇ ಆ ಘನ ಕಾರ್ಯ ಮಾಡಿ ತೋರಿಸಿ, ಮಾದರಿಯಾಗಿ !

 

  • ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿಕೊಳ್ಳುವ ಮೋದಿ ತಮ್ಮ ಪಕ್ಷದ ಒಳಗಿರುವ ಭ್ರಷ್ಟರ ಬಗ್ಗೆ ಮಾತನಾಡುವುದಿಲ್ಲ.                        – ಕೆ.ರಾಜಶೇಖರನ್ (ಜೆಡಿಯು ಶರದ್ ಯಾದವ್ ಬಣದ ಹಂಗಾಮಿ ರಾಷ್ಟ್ರೀಯ ಅಧ್ಯಕ್ಷರು)

# ಮೌನಂ ಸಮ್ಮತ ಲಕ್ಷಣಂ !       

Leave a Reply

Your email address will not be published. Required fields are marked *