Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಕ್ಕೆ ಪಳ್ಳಿ ಗೋಕುಲದಾಸ್ ಆಯ್ಕೆ

ಉಡುಪಿ: ಉಡುಪಿಬಿಟ್ಸ್ ಡಾಟ್ ಇನ್ ಜಾಲತಾಣ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ “ಉಡುಪಿಬಿಟ್ಸ್ ಶತಮಾನದ ಶಕ್ತಿ” ಗೌರವಕ್ಕೆ ಕೊರಗ ಸಮುದಾಯದ ಮೊದಲ ಸರಕಾರಿ ಅಧಿಕಾರಿ, ಕೇರಳ-ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮೊದಲ ಅಧ್ಯಕ್ಷರು ಮತ್ತು ಲೇಖಕರಾದ ಪಳ್ಳಿ ಗೋಕುಲದಾಸ್ ಮಂಗಳೂರು ಅವರು ಪಾತ್ರರಾಗಿದ್ದಾರೆ.

ಮೂಲತಹ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಪಳ್ಳಿಯವರಾದ ಗೋಕುಲದಾಸ್ ಅವರು ಭಾರತೀಯ ಅಂಚೆ ಇಲಾಖೆಯಲ್ಲಿ ಸೀನಿಯರ್ ಪೋಸ್ಟ್ ಮಾಸ್ಟರ್ ಆಗಿ ಬೆಳಗಾವಿಯಲ್ಲಿ ನಿವೃತ್ತರಾದವರು.

ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಪ್ರಾಮಾಣಿಕತೆ, ದಕ್ಷತೆ, ಶಿಸ್ತು, ಸತ್ಯಸಂದತೆ, ಸಾಮಾಜಿಕ ಕಾಳಜಿಯ ಜತೆಗೆ ಜೀವಮಾನದಲ್ಲಿ ಶ್ರೇಷ್ಠ ಸಾಧನೆಗೈದವರನ್ನು ಗುರುತಿಸಿ ಉಡುಪಿಬಿಟ್ಸ್ ಡಾಟ್ ಇನ್ ಜಾಲತಾಣ ಸಂಸ್ಥೆಯು ಶತಮಾನದ ಶಕ್ತಿ ಗೌರವಾರ್ಪಣೆಯನ್ನು ಸಲ್ಲಿಸುತ್ತಾ ಬಂದಿದೆ.

2015ರಲ್ಲಿ ಹಿರಿಯ ಗ್ರಾಹಕ ಹಕ್ಕುಗಳ ನ್ಯಾಯವಾದಿ ಪಿ.ಆರ್.ಭಂಡಾರ್ಕರ್ ಹಾಗೂ 2016ರಲ್ಲಿ ಹಿರಿಯ ಮಾಹಿತಿ ಹಕ್ಕು ಹೋರಾಟಗಾರರಾದ ಕೆ.ಎಸ್.ಉಪಾಧ್ಯ ಅವರು ಶತಮಾನದ ಶಕ್ತಿ ಗೌರವಕ್ಕೆ ಪಾತ್ರರಾಗಿದ್ದರು.

One Comment

  1. bcmvrathiparaudupi@gmail.com'

    sunitha

    April 2, 2019 at 5:18 pm

    good luck nishmitha…..

Leave a Reply

Your email address will not be published. Required fields are marked *