Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಹುಲ್ ಗಾಂಧಿಗೆ ಕೊಡುಗೆ ಕೊಡಲು ಕರ್ನಾಟಕದ ಮತದಾರರು ಕಾಂಗ್ರೆಸ್ ಗೆ ಓಟು ಹಾಕಬೇಕಾ ?

ಉಪ್ಪಿನಕಾಯಿ-16: ಶ್ರೀರಾಮ ದಿವಾಣ

 

  • ಗುಜರಾತ್ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಬಿಜೆಪಿಗೆ ಜನಮತ ಸಿಕ್ಕಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್‍ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. – ಪತ್ರಿಕಾ ವರದಿ.

# ಗ್ರಾಮೀಣ ಪ್ರದೇಶಗಳಲ್ಲಿ ಮತದಾರರು ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಗೆ ಅಲ್ಪ ಲಾಭವಾಗಿದೆ.

 

  • ಗುಜರಾತ್ ನಲ್ಲಿ ಬೂತ್ ಮಟ್ಟದಿಂದಲೇ ಬಿಜೆಪಿ ಮಾಡಿದ ಶಿಸ್ತಿನ ಕಾರ್ಯ ತಂತ್ರಗಳು ಫಲ ಕಂಡರೆ, ಸರಿಯಾದ ಪೂರ್ವ ಸಿದ್ದತೆ ಇಲ್ಲದೆ ಚುನಾವಣಾ ಕಣಕ್ಕೆ ಧುಮುಕಿದ್ದು ಕಾಂಗ್ರೆಸ್‍ಗೆ ಹೊಡೆತ ನೀಡಿದೆ. – ಪತ್ರಿಕಾ ವರದಿ.

# ಕಾಂಗ್ರೆಸ್ ಪಕ್ಷ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಎಂದು ಇದೆಯೇ ? ಆಶ್ಚರ್ಯ ! ಕಾಂಗ್ರೆಸ್, ಪೂರ್ವ ಸಿದ್ಧತೆ ಮಾಡಿಕೊಂಡದ್ದು ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿಸಲು ಮಾತ್ರ !!

 

  • ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿಗೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಪ್ರಥಮ ಕೊಡುಗೆ ನೀಡಲಿದೆ. – ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ.

# ರಾಹುಲ್ ಗಾಂಧಿಗೆ ಕೊಡುಗೆ ಕೊಡಲು ಕರ್ನಾಟಕದ ಮತದಾರರು ಕಾಂಗ್ರೆಸ್ ಗೆ ಓಟು ಹಾಕಬೇಕಾ ?

 

  • ಪ್ರಧಾನಿಗೆ ನನ್ನನ್ನು ಕಂಡರೆ ಭಯ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಈಗ ನರೇಂದ್ರ ಮೋದಿ ಭಯ ಶುರುವಾಗಿದೆ.     – ಬಿಜೆಪಿ ಸಂಸದ ನಳಿನ್ ಕುಮಾರ ರೈ ಕಟೀಲ್.

# ಜನರಿಗೆ ಸುಪಾರಿ ಕಿಲ್ಲರ್ ಗಳದ್ದು ಮತ್ತು ದುಷ್ಟ ರಾಜಕಾರಣಿಗಳದ್ದು ಮಾತ್ರ ಭಯ !

Leave a Reply

Your email address will not be published. Required fields are marked *