Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಿಸೆಂಬರ್ 23: ಪೆರ್ವಾಜೆಯಲ್ಲಿ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ: ಜ್ಯೋತಿ ಗುರುಪ್ರಸಾದ್ ಅಧ್ಯಕ್ಷತೆ

ಉಡುಪಿ: ಕಾರ್ಕಳ ತಾಲೂಕು ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ಕವಯಿತ್ರಿ, ಲೇಖಕಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ೨೩ರಂದು ಪೆರ್ವಾಜೆ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜರುಗಲಿದೆ.

ಪೂರ್ವಾಹ್ನ ಗಂಟೆ ೮.೩೦ಕ್ಕೆ ರಾಷ್ಟ್ರಧ್ವಜಾರೋಹಣ ಮತ್ತು ಪರಿಷತ್ ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭವಾಗಲಿದೆ. ಶಾಸಕರಾದ ವಿ.ಸುನಿಲ್ ಕುಮಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದೂರದರ್ಶನದ ವಿಶ್ರಾಂತ ಮಹಾನಿರ್ದೇಶಕರಾದ ನಾಡೋಜ ಡಾ.ಮಹೇಶ್ ಜೋಷಿ ನುಡಿಚೇತನ ಸಲ್ಲಿಸಲಿದ್ದಾರೆ. ಕಸಾಪ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಜ್ಯೋತಿ ಗುರುಪ್ರಸಾದ್ ಅವರ ‘ಕಣ್ಣ ಭಾಷೆ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ.

ಬೆಳಗ್ಗೆ ಗಂಟೆ ೧೧.೧೫ಕ್ಕೆ ಸಮ್ಮೇಳನಾಧ್ಯಕ್ಷರ ಬದುಕು-ಬರೆಹ-ಸಂವಾದ ನಡೆಯಲಿದೆ. ಕುಂದಾಪುರ ಭಂಡಾರ್ಕರ್ ಕಾಲೇಜು ಕನ್ನಡ ಉಪನ್ಯಾಸಕರಾದ ಡಾ.ಅರುಣ್ ಕುಮಾರ್ ಎಸ್.ಆರ್., ಹಿರಿಯ ಲೇಖಖಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ದೇವಿಕಾ ನಾಗೇಶ್ ಹಾಗೂ ಕಥೆಗಾರ ಪ್ರಸಾದ ಶೆಣೈ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಮಧ್ಯಾಹ್ನ ಗಂಟೆ ೧೨.೧೫ಕ್ಕೆ ಯುವ ಕವಿಗೋಷ್ಠಿ ಜರುಗಲಿದೆ. ಕಾರ್ಕಳದ ಗೌತಮ ಜೋತ್ಸ್ನಾ, ಸೋಮೇಶ್ವರದ ಪ್ರಮೀಳಾ ಶೆಟ್ಟಿ, ಪೆರ್ವಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅವನೀ ಉಪಾಧ್ಯ, ನೀರೆಬೈಲೂರು ಕೊಡುಬೆಟ್ಟುವಿನ ವಿಷ್ಣು ಪ್ರಸಾದ್, ಸಚ್ಚೇರಿಪೇಟೆಯ ಸುಶಾಂತ್ ಕೋಟ್ಯಾನ್, ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಕಾವ್ಯಾ, ಕಾರ್ಕಳ ಎಸ್.ವಿ.ಟಿ.ಯ ಸಯ್ಯದ್ ಸಿಮ್ರಾನ್ ಭಾನು ಹಾಗೂ ಸಾಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಸುಶಾಂತ್ ಆಚಾರ್‍ಯ ಇವರು ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚಿಸಲಿದ್ದಾರೆ.

ಮಧ್ಯಾಹ್ನ ಗಂಟೆ ೧.೩೦ಕ್ಕೆ ಎ.ಎಸ್.ಎನ್.ಹೆಬ್ಬಾರ್ ಕುಂದಾಪುರ ಇವರಿಂದ ಹಾಸ್ಯಗೋಷ್ಠಿ, ೨.೧೫ಕ್ಕೆ ಗಣೇಶ್ ಕುಮಾರ್ ಹೆಬ್ರಿ ಮತ್ತು ಬಳಗದವರಿಂದ ಯಕ್ಷ-ಗಾನ ವೈಭವ, ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ ೩ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿಗಳಾದ ಡಾ.ಸಾರಾ ಅಬೂಬಕ್ಕರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದೆ.

 

 

Leave a Reply

Your email address will not be published. Required fields are marked *